ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಇನ್ನು ಮುಂದೆ ಮನೆ ನಿರ್ಮಾಣ ಮಾಡಿಕೊಡುವವರಿಗೆ ಅಥವಾ ಹೊಸ ಮನೆ ಖರೀದಿ ಮಾಡುವವರಿಗೆ ಸಹಾಯಕವಾಗುವಂತೆ 2024 ರ ಬಜೆಟ್ ಮಂಡಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿತ್ತ ಸಚಿವೆ ನಿರ್ಮಲ ಸೀತಾರಾಮನ್ 2024 ಫೆಬ್ರುವರಿ 1ನೇ ತಾರೀಖಿನಂದು ಕೇಂದ್ರ ಸರ್ಕಾರದ ಬಜೆಟ್ ಮಂಡಿಸಲಿದ್ದಾರೆ ಈ ಬಜೆಟ್ ನಲ್ಲಿ ಗೃಹ ಸಾಲಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.
ಈ ಬಾರಿಯ ಕೇಂದ್ರ ಬಜೆಟ್ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸದ್ಯದಲ್ಲಿಯೇ ಲೋಕಸಭಾ ಎಲೆಕ್ಷನ್ ಕೂಡ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಕೇಂದ್ರ ಬಜೆಟ್ ಮೇಲೆ ಭರವಸೆಯನ್ನು ಇಟ್ಟಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಅನುಕೂಲವಾಗಬಹುದು ಎಂದು ಹೇಳಲಾಗುತ್ತಿದೆ.
ಕೇಂದ್ರ ಬಜೆಟ್ ನಲ್ಲಿ ತೆರಿಗೆ ವಿನಾಯಿತಿ
ಗೃಹ ಸಾಲ ಪಡೆದುಕೊಂಡು ಮನೆ ನಿರ್ಮಾಣ ಮಾಡಲು ಬಯಸುವ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರದಿಂದ ಹೊಸ ವಸತಿ ಯೋಜನೆ ಜಾರಿಗೆ ಬರುವ ನಿರೀಕ್ಷೆ ಇದೆ.
ಗೃಹ ಸಾಲದ ಮೇಲೆ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ. ವರದಿಯ ಪ್ರಕಾರ ಇದಕ್ಕಾಗಿ ಸರ್ಕಾರ 60,000 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಮನೆ ನಿರ್ಮಾಣ ಮಾಡಿ ಕೊಳ್ಳುವವರಿಗೆ 3ರಿಂದ 6% ಬಡ್ಡಿ ದರದಲ್ಲಿ ರಿಯಾಯಿತಿ ಸಿಗಬಹುದು.
LPG ಸಿಲಿಂಡರ್ ಸಬ್ಸಿಡಿ ಇನ್ನಷ್ಟು ಹೆಚ್ಚಳ! ಕೇಂದ್ರ ಬಜೆಟ್ನಲ್ಲಿ ಘೋಷಣೆ
ಹೊಸ ವಸತಿ ಯೋಜನೆ
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಧ್ಯಮ ವರ್ಗದವರಿಗೆ ಹಾಗೂ ಬಡವರಿಗೆ ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಅಗತ್ಯ ಇರುವ ಸಾಲ ಸೌಲಭ್ಯಕ್ಕೆ ರಿಯಾಯಿತಿ ನೀಡುವ ಸಾಧ್ಯತೆ ಇದೆ.
ಹೊಸ ವಸತಿ ಯೋಜನೆ ಜಾರಿಗೆ ಬರಲಿದ್ದು, ಗೃಹ ಸಾಲ ಪಡೆದುಕೊಳ್ಳುವವರಿಗೆ ಇದು ಹೆಚ್ಚಿನ ಪ್ರಯೋಜನ ಆಗಲಿದೆ. ಏಕೆಂದರೆ 3%-6% ವರೆಗೆ ಬಡ್ಡಿ ಕಡಿತಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಫೆಬ್ರುವರಿ 1, 2024 ಕೇಂದ್ರ ಬಜೆಟ್ ಗಾಗಿ ಜನರು ಕಾದು ಕುಳಿತಿದ್ದಾರೆ. ಜನರ ನಿರೀಕ್ಷೆಯನ್ನು ಪೂರ್ಣಗೊಳಿಸಲಿದಿಯಾ ಸರ್ಕಾರ ಎಂಬುದನ್ನು ಕಾದು ನೋಡಬೇಕು.
ಇತರೆ ವಿಷಯಗಳು:
ಬಸ್ನಲ್ಲಿ ಕೂರುವ ಮುನ್ನ ಎಚ್ಚರ.!! ಮಹಿಳಾ ಸೀಟಿನಲ್ಲಿ ಕುಳಿತ ಪುರುಷರಿಗೆ 34 ಸಾವಿರ ದಂಡ
ರಾಜ್ಯದ 30,000 ರೈತರಿಗೆ ಗುಡ್ ನ್ಯೂಸ್! ಕೃಷಿ ಭೂಮಿ ನೀರಾವರಿಗಾಗಿ 80% ಸಬ್ಸಿಡಿ, ಇಲ್ಲಿ ಅರ್ಜಿ ಸಲ್ಲಿಸಿ