ಹಲೋ ಸ್ನೇಹಿತರೇ, ಇನ್ನೇನು ಈ ವರ್ಷ ಅಂತಿಮ ಹಂತಕ್ಕೆ ತಲುಪಿದೆ ಮತ್ತೆ ಹೊಸ ವರುಷದತ್ತ ನಾವೆಲ್ಲರು ಕಾಲಿಡುತ್ತೇವೆ ಹಾಗಾಗಿ ಈ ಹೊಸ ವರ್ಷದ ಆರಂಭದ ದಿನಕ್ಕೆ ಅನೇಕ ಸಂಗತಿಗಳು ಬದಲಾವಣೆಯಾಗಲಿದೆ ಅಂತಹ ಒಂದು ವಿಚಾರದಲ್ಲಿ ಸಂಚಾರ ನಿಯಮ ಕೂಡ ಒಂದಾಗಿದೆ. ಹೊಸ ಬದಲಾವಣೆ ಏನು ಎಂಬುದನ್ನು ಲೇಖನದಲ್ಲಿ ತಿಳಿಯಿರಿ.
ಬೆಂಗಳೂರಿನಲ್ಲಿ ಡಿಸೆಂಬರ್ 31 ರಿಂದ ಜ.1 ರಂದು ಸಂಚಾರ ವ್ಯವಸ್ಥೆ ಬಹುಮಟ್ಟಿಗೆ ಬದಲಾಗಲಿದೆ. ರಾಜ್ಯದಲ್ಲಿ ಹೊಸ ವರ್ಷಕ್ಕೆ ಈ ಹೊಸ ನಿಯಮಗಳ ಪಾಲನೆ ಕಡ್ಡಾಯ.
ರಾಜಧಾನಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ತಡೆಯಲು ಕೆಲ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮೂಲಕ MG Road, ಬ್ರಿಗೇಡ್ ರಸ್ತೆ, Church Street, ಸೈಂಟ್ ಮಾರ್ಕ್ಸ್ ರಸ್ತೆ, Rest House Road, ರೆಸಿಡೆನ್ಸಿ ರಸ್ತೆ ವಾಹನ ಸಂಚಾರ ಮತ್ತು ನಿಲುಗಡೆ ಮೇಲೆ ಕೆಲ ನಿರ್ಬಂಧ ವಿಧಿಸಲಾಗುತ್ತದೆ. ಕೆಲವು ಭಾಗದಲ್ಲಿ ನೋ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಡಿ. 31 ಹಾಗೂ ಜ. 1 ರ ಅವಧಿಗೆ ಈ ನಿಯಮ ಕಡ್ಡಾಯವಾಗಿ ಪಾಲಿಸಲೇಬೇಕು. ಒಂದು ವೇಳೆ ನೀವು ಪಾರ್ಕ್ ಮಾಡಿದ್ದರೂ ಡಿ. 31 ರ ಸಂಜೆ 4 ಗಂಟೆಗೆ ತೆರವು ಗೊಳಿಸಬೇಕಾಗುತ್ತದೆ ಇಲ್ಲವಾದರೆ ದಂಡ ಕಟ್ಟಬೇಕು. ಇಷ್ಟು ಮಾತ್ರವಲ್ಲದೇ ಬೆಂಗಳೂರಿನ ಹಲವು ಮಾರ್ಗದಲ್ಲಿ ಬದಲಿ ಮಾರ್ಗ ಸೂಚನೆ ನೀಡಲಾಗಿದೆ ಈ ನಿಯಮ ಕೂಡ ಪಾಲಿಸಬೇಕು.
ಹೊಸ ವರ್ಷ ಬಂತು ಎಂದಾಗ ಗುಂಡು ತುಂಡಿನ ಪಾರ್ಟಿ ಜೋರಾಗಿ ಇರುತ್ತದೆ. ಹಾಗೆಂದು ಪೂರ್ತಿ ಕುಡಿದು ಓಲಾಡ್ತಾ ವಾಹನ ಚಲಾಯಿಸಿದ್ರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ರಾಜ್ಯದಲ್ಲಿ ಸಾರಿಗೆ ವಿಚಾರದಲ್ಲಿ ಸಂಚಾರ ನಿಯಮ ಕಟ್ಟು ನಿಟ್ಟಾಗಿ ಪಾಲಿಸಲು ವ್ಯವಸ್ಥೆ ಮಾಡಲಾಗಿದೆ. ಮದ್ಯಪಾನ ಮಾಡಿ ಡ್ರೈವ್ ಮಾಡುವವರ ವಿರುದ್ಧ ಕಠಿಣ ಕ್ರಮ ಜಾರಿಗೆ ತರಲು ಸರ್ಕಾರ ಚಿಂತಿಸಿದೆ.
ಸಿಗ್ನಲ್ ಜಂಪ್ ಮಾಡುವುದು, ಓವರ್ speed ಹೋಗುವುದು, ಸೀಟ್ ಬೆಲ್ಟ್ ಹಾಕದೇ ಇರುವುದು ಹೆಲ್ಮೆಟ್ ಹಾಕದೇ ಇರುವುದು, ಪೊಲೀಸರ ಜೊತೆ ಕೆಟ್ಟ ವರ್ತನೆ ಇನ್ನೂ ಅನೇಕ ವಿಚಾರಕ್ಕೆ ಸಂಬಂಧಿಸಿದ ನಿಯಮಗಳು ಈಗ ಮತ್ತಷ್ಟು ಬಿಗಿಗೊಳಿಸಲಾಗಿದೆ. DL, RC Registration ಇದ್ದೂ ವಾಹನ ತಪಾಸಣೆ OR ವ್ಯಕ್ತಿಗೆ ಪೊಲೀಸರು ಪ್ರಶ್ನೆ ಮಾಡಿ ಅವರೊಂದಿಗೆ ಸರಿಯಾಗಿ ವರ್ತಿಸದೆ ಇದ್ದಲ್ಲಿ ಕೂಡ ಶಿಕ್ಷೆ ವಿಧಿಸಲಾಗುವುದು ಹಾಗಾಗಿ ಈ ಬಗ್ಗೆ ಎಚ್ಚೆತ್ತುಕೊಳ್ಳಿ
ಇತರೆ ವಿಷಯಗಳು
ಆವಾಸ್ ಯೋಜನೆಯಲ್ಲಿ ದೊಡ್ಡ ಬದಲಾವಣೆ; ಅಪ್ಲೇ ಮಾಡುವ ಮುನ್ನ ಈ ಮಾನದಂಡ ಗಮನಿಸಿ
ರೈತರಿಗೆ ಜೀರೋ ಬಡ್ಡಿಯಲ್ಲಿ 5 ಲಕ್ಷ ಸಾಲ.! ಮಧ್ಯಮಾವಧಿ & ದೀರ್ಘಾವಧಿ ಸಾಲದ ಮಿತಿ ಹೆಚ್ಚಳಕ್ಕೆ ಸಿಎಂ ಸೂಚನೆ