rtgh

ರೈಲ್ವೆ ಪ್ರಯಾಣಿಕರಿಗೆ ಬಂಪರ್‌ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ

ಹಲೋ ಸ್ನೇಹಿತರೇ, ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡುವವರಿಗೆ ಈ ಸುದ್ದಿ. ರೈಲ್ವೆ ಇಲಾಖೆಯು ರೈಲ್ವೆ ಸರ್ಕ್ಯುಲರ್ ಜರ್ನಿ ಟಿಕೆಟ್ ಅನ್ನುವ ವಿಶೇಷವಾದ ಟಿಕೆಟ್ ಬಿಡುಗಡೆ ಮಾಡಲಾಗಿದೆ ಇದರ ಮೂಲಕ ಪ್ರಯಾಣಿಕರು ಹೆಚ್ಚು ಪ್ರಯೋಜನವನ್ನು ಪಡೆದುಕೊಳ್ಳಬಹುದು.

railway ticket booking

ಪ್ರತಿನಿತ್ಯ ಲಕ್ಷಾಂತರ ಮಂದಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ತಲುಪಲು ಎಕ್ಸ್ಪ್ರೆಸ್ ರೈಲ್ವೆ ಮಾರ್ಗಗಳು ಪ್ರಾರಂಭವಾಗಿವೆ. 1 ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವೇಗವಾಗಿ ತಲುಪಬಹುದಾಗಿದೆ. ಇದೇ ಕಾರಣಕ್ಕೆ ರೈಲಿಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ. ಹೀಗಾಗಿ ರೈಲ್ವೆ ತನ್ನ ಪ್ರಯಾಣಿಕರಿಗಾಗಿ ವಿಶೇಷ ಸೇವಯನ್ನು ಒದಗಿಸಲು ಮುಂದಾಗಿದೆ. ಈ ಸೇವೆಯನ್ನು ಯಾರು ಬೇಕಾದರು ಪಡೆದುಕೊಳ್ಳಬಹುದಾಗಿದೆ.

ರೈಲ್ವೆ ನಿಲ್ದಾಣದಲ್ಲಿ ಕಾದು ಕಾದು ಪಡೆದುಕೊಂಡ ಒಂದು ಟಿಕೆಟ್‌ನಲ್ಲಿ ಒಂದು ಭಾರಿ ಮಾತ್ರ ಪ್ರಯಾಣ ಮಾಡಬಹುದಾಗಿದೆ. ಆದರೆ ರೈಲ್ವೆಯು ವಿಶೇಷ ಸೌಲಭ್ಯವನ್ನು ಪ್ರಾರಂಭ ಮಾಡಿದೆ ಅದೇ Railway Circular Journey ಟಿಕೆಟ್‌ ಬಿಡುಗಡೆ ಮಾಡಿದೆ. ಈ ಟಿಕೆಟ್‌ ಪಡೆದು ಪ್ರಯಾಣ ಮಾಡುವವರು 8 ಬೇರೆ ಬೇರೆ ನಿಲ್ಧಾನಗಳಲ್ಲಿ 56 ದಿನಗಳ ವರೆಗು 1 ಟಿಕೆಟ್‌ನಲ್ಲಿ ಪ್ರಯಾಣಬಹುದು. ಪ್ರವಾಸಿ ಸ್ಥಳಗಳಿಗೆ ಹೋಗಲು ಸಾಕಷ್ಟು ಅನುಕೂಲಕರವಾಗಿದೆ.

