ಹಲೋ ಸ್ನೇಹಿತರೇ, ಸರ್ಕಾರದ ಬಹುತೇಕ ಎಲ್ಲಾ ಗ್ಯಾರಂಟಿ ಯೋಜನೆಗಳು ಕೂಡ ಮಹಿಳೆಯರಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತಿದೆ. ಇದರ ಜೊತೆಗೆ ಬೇರೆ ಬೇರೆ ಯೋಜನೆಗಳ ಮೂಲಕ ಸರ್ಕಾರ ಲಿಂಗ ಸಮಾನತೆ ಕಾಯ್ದುಕೊಳ್ಳುವುದು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹಿಸುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಮಹಿಳಾ ಸಬಲೀಕರಣಕ್ಕೆ ತುಸು ಹೆಚ್ಚು ಗಮನವನ್ನು ನೀಡಲಾಗುತ್ತಿದೆ ಎನ್ನಬಹುದು.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಯೋಜನವನ್ನು ಮಹಿಳೆಯರೇ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದಾರೆ. ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಮನೆಯ ಖರ್ಚು ನಿಭಾಯಿಸುವುದಕ್ಕಾಗಿ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ರೂ. 2000 ಗಳನ್ನು ಉಚಿತವಾಗಿ ಸರ್ಕಾರ ನೀಡುತ್ತಿದೆ.
ಇದೀಗ ಈ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯ ಅಡಿಯಲ್ಲಿ 90 ಸಾವಿರ ರೂಪಾಯಿಗಳನ್ನು ಮಹಿಳೆಯರು ಪಡೆದುಕೊಳ್ಳಬಹುದು.
ಸರ್ಕಾರದಿಂದ ಉದ್ಯೋಗಿನಿ ಯೋಜನೆ
ಮಹಿಳೆಯರಿಗೆ ವಿಶೇಷವಾಗಿ ಉದ್ಯೋಗಿನಿ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಮಹಿಳೆಯರು ತಾವು ಸ್ವಂತ ಉದ್ಯಮ ಮಾಡಿ ಹಣ ಸಂಪಾದನೆ ಮಾಡಲು ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ.
ಟೈಲರಿಂಗ್, ಪಾರ್ಲರ್, ಹೋಂ ಮೇಡ್ ಫುಡ್, ಪ್ರಿಂಟಿಂಗ್ ಶಾಪ್, ಅಗರಬತ್ತಿ ತಯಾರಿಕೆ ಮೊದಲಾದ ಗುಡಿ ಕೈಗಾರಿಕೆಗಳು ಮೊದಲಾದ ಉದ್ಯಮಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರಿಗೆ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಸರ್ಕಾರ ಧನ ಸಹಾಯ ನೀಡಲಿದೆ.
ಇಂಥವರು ಅರ್ಜಿ ಸಲ್ಲಿಸಿ
- ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
- ಕರ್ನಾಟಕದ ನಿವಾಸಿ ಆಗಿರಬೇಕು
- 18ರಿಂದ 55 ವರ್ಷ ವಯಸ್ಸಿನ ಮಹಿಳೆಯರು ಅರ್ಜಿ ಸಲ್ಲಿಸಬಹುದು.
- ರಾಜ್ಯದ ಯಾವುದೇ ವರ್ಗಕ್ಕೆ ಸೇರಿದ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಪಡಿತರ ಚೀಟಿದಾರರಿಗೆ ಭರ್ಜರಿ ಘೋಷಣೆ! ಈ ಜನರಿಗೆ ಇನ್ನು 5 ವರ್ಷ ಇದೆಲ್ಲವೂ ಉಚಿತ
- ಕುಟುಂಬದವಾರ್ಷಿಕ ಆದಾಯ 1.5 ಲಕ್ಷ ಮೀರಬಾರದು
- ಸ್ವಂತ ಉದ್ಯಮ ಮಾಡುತ್ತಿರುವುದರ ಬಗ್ಗೆ ದಾಖಲೆ ಒದಗಿಸಬೇಕು
- ಬ್ಯಾಂಕ್ ನ ಸಿಬಿಲ್ ಸ್ಕೋರ್ ಚೆನ್ನಾಗಿದ್ರೆ ಹೆಚ್ಚಿನ ಪ್ರಯೋಜನ ಸಿಗಲಿದೆ.
