rtgh

ಗ್ಯಾರಂಟಿ ಅವಶ್ಯಕತೆ ಇಲ್ಲ, 2 ಲಕ್ಷದವರೆಗೆ ಸಾಲ ಸೌಲಭ್ಯ; ಸರ್ಕಾರದ ಹೊಸ ಸ್ಕೀಮ್

ಹಲೋ ಸ್ನೇಹಿತರೇ, ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಹೊಲಿಗೆ ತರಬೇತಿ ಪಡೆದುಕೊಂಡು ಮನೆಯಲ್ಲಿಯೇ ಇರುವವರು ಅಥವಾ ಈಗಾಗಲೇ ಹೊಲಿಗೆ ಕೆಲಸ ಮಾಡುತ್ತಿರುವವರು ಈ ಸಾಲ ಸೌಲಭ್ಯ ಪಡೆದುಕೊಂಡು ತಮ್ಮ ಉದ್ಯಮವನ್ನು ಇನ್ನಷ್ಟು ಬೆಳೆಸಬಹುದು. ಹೊಲಿಗೆ ಮಾತ್ರವಲ್ಲದೆ ಇನ್ನೂ ಇತರ 18 ಸ್ವಂತ ಉದ್ಯೋಗಕ್ಕೆ ಈ ಸಾಲ ಸೌಲಭ್ಯ ನೆರವಾಗಲಿದೆ. ಇದು ವಿಶೇಷವಾಗಿ ಮಹಿಳೆಯರಿಗೆ ಮೀಸಲಾಗಿರುವ ಸಾಲ ಸೌಲಭ್ಯದ ಯೋಜನೆ ಆಗಿದ್ದು ಮಹಿಳೆಯರಿಗೆ ಸ್ವಾವಲಂಬಿ ನಡೆಸಲು ಸಹಾಯ ಮಾಡುತ್ತದೆ.

Vishwakarma Yojana

ವಿಶ್ವಕರ್ಮ ಯೋಜನೆ 2024

ಈ ಯೋಜನೆಯ ಅಡಿಯಲ್ಲಿ ಮಹಿಳೆಯರು, 2 ಲಕ್ಷ ರೂಪಾಯಿಗಳನ್ನು ಕೇವಲ 5% ಬಡ್ಡಿ ದರ ದಲ್ಲಿ ಸಾಲವಾಗಿ ಪಡೆಯಬಹುದು. ಮೊದಲಿಗೆ ಒಂದು ಲಕ್ಷ ರೂಪಾಯಿಗಳನ್ನು ಸಾಲವಾಗಿ ನೀಡಲಾಗುತ್ತದೆ ಹಾಗೂ ಅದನ್ನು 18 ತಿಂಗಳುಗಳ ಒಳಗೆ ಮರುಪಾವತಿ ಮಾಡಿದರೆ ಎರಡನೇ ಹಂತದಲ್ಲಿ ಮತ್ತೆ ಒಂದು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುತ್ತದೆ. ಇದಕ್ಕೆ 30 ತಿಂಗಳು ಮರುಪಾವತಿ ಅವಧಿ ನೀಡಲಾಗಿದೆ.

ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ. ಇದಕ್ಕೆ ಸರ್ಕಾರವೇ ಗ್ಯಾರಂಟಿ ಒದಗಿಸುತ್ತದೆ. ನೀವು ನೇರವಾಗಿ ಬ್ಯಾಂಕ್ ಗೆ ಹೋಗಿ, ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ಇರುವ ದಾಖಲೆಗಳನ್ನು ನೀಡಿ ಸಾಲ ಸೌಲಭ್ಯ ಪಡೆಯಬಹುದು. ಅಥವಾ ಆನ್ಲೈನಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಸಹ ಓದಿ : ಮನೆಗೆ ಸೋಲಾರ್‌ ಅಳವಡಿಸಲು ಸರ್ಕಾರದ ಉಚಿತ ಸೌರ ಫಲಕ! 25 ವರ್ಷ ಉಚಿತ ವಿದ್ಯುತ್‌

ಸಾಲದ ಜೊತೆಗೆ ತರಬೇತಿ:

ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಲು ಬಯಸುವವರಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಸಾಲ ಕೊಡುವುದು ಮಾತ್ರವಲ್ಲದೆ ಅಗತ್ಯ ಇರುವವರಿಗೆ ಕೌಶಲ್ಯ ತರಬೇತಿ ಕೂಡ ನೀಡಲಾಗುವುದು.


ಸ್ವಉದ್ಯೋಗವನ್ನು ಬೆಳೆಸಲು ತರಬೇತಿಯ ಜೊತೆಗೆ ಮಾರುಕಟ್ಟೆಯ ವ್ಯವಹಾರದ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲದೆ ಮಾರುಕಟ್ಟೆ ವ್ಯವಹಾರಕ್ಕೆ ಸಹಕರಿಸಲಾಗುವುದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು:

  • ರೇಷನ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಯ ವಿವರ (ಇ-ಕೆವೈಸಿ ಕಡ್ಡಾಯ)
  • ಪಾಸ್ ಪೋರ್ಟ್ ಅಳತೆಯ ಫೋಟೋ

ಇತರೆ ವಿಷಯಗಳು:

ಜಾನುವಾರು ಸಾಕಣೆದಾರರಿಗೆ ಸರ್ಕಾರದ ಸಹಾಯಹಸ್ತ! ಅತೀ ಕಡಿಮೆ ಬಡ್ಡಿದರದಲ್ಲಿ 3 ಲಕ್ಷ ಸಾಲ ಸೌಲಭ್ಯ

ಆವಾಸ್‌ ಯೋಜನೆಯ ಹೊಸ ಪಟ್ಟಿ ಬಿಡುಗಡೆ! ಹೆಸರಿದ್ದವರ ಖಾತೆಗೆ ಬರುತ್ತೆ 1 ಲಕ್ಷದ 20 ಸಾವಿರ

ಗೃಹಲಕ್ಷ್ಮಿಯರಿಗೆ 5ನೇ ಕಂತಿನ ಹಣ ಬಂತಾ? ಸ್ಟೇಟಸ್ ಚೆಕ್ ಮಾಡೋಕೆ ಇಲ್ಲಿದೆ ಸುಲಭ ಮಾರ್ಗ

Leave a Comment