rtgh

ಯುವನಿಧಿ ಯೋಜನೆಗೆ ಸುಳ್ಳು ಮಾಹಿತಿ ನೀಡಿದ್ರೆ ಎಚ್ಚರ! ನಿಮ್ಮ ವಿರುದ್ಧ ಕೇಸ್ ಫಿಕ್ಸ್

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾಗಿ ಯುವನಿಧಿ ಯೋಜನೆ ಜಾರಿಗೊಳಿಸಲಾಗಿದೆ. ಡಿ.26 ರಿಂದಲೇ ನೋಂದಣಿ ಆರಂಭಗೊಂಡಿದೆ. ಹೀಗೆ ಯೋಜನೆಗೆ ನೋಂದಾಯಿಸಿಕೊಂಡಂತ ಡಿಪ್ಲೋಮಾ, ಪದವೀಧರರಿಗೆ ಇನ್ನೆರಡೇ ವಾರದಲ್ಲಿ ಖಾತೆಗೆ ಹಣ ಜಮಾ ಆಗಲಿದೆ. ಆದರೆ ಯೋಜನೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಗಾಗಿದೆ.

yuva nidhi scheme scheme

ರಾಜ್ಯಾದ್ಯಂತ 5,29,123 ಪದವೀಧರರು ಮತ್ತು ಡಿಪ್ಲೊಮಾ ಶಿಕ್ಷಣ ಪಡೆದಿರುವರು ಇದ್ದಾರೆ ಎಂದು ಉನ್ನತ ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಆಧಾರದ ಮೇಲೆ ಕರ್ನಾಟಕ ಸರ್ಕಾರ ತಿಳಿಸಿದೆ. ಯುವ ನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿ ಯುವಕರು ಪ್ರತಿ ತಿಂಗಳು 3000 ರೂ., ಡಿಪ್ಲೊಮಾ ಹೊಂದಿರುವವರು 1,500 ರೂ. ಪಡೆಯಲಿದ್ದಾರೆ. ಇದು ಕಾಂಗ್ರೆಸ್‌ ಸರ್ಕಾರದ 5ನೇ ಗ್ಯಾರಂಟಿ ಯೋಜನೆಯಾಗಿದ್ದು, ಪ್ರತಿ ತಿಂಗಳು ಈ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆ ಮಾಡಲಾಗುವುದು ಎಂದು ಹೇಳಿದೆ. ಆದ್ರೇ ನೀವು ಸುಳ್ಳು ಮಾಹಿತಿ ನೀಡಿದ್ರೇ ನಿಮಗೆ ನೀಡಲಾಗಿರೋ ಹಣ ವಾಪಾಸ್ ಪಡೆಯಲಾಗುತ್ತೆ. ಜೊತೆಗೆ ನಿಮ್ಮ ವಿರುದ್ಧ ಕೇಸ್ ಕೂಡ ಹಾಕಲಾಗುತ್ತದೆ.

ಹೌದು.. ಯುವನಿಧಿ ಯೋಜನೆಗೆ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ. 2022-23ನೇ ಸಾಲಿನಲ್ಲಿ ಡಿಪ್ಲೋಮಾ, ಪದವಿ ಮುಗಿಸಿದ ನಂತ್ರ, ಉದ್ಯೋಗಕ್ಕೆ ಸೇರದೆ ಇರೋರು ಮಾತ್ರವೇ ಈ ಯೋಜನೆಗೆ ಅರ್ಜಿ ಸಲ್ಲಿಸೋದಕ್ಕೆ ಅವಕಾಶವಿದೆ.

ಇದನ್ನೂ ಸಹ ಓದಿ : 2024 ರಲ್ಲಿ ಶಾಲೆಗಳು ಇಷ್ಟು ದಿನ ಕ್ಲೋಸ್! ರಜೆಯ ಪಟ್ಟಿ ಬಿಡುಗಡೆ

ಒಂದು ವೇಳೆ ನೀವು ಡಿಪ್ಲೋಮಾ, ಪದವಿ ಮುಗಿಸುತ್ತಲೇ ಕೆಲಸಕ್ಕೆ ಸೇರಿದ್ರೂ, ನಿರುದ್ಯೋಗಿಗಳು ಅಂತ ಯುವನಿಧಿ ಯೋಜನೆಯ ಅಡಿಯಲ್ಲಿ ನಿರುದ್ಯೋಗ ಭತ್ಯೆಗೆ ಅರ್ಜಿ ಸಲ್ಲಿ, ಪಡೆದ್ರೇ, ಆ ಬಳಿಕ ವಿಷ್ಯ ಗೊತ್ತಾದ್ರೇ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿದೆ. ಇದಷ್ಟೇ ಅಲ್ಲದೇ ನೀವು ಉದ್ಯೋಗದಲ್ಲಿದ್ದೂ, ಯುವನಿಧಿ ಯೋಜನೆ ಹಣವನ್ನು ಪಡೆದಿದ್ರೇ ಆ ಹಣವನ್ನು ವಾಪಾಸ್ ವಸೂಲಿ ಮಾಡೋದಕ್ಕೂ ಕ್ರಮ ಕೈಗೊಳ್ಳಲಾಗುತ್ತದೆ ಅಂತ ತಿಳಿಸಿದೆ.


ಅಂದಹಾಗೇ ಡಿ.26ರಿಂದ ಯುವನಿಧಿ ಯೋಜನೆಗೆ ನೋಂದಣಿ ಆರಂಭಕ್ಕೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದರು. ಜನವರಿ.12ರಂದು ಶಿವಮೊಗ್ಗದಲ್ಲಿ ಬೃಹತ್ ಕಾರ್ಯಕ್ರಮದ ಮೂಲಕ ಯುವನಿಧಿ ಯೋಜನೆಯಡಿ ಡಿಪ್ಲೋಮಾದಾರರಿಗೆ 1,500 ಹಾಗೂ ಪದವೀಧರರಿಗೆ 3000 ಪ್ರತಿ ತಿಂಗಳು ನೀಡುವಂತ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ.

ಇತರೆ ವಿಷಯಗಳು:

ಜನರ ಖಾತೆಗೆ ಸರ್ಕಾರ ರೂ.10,000 ಜಮಾ! ಬೇಗ ಬೇಗ ಚೆಕ್‌ ಮಾಡಿ

ಪಡಿತರ ಚೀಟಿದಾರರಿಗೆ ಭರ್ಜರಿ ಘೋಷಣೆ! ಈ ಜನರಿಗೆ ಇನ್ನು 5 ವರ್ಷ ಇದೆಲ್ಲವೂ ಉಚಿತ

ಕನಸಿನ ಮನೆ ನಿರ್ಮಾಣಕ್ಕೆ ಸರ್ಕಾರದ ಕೊಡುಗೆ! ಆದರೆ ಈ ಜನರಿಗೆ ಮಾತ್ರ ಉಚಿತ ಮನೆ ಸಿಗಲ್ಲ

Leave a Comment