ಹಲೋ ಸ್ನೇಹಿತರೇ, ಪ್ರತಿಯೊಬ್ಬರೂ ಸ್ವಲ್ಪ ಆರಾಮದಾಯಕವಾದ ಜೀವನ ನಡೆಸಬೇಕು ಅಂದ್ರೆ ಹಣದುಬ್ಬರದ ಸಮಸ್ಯೆಗೆ ಒಂದು ಬ್ರೇಕ್ ಬೇಕು. ಯಾಕಂದ್ರೆ ದಿನದಿಂದ ದಿನಕ್ಕೆ ದಿನಸಿಯಿಂದ ಹಿಡಿದು ಪೆಟ್ರೋಲ್ ನವರೆಗೆ ಬೆಲೆ ಜಾಸ್ತಿ ಆಗುತ್ತಲೇ ಇರುತ್ತದೆ. ಈ ಬೆಲೆಯನ್ನು ನಿಯಂತ್ರಿಸದೆ ಇದ್ದಲ್ಲಿ ಜನಸಾಮಾನ್ಯರ ದಿನದ ಬದುಕು ಕಷ್ಟವಾಗುತ್ತದೆ.
ಇದನ್ನು ಅರಿತಿರುವ ಕೇಂದ್ರ ಸರ್ಕಾರ ಸಾಧ್ಯವಾಗುವ ರೀತಿಯಲ್ಲಿ ಜನರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದೆ. ಇದೇ ಕಾರಣಕ್ಕೆ ಸಬ್ಸಿಡಿ ದರದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ವಿತರಣೆ ಮಾಡುವ ಕೆಲಸವನ್ನು ಆರಂಭಿಸಿದೆ.
ಕಳೆದ ಒಂದು ವರ್ಷಗಳ ಹಿಂದೆ, ಸಾವಿರದ ಎಲ್ಲೆಯನ್ನು 14.2 ಕೆಜಿ ಎಲ್ಪಿಜಿ ಸಿಲೆಂಡರ್ ದರವನ್ನು ಇಳಿಕೆ ಮಾಡಿ 900 ರೂಪಾಯಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್ ಖರೀದಿ ಮಾಡುವಂತೆ ಸರ್ಕಾರವು ಅವಕಾಶ ಮಾಡಿಕೊಟ್ಟಿತ್ತು.
ಸರ್ಕಾರದ ಸಬ್ಸಿಡಿ
ಸರ್ಕಾರ ಈಗಲೇ ಗ್ಯಾಸ್ ಸಿಲಿಂಡರ್ ಮೇಲೆ 200 ರೂ. ವರೆಗೆ ಸಬ್ಸಿಡಿಯನ್ನು ನೀಡುತ್ತಿದೆ. ಉಚಿತವಾಗಿ ಗ್ಯಾಸ್ ಕನೆಕ್ಷನ್ ವಿತರಣೆಯನ್ನು ಮಾಡುವ ಉಜ್ವಲ ಯೋಜನೆ ಅಡಿಯಲ್ಲಿ, ಉಚಿತ ಗ್ಯಾಸ್ ಕನೆಕ್ಷನ್ ಪಡೆದುಕೊಂಡಿರುವರಿಗೆ ರೂ.300 ಸಬ್ಸಿಡಿಯನ್ನು ನೀಡಲಾಗುತ್ತಿದೆ. ಹಾಗಾಗಿ ಉಜ್ವಲ ಯೋಜನೆಯ ಅಡಿಯಲ್ಲಿ 14.2 ಲೀಟರ್ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 600 ಗಳಿಗೆ ಖರೀದಿ ಮಾಡಬಹುದು.
ಈ ಕೆವೈಸಿ ಕಡ್ಡಾಯ
ನೀವು ಇನ್ನು ಮುಂದೆ ಯಾವುದೇ ರೀತಿಯ ಬ್ಯಾಂಕ್ ವ್ಯವಹಾರ ಮಾಡುವುದಿದ್ದರೂ ಅಥವಾ ಸರ್ಕಾರದ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದರು, ಮಾಡಬೇಕಾಗಿರುವ ಬಹಳ ಮುಖ್ಯವಾಗಿರುವ ಕೆಲಸ ಅಂದ್ರೆ ಕೆವೈಸಿ ಮಾಡಿಸಿಕೊಳ್ಳುವುದು.