ದರ ಕಡಿಮೆ:

ಸರ್ಕ್ಯುಲರ್ ಟಿಕೆಟ್ ದರವು ಸಾಮಾನ್ಯ ಟಿಕೆಟ್‌ ದರಕ್ಕಿಂತ ಕಡಿಮೆಯಾಗಿದೆ. ಸ್ಥಳಕ್ಕೊಂದು ಟಿಕೆಟ್‌ ಕೊಳ್ಳುವುದರಿಂದ ವೆಚ್ಚ ಜಾಸ್ತಿಯಾಗುತ್ತದೆ ಆದರೆ ಈ ಸರ್ಕ್ಯುಲರ್ ಟಿಕೆಟ್ ಖರೀದಿಸುವುದರಿಂದ ನಿಮಗೆ ವೆಚ್ಚವು ಕಡಿಮೆಯಾಗುತ್ತದೆ ಮತ್ತು 56 ದಿನ ಟಿಕೆಟ್‌ ಕೊಳ್ಳುವ ತೊಂದರೆ ಇಲ್ಲದೆ ನಿಮಗೆ ಇಷ್ಟ ಬಂದ ಸ್ಥಳಗಳಿಗೆ ಪ್ರಯಾಣ ಮಾಡಬಹುದಾಗಿದೆ ಮತ್ತು ಇದಕ್ಕೆ ಡಿಸ್ಕೌಂಟ್‌ ಕೂಡ ನೀಡಲಾಗುತ್ತದೆ.

ಯಾವ ರೀತಿ ಪ್ರಯಾಣ ಮಾಡಬಹುದು?

ರೈಲ್ವೆ ಸರ್ಕ್ಯುಲರ್ ಜರ್ನಿ ಟಿಕೆಟ್ ಪಡೆದ ಪ್ರಯಾಣಿಕರು ಇಡೀ ದೇಶವನ್ನೆ ವೃತ್ತಾಕಾರವಾಗಿ ಪ್ರಯಾಣ ಮಾಡಬಹುದಾಗಿದೆ. ಒಮ್ಮೆ ಟಿಕೆಟ್‌ ಕೊಂಡರೆ, ಕನ್ಯಾಕುಮಾರಿ ವರೆಗು ಸ್ಥಳಗಳನ್ನು ಸುತ್ತಾಡಿ ಬರಬಹುದು.


56 ದಿನ ಪ್ರಯಾಣ:

ಒಂದು ಬಾರಿ ಟಿಕೆಟ್‌ ಖರೀದಿ ಮಾಡಿದ್ರೆ 56 ದಿನಗಳವರೆಗೆ ಅದರ ಪ್ರಯೋಜನವನ್ನು ಪಡೆಯಬಹುದಾಗಿದೆ. ನೇರವಾಗಿ ಕೌಂಟರ್‌ಗೆ ಹೋಗಿ ಈ ಟಿಕೆಟ್‌ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಅರ್ಜಿಯನ್ನು ಮೊದಲು ಸಲ್ಲಿಸಬೇಕಾಗುತ್ತದೆ. ಆನಂತರ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರ ನಿಮಗೆ ಇದರ ಬಗ್ಗೆ ಮಾರ್ಗದರ್ಶನವನ್ನು ನೀಡುತ್ತಾರೆ ತದನಂತರ ನಿಮಗೆ ಟಿಕೆಟ್‌ ಸಿಗುತ್ತದೆ. 56 ದಿನಗಳ ವರೆಗು ನೀರು ಟಿಕೆಟ್‌ ಖರೀದಿಸದೆ ಇಡೀ ದೇಶವನ್ನೆ ಸುತ್ತಬಹುದಾಗಿದೆ.

ಚೇತನ ಮತ್ತು ಧನಶ್ರೀ ಯೋಜನೆ ಹಣ ಪಡೆಯುವುದರ ಬಗ್ಗೆ ನಿಮಗೆ ಎಷ್ಟು ಗೊತ್ತು.?

ಮಹಿಳೆಯರಿಗೆ ಭರ್ಜರಿ ಕೊಡುಗೆ.!! ಈ ದಾಖಲೆ ಇದ್ದವರಿಗೆ ಸಿಗಲಿದೆ ಉಚಿತ ಮೊಬೈಲ್‌ ಪೋನ್;‌ ನೀವು ಚೆಕ್‌ ಮಾಡ್ರಿ

Leave a Comment