rtgh

ವಸತಿ ಯೋಜನೆಯಡಿ‌ ಸಿಗಲಿದೆ 1 ಲಕ್ಷಕ್ಕೆ ಮನೆ.! ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾದ ವೆಬ್‌ಸೈಟ್‌ ಲಿಂಕ್

ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಅಡಿಯಲ್ಲಿ ಪ್ರಧಾನ ಮಂತ್ರಿ ಆವಾಸ್ ವಸತಿ ಯೋಜನೆ ಅಡಿಯಲ್ಲಿ 52,189 ಮನೆಗಳು ನಿರ್ಮಾಣಗೊಳ್ಳುತಿದ್ದು ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯಿರಿ.

rajiv gandhi housing corporation

ಈ ಕುರಿತು ಸರ್ಕಾರದ ವಾರ್ತಾ ಇಲಾಖೆಯ ಎಕ್ಸಾ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು ಒಟ್ಟು ಮನೆ ನಿರ್ಮಾಣಕ್ಕೆ 7.5 ಲಕ್ಷ ಖರ್ಚಾಗಲಿದೆ ಕೇಂದ್ರ ಸರ್ಕಾರ 3.5 ಲಕ್ಷ ವೆಚ್ಚ ಭರಿಸುತ್ತದೆ & ರಾಜ್ಯ 3 ಲಕ್ಷ ಭರಿಸಲಿದೆ ಉಳಿಕೆ 1 ಲಕ್ಷ ಹಣವನ್ನು ಫಲಾನುಭವಿಗಳು ಪಾವತಿ ಮಾಡಬೇಕಾಗುತ್ತದೆ ಎಂದು ಮಾಹಿತಿ ತಿಳಿಸಲಾಗಿದೆ.

ಅರ್ಹತೆಗಳು

(1) ಕಡ್ಡಾಯವಾಗಿ ಮಹಿಳೆ ಅರ್ಜಿದಾರರಾಗಿರಬೇಕು. ವಿವಾಹಿತ/ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಮಾಜಿ ಯೋಧರು, ವಿಧುರರು, ಅಂಗವಿಕಲರು & ಹಿರಿಯ ನಾಗರಿಕರಾಗಿದ್ದರೆ ಪುರುಷರು ಕೂಡ ಅರ್ಹರಾಗಿರುತ್ತಾರೆ.

(2) ಅರ್ಜಿದಾರರ ಕುಟುಂಬ ಆರ್ಥಿಕವಾಗಿ & ಸಾಮಾಜಿಕವಾಗಿ ಹಿಂದುಳಿದಿದ್ದು ವಾರ್ಷಿಕ ಆದಾಯವು ರೂ. 32000/- ಕ್ಕಿಂತ ಕಮ್ಮಿ ಇರಬೇಕು.

(3) ಅರ್ಜಿದಾರರ ಕುಟುಂಬ ವಸತಿರಹಿತವಾಗಿರಬೇಕು, ಅರ್ಜಿದಾರರು/ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆಯನ್ನು ಹೊಂದಿರಲೇಬಾರದು, ಶಿಥಿಲಗೊಂಡ ಮನೆ /ಗುಡಿಸಲಿನಲ್ಲಿ ವಾಸಿಸುತ್ತಿರುವವರು ಇದಕ್ಕೆ ಅರ್ಹರಾಗಿರಲಿದ್ದಾರೆ.


(4) ಅರ್ಜಿದಾರರು ಸ್ವಂತ ನಿವೇಶನ ಹೊಂದಿದ್ದು ನಿವೇಶನಕ್ಕೆ ಸಂಬಂಧಿಸಿದಂತೆ ಖಾತೆ ಹೊಂದಿರಬೇಕಾಗುತ್ತದೆ

5) ಬೇರೆ ಯಾವುದೇ ಯೋಜನೆ ಅಥವಾ ಇಲಾಖೆಯಿಂದ ಈಗಾಗಲೇ ವಸತಿ ಸೌಲಭ್ಯವನ್ನು ಪಡೆದಿರಬಾರದು.

(6) ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರದಿಂದ ನೀಡಲಾದ ಸಾಮಾಜಿಕ, ಆರ್ಥಿಕ & ಜಾತಿ ಜನಗಣತಿ 2011ರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿರಬೇಕು.

(7) ಡಾ.ಬಿ.ಆರ್. ಅಂಬೇಡ್ಕರ್ ವಸತಿ ಯೋಜನೆಯಡಿ ವಸತಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿ & ಪರಿಶಿಷ್ಟ ವರ್ಗಕ್ಕೆ ಸೇರಿದವರಾಗಿರಬೇಕಾಗುತ್ತದೆ. ಈ ವರ್ಗದ ವಸತಿ ಇಲ್ಲದವರಿಗೆ ಬೇಡಿಕೆಯ ಆಧಾರದ ಮೇಲೆ ವಸತಿ ಕಲ್ಪಿಸಲಾಗುವುದು. (2017-18)

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

Step-1: ಮೊದಲಿಗೆ ವಸತಿ ಯೋಜನೆ ಅಪ್ಲಿಕೇಶನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಭೇಟಿ ನೀಡಿ.

