rtgh

ಗೃಹಲಕ್ಷ್ಮಿಯರಿಗೆ ಸರ್ಕಾರದ ಹೊಸ ಗ್ಯಾರಂಟಿ.! ಈ ದಾಖಲೆ ಇದ್ದವರ ಖಾತೆಗೆ ಪ್ರತಿ ತಿಂಗಳು ₹2,500 ಬರುತ್ತೆ

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದಿದೆ ಎಂದರೆ ಅದಕ್ಕೆ ವಿಧಾನಸಭಾ ಚುನಾವಣೆಗೂ ಮೊದಲು ಪ್ರಚಾರದ ಸಮಯದಲ್ಲಿ ಘೋಷಿಸಿದ ಪ್ರಣಾಳಿಕೆಗಳೇ ಕಾರಣ ಎನ್ನಬಹುದು. ಯಾಕಂದ್ರೆ ರಾಜ್ಯ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 5 ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಈ ಯೋಜನೆಗಳ ಪರಿಣಾಮವಾಗಿ ಜನರು ಕಾಂಗ್ರೆಸ್ ಪಕ್ಷವನ್ನು ಆರಿಸಿದ್ದು. ಈಗ ಈ ಗ್ಯಾರಂಟಿ ಯೋಜನೆಗಳನ್ನು ಕೂಡ ಸರ್ಕಾರ ಜಾರಿಯನ್ನು ಮಾಡಿದೆ.

Govt New Guarantee for ladies

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ನೋಡಿದರೆ ಇದರಲ್ಲಿ ಹೆಚ್ಚು ಬೆನಿಫಿಟ್ ಸಿಗುತ್ತಿರುವುದು ರಾಜ್ಯದ ಮಹಿಳೆಯರಿಗೆ ಎನ್ನಬಹುದು. ಈ ಯೋಜನೆ ಇರಬಹುದು ಅಥವಾ ಗೃಹಲಕ್ಷ್ಮಿ ಯೋಜನೆ ಇರಬಹುದು ಎರಡು ಯೋಜನೆಗಳಲ್ಲಿ ಪ್ರಮುಖವಾಗಿ ಮಹಿಳೆಯರಿಗೆ ಸರ್ಕಾರ ನೆರವು ನೀಡುತ್ತಿದೆ..

ಇತ್ತ, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ 2,000 ಸಾವಿರ ರೂಪಾಯಿಗಳನ್ನು ಮಹಿಳೆಯರ ಖಾತೆಗೆ ಪ್ರತಿ ತಿಂಗಳ ಖರ್ಚಿಗಾಗಿ ವಿತರಣೆ ಮಾಡುತ್ತಿದ್ದರೆ, ಅತ್ತ ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ರೂ.2,500ಗಳನ್ನು ಪ್ರತಿ ತಿಂಗಳು ನೀಡುತ್ತಿದೆ.

ತೆಲಂಗಾಣ ರಾಜ್ಯದಲ್ಲಿ ಮೂರು ಕೋಟಿಗೂ ಹೆಚ್ಚು ಜನಸಂಖ್ಯೆ ಇದ್ದರೆ ಅದರಲ್ಲಿ ಅರ್ಧದಷ್ಟು ಜನರು ಮಹಿಳೆಯರೇ ಆಗಿದ್ದಾರೆ. ಹೀಗಾಗಿ ಮಹಿಳೆಯರ ಸಬಲೀಕರಣಕ್ಕಾಗಿ ತೆಲಂಗಾಣ ಸರ್ಕಾರ ಹೆಚ್ಚು ಯೋಜನೆಗಳನ್ನು ಪರಿಚಯಿಸಿದೆ.

60 ವರ್ಷ ಮೇಲ್ಪಟ್ಟವರಿಗೆ 15 ಲಕ್ಷ.! ಪ್ರತಿ ತಿಂಗಳು ಪಿಂಚಣಿ ಪ್ರಧಾನ ಮಂತ್ರಿ ಯೋಜನೆ


ಮಹಾಲಕ್ಷ್ಮಿ ಯೋಜನೆಯ ಅಡಿಯಲ್ಲಿ ಉಚಿತ ಬಸ್ ಪ್ರಯಾಣ ಹಾಗೂ ಮಹಿಳೆಯರಿಗೆ 2500 ಗಳನ್ನು ಪ್ರತಿ ತಿಂಗಳು ನೀಡಲಾಗುವುದು. ಇದಕ್ಕಾಗಿ ರಾಜ್ಯಾದ್ಯಂತ ಎಂಟರಿಂದ 10 ಲಕ್ಷ ಅರ್ಜಿಗಳು ಸಂದಾಯವಾಗಿದ್ದು, ಜನವರಿ 6ರಿಂದ ಮೊದಲ ಕಂತಿನ ಹಣ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಎರಡನೆಯದಾಗಿ ಮಹಿಳೆಯರಿಗೆ 500 ರೂಪಾಯಿಗಳಿಗೆ ಸಬ್ಸಿಡಿ ದರದಲ್ಲಿ ಸಿಲಿಂಡರ್ ನೀಡಲು ಕೂಡ ತೆಲಂಗಾಣ ಸರ್ಕಾರ ಯೋಜನೆ ರೂಪಿಸುತ್ತಿದೆ. ಅದೇ ರೀತಿ ಇಂದಿರಮ್ಮ ಇಳ್ಳು (ಇಂದಿರಮ್ಮ ಮನೆ) ಯೋಜನೆಯ ಅಡಿಯಲ್ಲಿ ಫಲಾನುಭವಿಗಳಿಗೆ ವಸತಿಯನ್ನು ಕೂಡ ಕಲ್ಪಿಸಿಕೊಡಲಿದೆ ತೆಲಂಗಾಣ ಸರ್ಕಾರ.

ಇನ್ನು ಕೆಲವೇ ದಿನಗಳಲ್ಲಿ ಚುನಾವಣೆಗೂ ಮುನ್ನ ಘೋಷಿಸಲಾಗಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣ ಸರ್ಕಾರವೂ ಕೂಡ ರಾಜ್ಯ ನಿವಾಸಿಗಳಿಗೆ ಒದಗಿಸುವ ಸಾಧ್ಯತೆ ಇದೆ. ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಚುನಾವಣೆಗೂ ಮೊದಲು ಘೋಷಿಸಿದ್ದ ಎಲ್ಲಾ ಯೋಜನೆಗಳನ್ನು ಜನವರಿ ಅಂತ್ಯದ ಒಳಗೆ ರಾಜ್ಯದ ಜನತೆಗೆ ತಲುಪಿಸುವ ವಾಗ್ದಾನ ಮಾಡಿದ್ದಾರೆ.

ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಬಂದಿಲ್ವಾ? ರೇಷನ್ ಕಾರ್ಡ್‌ ನಂಬರ್ ಬಳಸಿ ಹೀಗೆ ಚೆಕ್‌ ಮಾಡಿ

ವಸತಿ ಯೋಜನೆಯಡಿ‌ ಸಿಗಲಿದೆ 1 ಲಕ್ಷಕ್ಕೆ ಮನೆ.! ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾದ ವೆಬ್‌ಸೈಟ್‌ ಲಿಂಕ್

Leave a Comment