ಹಲೋ ಸ್ನೇಹಿತರೇ, ಜ1, 2024 ರಿಂದ ಜಾರಿಗೆ ಬರುವಂತೆ ಸರ್ಕಾರಿ ನೌಕರರಿಗೆ ಶೇಕಡಾ 50 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುವುದು. ಡಿ. AICPI ಸೂಚ್ಯಂಕದ ಆಧಾರದ ಮೇಲೆ ಇದನ್ನು ಜನವರಿ 30 ರೊಳಗೆ ಬಿಡುಗಡೆ ಮಾಡಲಾಗುತ್ತದೆ. ಎಷ್ಟು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ನಮ್ಮ ಲೇಖನದ ಮೂಲಕ ತಿಳಿಯಿರಿ.
ಕೇಂದ್ರ ನೌಕರರು & ಪಿಂಚಣಿದಾರರಿಗೆ ದೊಡ್ಡ ಸುದ್ದಿಯಿದೆ. ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.3ರಿಂದ 4ರಷ್ಟು ಏರಿಕೆಯಾಗಲಿದೆ. ಕಾರ್ಮಿಕ ಸಚಿವಾಲಯವು ಬಿಡುಗಡೆ ಮಾಡಿರುವ ಜುಲೈ-ನವೆಂಬರ್ AICPI ಸೂಚ್ಯಂಕ ದತ್ತಾಂಶವನ್ನು ಆಧರಿಸಿ ಈ ಲೆಕ್ಕಾಚಾರವನ್ನು ಅಂದಾಜು ಮಾಡಲಾಗಿದೆ. ಡಿ. ಅಂಕಿಅಂಶಗಳು ಜ. 30 ರಂದು ಬಿಡುಗಡೆಯಾಗುತ್ತದೆ. ಇದಾದ ನಂತರ ಎಷ್ಟು ಪ್ರಮಾಣದಲ್ಲಿ ತುಟ್ಟಿಭತ್ಯೆ ಏರಿಕೆಯಾಗುವುದು ಎನ್ನುವ ಅಂಶ ಸ್ಪಷ್ಟವಾಗುತ್ತದೆ.
ತುಟ್ಟಿಭತ್ಯೆಯಲ್ಲಿ 50 ಪ್ರತಿಶತ ಏರಿಕೆ:
ಕಳೆದ ವರ್ಷ 2023, ಜ & ಜುಲೈ ಸೇರಿದಂತೆ ಒಟ್ಟು 8% ದಷ್ಟು ಡಿಎ ಏರಿಕೆಯಾಗಿದ್ದು. ಜುಲೈನಿಂದ ಡಿಸೆಂಬರ್ 2023 ರವರೆಗಿನ AICPI ಸೂಚ್ಯಂಕ ಡೇಟಾವನ್ನು ಅವಲಂಬಿಸಿ ಮುಂದಿನ ಡಿಎಯನ್ನು ಜನವರಿ 2024 ರಿಂದ ಪರಿಷ್ಕರಿಸಲಾಗುವುದು. ನವೆಂಬರ್ ವೇಳೆಗೆ, ಈ ಅಂಕಿ ಅಂಶ 139.1 ತಲುಪಿದ್ದು, ಡಿಎ ಸ್ಕೋರ್ ಶೇಕಡಾ 49.68ಕ್ಕೆ ತಲುಪಿದೆ. ಆದ್ದರಿಂದ ಡಿಎಯಲ್ಲಿ ಶೇಕಡಾ 4% ಹೆಚ್ಚಳ ಖಚಿತ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕೇಂದ್ರ ನೌಕರರು 46% ಡಿಎ ಲಾಭವನ್ನು ಪಡೆಯುತ್ತಿದ್ದಾರೆ. ಇದೀಗ 4% ಹೆಚ್ಚಳವಾದರೆ ತುಟ್ಟಿಭತ್ಯೆ 50% ಕ್ಕೆ ಏರುತ್ತದೆ. ಮುಂದಿನ ಡಿಎ ಜನವರಿ 2024 ರಿಂದ ಏರಿಕೆಯಾಗುವುದು. ಇದು ಮುಂದಿನ ಜೂನ್‌ವರೆಗು ಅನ್ವಯಿಸುತ್ತದೆ. ಹೋಳಿ, ಲೋಕಸಭೆ ಚುನಾವಣೆ ದಿನಾಂಕ & ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಹೊಸ ದರಗಳು ಯಾವಾಗ ಬೇಕಾದರೂ ಪ್ರಕಟವಾಗಬಹುದು ಎಂದು ಹೇಳಲಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, DA 50% / 51% ತಲುಪಿದರೆ, ನೌಕರರ ವೇತನವನ್ನು ಪರಿಷ್ಕರಿಸಲಾಗುತ್ತದೆ. 7 ನೇ ವೇತನ ಆಯೋಗದ ರಚನೆಯೊಂದಿಗೆ, DA ಅನ್ನು ಪರಿಷ್ಕರಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ನಿರ್ಧರಿಸಿದ್ದು. ಈ ಹಿನ್ನೆಲೆಯಲ್ಲಿ DA 50% ತಲುಪಿದಾಗ ಅದನ್ನು ಮೂಲ ವೇತನಕ್ಕೆ ಸೇರಿಸಲಾಗುವುದು. ಇದಾದ ನಂತರ ತುಟ್ಟಿಭತ್ಯೆಯನ್ನು ಶೂನ್ಯದಲ್ಲಿ ಲೆಕ್ಕಾಚಾರ ಮಾಡಲಾಗುವುದು.
ಡಿಎ-ಎಚ್‌ಆರ್‌ಎ ಭತ್ಯೆಯಲ್ಲಿಯೂ ಏರಿಕೆ ಸಾಧ್ಯ:
ತುಟ್ಟಿಭತ್ಯೆ ಹೆಚ್ಚಳದ ಜತೆಗೆ ಕೇಂದ್ರದ ಮೋದಿ ಸರ್ಕಾರ ಮನೆ ಬಾಡಿಗೆಯ ಭತ್ಯೆಯನ್ನೂ ಶೇ.3ರಷ್ಟು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ. ಇದಾದ ಬಳಿಕ HRA ಶೇ.27ರಿಂದ 30ಕ್ಕೆ ಹೆಚ್ಚಾಗಲಿದೆ. ಇದರೊಂದಿಗೆ ಗ್ರೇಡ್ ಗೆ ಅನುಸಾರವಾಗಿ ಪ್ರಯಾಣ ಭತ್ಯೆಯಲ್ಲಿ ಕೂಡಾ ಏರಿಕೆಯಾಗಲಿದೆ.
ಇತರೆ ವಿಷಯಗಳು
ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ : ಗ್ರಾಂಗೆ 3,800 ರೂ. ಇಳಿಕೆ ಕಂಡ ಬಂಗಾರ
1 ಕೋಟಿ ನೌಕರರ ಸಂಬಳದಲ್ಲಿ ಬಂಪರ್ ಜಿಗಿತ!! ಈಗ ಹೆಚ್ಚುವರಿ 49,420 ರೂ ಖಾತೆಗೆ ಬರಲಿದೆ