- ಅರ್ಜಿ ಸಲ್ಲಿಸುವ ಮಹಿಳೆಯು ಈ ಹಿಂದೆ ಸಾಲವನ್ನು ತೆಗೆದುಕೊಂಡು ಮತ್ತು ತೀರಿಸದೆ ಲೋನ್ ಡೀಫಾಲ್ಟರ್ ಆಗಿರಬಾರದು.
ಉದ್ಯೋಗಿನಿ ಯೋಜನೆಯ ಸಹಾಯಧನದ ಮೊತ್ತ
ಮೂರು ಲಕ್ಷ ರೂಪಾಯಿಗಳವರೆಗೆ ಸರ್ಕಾರ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಸ್ವಂತ ಉದ್ಯಮ ಮಾಡಿಕೊಳ್ಳಲು ಸಹಾಯಧನ ನೀಡುತ್ತಿದೆ. ಸಾಮಾನ್ಯ ಮಹಿಳೆಯರಿಗೆ 90 ಸಾವಿರ ರೂಪಾಯಿಗಳವರೆಗೆ ಸಬ್ಸಿಡಿ ಸಿಗುತ್ತದೆ ಹಾಗೂ ಉಳಿದ ಹಣವನ್ನು ನಿಗದಿತ ಸಮಯದ ಒಳಗೆ ಇಎಂಐ ಮೂಲಕ ಪಾವತಿ ಮಾಡಬಹುದು.
ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ 1.50 ಲಕ್ಷಗಳ ವರೆಗೆ ಸಬ್ಸಿಡಿ ಸಿಗುತ್ತದೆ. ಬೇಗ ಸಾಲ (Loan) ಹಿಂತಿರುಗಿಸಿದರೆ ಅಂತಹ ಮಹಿಳೆಯರು 5 ಲಕ್ಷ ರೂಪಾಯಿಗಳವರೆಗೂ ಸಾಲ (Loan) ಪಡೆಯಬಹುದು.
ಉದ್ಯೋಗಿನಿ ಸಹಾಯಧನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು
- ಉದ್ಯೋಗದ ಬಗೆಗಿನ ವಿವರಗಳು
- ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿಳಾಸದ ಪುರಾವೆಗಳು (ವಿದ್ಯುತ್ ಬಿಲ್ ಮತ್ತು ಮನೆ ಕರ ರಶೀದಿ ಹಾಗೂ ಗ್ಯಾಸ್ ಬಿಲ್ ಇವುಗಳಲ್ಲಿ ಯಾವುದನ್ನಾದರೂ ಒಂದನ್ನು ಒದಗಿಸಬಹುದು)
- ರೇಷನ್ ಕಾರ್ಡ್
- ಬ್ಯಾಂಕ್ ಖಾತೆಯ ವಿವರಗಳು
ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ
ಬೇರೆ ಬೇರೆ ಬ್ಯಾಂಕ್ ಗಳು ಉದ್ಯೋಗಿನಿ ಯೋಜನೆಗೆ ಸಾಲ ಸೌಲಭ್ಯ ನೀಡುತ್ತದೆ. ಹಾಗಾಗಿಯೇ ನೀವು ಹತ್ತಿರದ ನಿಮ್ಮ ಬ್ಯಾಂಕ್ ಶಾಖೆಗೆ ಹೋಗಿ ಮಾಹಿತಿ ಪಡೆಯಬಹುದು. ಅಥವಾ ಆನ್ಲೈನ್ ನಲ್ಲಿ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
ಇತರೆ ವಿಷಯಗಳು:
ಮದ್ಯ ಪ್ರಿಯರಿಗೆ ನೆಮ್ಮದಿಯ ನಿಟ್ಟುಸಿರು.! ಎಣ್ಣೆ ಇನ್ಮೇಲೆ ಸಿಕ್ಕಾಪಟ್ಟೆ ಅಗ್ಗ
ಕೆಸಿಸಿ ರೈತರ ಸಂಪೂರ್ಣ ಸಾಲ ಮನ್ನಾ! ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್ ಮಾಡಿ