LPG ಸಿಲಿಂಡರ್ ಸಬ್ಸಿಡಿ ಇನ್ನಷ್ಟು ಹೆಚ್ಚಳ! ಕೇಂದ್ರ ಬಜೆಟ್ನಲ್ಲಿ ಘೋಷಣೆ
ನಿಮ್ಮ ಬ್ಯಾಂಕ್ ಖಾತೆ, ರೇಷನ್ ಕಾರ್ಡ್, ಗ್ಯಾಸ್ ಕಾರ್ಡ್ ಎಲ್ಲವೂ ಕೂಡ ಆಧಾರ್ ನೊಂದಿಗೆ ಕನೆಕ್ಟ್ ಆಗಿರಬೇಕು. ಈ ರೀತಿಯಲ್ಲಿ ಕೆ-ವೈ ಸಿ ಮಾಡಿಸಿಕೊಂಡವರ ಪಟ್ಟಿಯನ್ನು ಬಿಡುಗಡೆಯನ್ನು ಮಾಡಲಾಗಿದ್ದು, ನೀವು ಫಲಾನುಭವಿಗಳಾಗಿದ್ರೆ ನಿಮ್ಮ ಹೆಸರು ಇದೆ ಎಂಬುದನ್ನು ಚೆಕ್ ಮಾಡಿ.
ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?
ಉಜ್ವಲ ಯೋಜನೆಯ ಅಡಿಯಲ್ಲಿ ವರ್ಷದಲ್ಲಿ 12 ಗ್ಯಾಸ್ ಸಿಲಿಂಡರ್ ಗಳಿಗೆ 300 ರೂಪಾಯಿಗಳ ಸಬ್ಸಿಡಿಯನ್ನು ಸಿಗುತ್ತದೆ. ಗ್ಯಾಸ್ ಖರೀದಿ ಮಾಡುವಾಗ ನೀವು ಸಂಪೂರ್ಣ ಮೊತ್ತವನ್ನು ನೀಡಬೇಕು ಮತ್ತು 300 ರೂಪಾಯಿಗಳ ಸಬ್ಸಿಡಿ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.
ಸಬ್ಸಿಡಿ ಫಲಾನುಭವಿಗಳಲ್ಲಿ ನೀವು ಒಬ್ಬರಾಗಿದ್ದರೆ ಈ ರೀತಿ ಮಾಹಿತಿ ತಿಳಿದುಕೊಳ್ಳಿ. https://www.mylpg.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ನಿಮಗೆ ಗ್ಯಾಸ್ ಕಂಪನಿಯ 3 ಹೆಸರುಗಳು ಕಾಣಿಸುತ್ತದೆ.
Bharat ಮತ್ತು HP, Indian ಈ 3ರಲ್ಲಿ ನೀವು ಯಾವ ಕಂಪನಿಯ ಗ್ಯಾಸ್ ಅನ್ನು ಪಡೆದುಕೊಂಡಿದ್ದೀರೋ ಅದರ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಪುಟವನ್ನು ತೆರೆದುಕೊಳ್ಳುತ್ತಿದೆ.
ಅನಂತರ ಹೊಸ ಪುಟದ ಮೇಲ್ಭಾಗದಲ್ಲಿ ಕಾಣಿಸುವ ಉಜ್ವಲ ಬೆನಿಫಿಷಿಯರಿ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಅನ್ನು ಮಾಡಿ. ಇಲ್ಲಿ ನೀವು ನಿಮ್ಮ ರಾಜ್ಯ ಜಿಲ್ಲೆ ಮತ್ತು ತಾಲೂಕು ಗ್ಯಾಸ್ ಬುಕ್ ಸಂಖ್ಯೆ ಮೊದಲಾದವುಗಳನ್ನು ನಮೂದಿಸಬೇಕು. ಇಷ್ಟು ಮಾಡಿದ್ರೆ ಸಾಕು ಉಜ್ವಲಾ ಯೋಜನೆಯ ಫಲಾನುಭವಿಗಳ ಲಿಸ್ಟ್ ನಿಮ್ಮ ಮುಂದೆ ಇರುತ್ತದೆ. ಇಲ್ಲಿ ನಿಮ್ಮ ಹೆಸರು ಇದ್ರೆ ನಿಮಗೆ ಸಬ್ಸಿಡಿ ಮಿಸ್ ಆಗದೆ ಜಮಾ ಕೂಡ ಆಗುತ್ತೆ.
ಇತರೆ ವಿಷಯಗಳು:
ಬಸ್ನಲ್ಲಿ ಕೂರುವ ಮುನ್ನ ಎಚ್ಚರ.!! ಮಹಿಳಾ ಸೀಟಿನಲ್ಲಿ ಕುಳಿತ ಪುರುಷರಿಗೆ 34 ಸಾವಿರ ದಂಡ
ರಾಜ್ಯದ 30,000 ರೈತರಿಗೆ ಗುಡ್ ನ್ಯೂಸ್! ಕೃಷಿ ಭೂಮಿ ನೀರಾವರಿಗಾಗಿ 80% ಸಬ್ಸಿಡಿ, ಇಲ್ಲಿ ಅರ್ಜಿ ಸಲ್ಲಿಸಿ