Step-2: ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಿಬೇಕು.

Step-3: ವಲಯ, ವಾರ್ಡ್ ಸಂಖ್ಯೆ ಮತ್ತು ಪ್ರಸ್ತುತ ವಿಳಾಸದ ಜೊತೆಗೆ ಪಿನ್ ಸಂಖ್ಯೆ ನಮೂದಿಸಿಬೇಕು.

Step-4: ಆಧಾರ್ ಸಂಖ್ಯೆ, ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿಬೇಕು.

Step-5: ಪಡಿತರ ಚೀಟಿಯ ಸಂಖ್ಯೆ ನಮೂದಿಸಿ ನಂತರ ಪಡಿತರ ಚೀಟಿಯಲ್ಲಿವ ವ್ಯಕ್ತಿಗಳ ವಿವರಗಳು ಕಾಣಿಸುತ್ತದೆ, ಆ ಸಂದರ್ಭದಲ್ಲಿ ಯಾವ ವ್ಯಕ್ತಿಯ ಹೆಸರಿನಲ್ಲಿ ಅರ್ಜಿಯನ್ನು ಸಲ್ಲಿಸಬೇಕು ಎಂದು ತಿಳಿದು ಅವರ ಹೆಸರಿನ ಮುಂದೆ ಇರುವ ಚೆಕ್ Box ಅನ್ನು ಆಯ್ಕೆ ಮಾಡಬೇಕು.

Step-6: ಜಾತಿ & ಆದಾಯ ಪತ್ರ RD ಸಂಖ್ಯೆಯನ್ನು ನಮೂದಿಸಬೇಕು (ಸೂಚನೆ: ಆದಾಯ ಮಿತಿ 3 ಲಕ್ಷಕ್ಕಿಂತ ಕಡಿಮೆ ಇರತಕ್ಕದ್ದು).

Step-7: ಅರ್ಜಿದಾರನು ಯಾವುದೇ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸಿದರೆ ಪೂರಕ ಮಾಹಿತಿ ನಮೂದಿಬೇಕು.

Step-8: ಅರ್ಜಿದಾರರು ಬೆಂಗಳೂರು ಜಿಲ್ಲೆಯಲ್ಲಿ ವಾಸಿಸುವ ಅವಧಿಯನ್ನು ಆಯ್ಕೆಮಾಡಿ, ವಾಸಸ್ಥಳದ RD ಸಂಖ್ಯೆಯನ್ನು ನಮೂದಿಸಿ ಮುಂದುವರೆಬೇಕಾಗುತ್ತದೆ.

Step-9:  ಅರ್ಜಿದಾರರ ಬ್ಯಾಂಕ್ಗೆ ಸಂಬಂಧಿಸಿದ ವಿವರವನ್ನು ನಮೂದಿಸಬೇಕು.

Step-10: ಅರ್ಜಿದಾರನ ಉದ್ಯೋಗ ಸ್ಥಿತಿ ಆಯ್ಕೆ ಮಾಡಿ ಸೇವ್ ಬಟನ್ ಕ್ಲಿಕ್ ಮಾಡಿ.

Step-11: ಸೇವ್ ಬಟನ್ ಕ್ಲಿಕ್ ಮಾಡುವ ಮೊದಲು ದಯವಿಟ್ಟು ಮೇಲೆ ತಿಳಿಸಿದ ವಿವರಗಳು ಸರಿಯಾಗಿದೆಯೇ ಎಂದು ಮತ್ತೊಮ್ಮೆ ಪರಿಶೀಲಿಸಿ.

Step-12: ಅರ್ಜಿದಾರರು ಅರ್ಜಿಯಲ್ಲಿ ನಮೂದಿಸಿದ ಮೊಬೈಲ್ಗೆ ಸಂಖ್ಯೆಗೆ OTP ರವಾನೆಯಾಗಿರುತ್ತದೆ.

Step-13: ಅರ್ಜಿದಾರರ ಅರ್ಜಿ ಸ್ಥಿತಿಯ ಬಗ್ಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ಸಂದೇಶವನ್ನು
ಅರ್ಜಿದಾರರ ಮೊಬೈಲ್ ನಂಬರ್‌ಗೆ ರವಾನಿಸಲಾಗುತ್ತದೆ OTP ನಮೂದಿಸಿದ ನಂತರ ಪುಟ ಚಲನ್ ಅಥವಾ ಆನ್ಲೈನ್ ಪಾವತಿಗೆ ನಿರ್ದೇಶನ ಮಾಡುತ್ತದೆ.

ನಕಲಿ ವೈದ್ಯರಿಗೆ ಹೊಸ ಗಂಡಾಂತರ.!! ಸರ್ಕಾರದಿಂದ ಬಂತು ಖಡಕ್‌ ವಾರ್ನಿಂಗ್

ವಯಸ್ಸಾದವರಿಗೆ ಸರ್ಕಾರದ ಹೊಸ ಪಿಂಚಣಿ ಯೋಜನೆ! ಅರ್ಜಿ ಸಲ್ಲಿಸಿದವರಿಗೆ ಮಾತ್ರ

Leave a Comment