ಹಲೋ ಸ್ನೇಹಿತರೇ, ರೈತಾಪಿ ಕೆಲಸದಲ್ಲಿ ಪ್ರತಿ ಹಂತದಲ್ಲಿಯೂ ವಿಭಿನ್ನ ಬಗ್ಗೆಯ ಸವಾಲುಗಳು ಇದೇ ಇರುತ್ತವೆ. ಬೀಜದಿಂದ ಬೀಜ ಪಡೆಯುವವರೆಗೆ ನಾನಾ ತೊಡಕುಗಳನ್ನು ದಾಟಿ ರೈತ ಬೆಳೆಯನ್ನು ಬೆಳೆಯುವುದು ಪ್ರಸ್ತುತ ಸನ್ನಿವೇಶದಲ್ಲಿ ಸವಾಲಿನ ಕೆಲಸವೇ ಅಗಿದೆ.
ಒಂದು ಬೆಳೆಯನ್ನು ಬೆಳೆಯಲು ಬೀಜವನ್ನು ಬಿತ್ತನೆ ಮಾಡಿ ಫಸಲಿಗೆ ಬಂದ ನಂತರ ಕಟಾವು ಮಾಡಿ ಮತ್ತೆ ಬೀಜವನ್ನು ಸಂಗ್ರಹಣೆಯನ್ನು ಮಾಡುವುದು ಎಂದು ಈ ನಡುವೆ ಬೆಳೆಯ ಬೆಳವಣಿಗೆ ಹಂತದಲ್ಲಿ ರೋಗ ಕೀಟವನ್ನು ಸರಿಯಾದ ಸಮಯಕ್ಕೆ ಗುರುತಿಸಿ ನಿಯಂತ್ರಿಸುವುದು ರೈತರಿಗೆ ಸವಾಲಾದರೆ ಬೆಳೆಯು ಫಸಲಿಗೆ ಬಂದ ನಂತರ ಕಾಡು ಪ್ರಾಣಿ ಮತ್ತು ಪಕ್ಷಿಗಳಿಂದ ಫಸಲನ್ನು ಸಂರಕ್ಷಣೆ ಮಾಡಿಕೊಳ್ಳುವುದು ಇನ್ನೊಂದು ರೈತರಿಗೆ ಸವಾಲಿನ ಕೆಲಸವಾಗಿದೆ.
ಸಖತ್ ವೈರಲ್ ಆಗುತ್ತಿದೆ ಬೆಳೆ ರಕ್ಷಣೆಗೆ ಜಮೀನಿನಲ್ಲಿ ಇಟ್ಟ ಸಾಧನದ ವಿಡಿಯೋ ಇದಾಗಿದೆ:
ರೈತ ಬಾಂಧವರೇ ಕೃಷಿ ವಿಜ್ನಾನಿಗಳಂತೆಯೇ ನಮ್ಮ ರೈತರು ಸಹ ಸ್ವಂತ ಏನಾದರು ಒಂದು ಹೊಸ ವಿನೂತನ ಪ್ರಯೋಗಗಳನ್ನು ತಮ್ಮ ಅವಶ್ಯಕತೆಗೆ ಬೇಕಾದಂತೆ ಮಾಡುತ್ತಿರುತ್ತಾರೆ ಇಲ್ಲೊಬ್ಬ ರೈತ ತನ್ನ ಬೆಳೆಯನ್ನು ಪ್ರಾಣಿ-ಪಕ್ಷಿಗಳಿಂದ ಸಂರಕ್ಷಣೆ ಮಾಡಿಕೊಳ್ಳಲು ತನ್ನ ಜಮೀನಿನಲ್ಲಿ ಇಟ್ಟ ಸಾಧನದ ವಿಡಿಯೋ ಇಂಟರ್ ನೆಟ್ ಜಗತ್ತಿನಲ್ಲಿ ಭಾರೀ ವೈರಲ್ ಅಗಿದೆ ಈ ಸಾಧನ ನೋಡಿದ ನೆಟ್ಟಿಗರು ಲೈಕ್, ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ವೈರಲ್ ಸಾಧನದ ವಿವರ ಹೀಗಿದೆ:
ರೈತನ್ನು ಈ ಸಾಧನವನ್ನು ತಯಾರಿಸಲು ಸೈಕಲ್ಗೆ ಅಳವಡಿಸುವ ಹ್ಯಾಂಡಲ್ ಬಾರ್ ಬಳಸಿಕೊಂಡು ಇದಕ್ಕೆ ಕೆಳಗೆ ಜಪ್ಪಿಂಗ್ ಸ್ಪ್ರಿಂಗ್ ಜೋಡಿಸಿ, ಮೇಲೆ ಮತ್ತು ಕೆಳಗೆ ಕುಣಿಯುವಂತೆ ಮಾಡಿದ್ದಾರೆ. ಮಾನವನಂತೆಯೇ ಇರುವ ಗೊಂಬೆಯೊಂದನ್ನು ನಿರ್ಮಿಸಿ, ಅದರ ತೋಳುಗಳನ್ನು ಹ್ಯಾಂಡಲ್ನ ಎರಡು ಕೊನೆಗೆ ಜೋಡಿಸಿದ್ದಾನೆ ಇದು ಗಾಳಿಯ ವೇಗಕ್ಕೆ ಹಾರಡುವಂತೆ ವಿನ್ಯಾಸ ಮಾಡಲಾಗಿದೆ.
ಈ ಸಾಧನವು ಗಾಳಿಗೆ ತಕ್ಕಂತೆ ಸುತ್ತಮುತ್ತಲೂ ತಿರುಗುತ್ತದೆ, ಜೊತೆಗೆ ಶೇಕ್ ಅಗುವುದರಿಂದ ಮನುಷ್ಯರೇ ಓಡಾಡುತ್ತಿದ್ದಾರೆ ಎಂದೇ ಗೋಚರಿಸುತ್ತದೆ. ಈ ರೀತಿ ಪ್ರಾಣಿ-ಪಕ್ಷಿಗಳ ಹಾವಳಿಯಿಂದ ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳುವ ರೈತನ ಈ ಪ್ರಯತ್ನಕ್ಕೆ ನೆಟ್ಟಿಗರು ಹೆಚ್ಚಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಇತರೆ ವಿಷಯಗಳು:
ರೈತರಿಗೆ ಬ್ಯಾಡ್ ನ್ಯೂಸ್.!! ಈ ಕಾರ್ಡ್ ಇದ್ದವರಿಗೆ ಮಾತ್ರ ಬರ ಪರಿಹಾರ ಪಡೆಯಲು ಸಾಧ್ಯ; ಇಲ್ಲಿಂದ ಚೆಕ್ ಮಾಡಿ
ರೈಲ್ವೆ ಪ್ರಯಾಣಿಕರಿಗೆ ಬಂಪರ್ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