rtgh

ಚೇತನ ಮತ್ತು ಧನಶ್ರೀ ಯೋಜನೆ ಹಣ ಪಡೆಯುವುದರ ಬಗ್ಗೆ ನಿಮಗೆ ಎಷ್ಟು ಗೊತ್ತು.?

ನಮಸ್ಕಾರ ಸ್ನೇಹಿತರೆ, ಇವತ್ತಿನ ಲೇಖನದಲ್ಲಿ ನಿಮಗೆ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಇನ್ನೆರಡು ಯೋಜನೆಗಳನ್ನು ಜಾರಿಗೆ ತರುತ್ತಿರುವುದರ ಬಗ್ಗೆ ತಿಳಿಸಲಾಗುತ್ತಿದೆ. ಮಹಿಳೆಯರಿಗಾಗಿಯೇ ಒಂದೊಂದು ಯೋಜನೆಯನ್ನು ರಾಜ್ಯ ಸರ್ಕಾರ ಪರಿಚಯಿಸುತ್ತಿದೆ. ಈಗಾಗಲೇ ಬಹುತೇಕ ಮಹಿಳೆಯರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಹೆಚ್ಚಿನ ಪ್ರಯೋಜನವನ್ನು ನೀಡುತ್ತಿದ್ದು ಸ್ವಾವಲಂಬಿ ಜೀವನವನ್ನು ನಡೆಸಲು ಎನ್ನುವ ಉದ್ದೇಶದಿಂದ ಮಹಿಳೆಯರಿಗೆ ಈ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಮತ್ತೆ ಎರಡು ಯೋಜನೆಗಳನ್ನು ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಜಾರಿಗೆ ತರುತ್ತಿದ್ದು ಆ ಯೋಜನೆಗಳು ಯಾವುವು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬಹುದಾಗಿದೆ.

Chetana and Dhanashree Yojana
Chetana and Dhanashree Yojana

ಮಹಿಳೆಯರಿಗಾಗಿ ಎರಡು ವಿಶೇಷ ಯೋಜನೆಗಳು :

ರಾಜ್ಯ ಸರ್ಕಾರವು ನೀಡುವ ಉದ್ದೇಶದಿಂದ ಹೆಚ್ಚಿನ ಸೌಲಭ್ಯವಿರುವ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ ಅದರಲ್ಲಿಯೂ ಸ್ವಂತ ಉದ್ಯೋಗದ ಕಾಸಿಗೆ ಮಹಿಳೆಯರಿಗೆ ಸಹಕಾರ ನೀಡಲು ವಿವಿಧ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿದೆ. ವಿಶೇಷ ಯೋಜನೆಗಳನ್ನು ಮಹಿಳೆಯರಿಗಾಗಿ ರಾಜ್ಯ ಸರ್ಕಾರ ಪರಿಚಯಿಸಿದೆ. ಉದ್ಯೋಗಿನಿ ಯೋಜನೆ ,ಚೇತನ ಯೋಜನೆ ,ಲಿಂಗ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ, ಧನಶ್ರೀ ಯೋಜನೆ ಮತ್ತು ಮಾಜಿದೇವ ದಾಸಿ ಪುನರ್ವಸತಿ ಯೋಜನೆಗಳಿಗೆ ರಾಜ್ಯ ಸರ್ಕಾರವು ಭೌತಿಕ ಮತ್ತು ಆರ್ಥಿಕ ಗುರಿಗಳನ್ನು ನಿಗದಿಪಡಿಸಲು ಈ ಯೋಜನೆಯ ಮೂಲಕ ರಾಜ್ಯ ಸರ್ಕಾರವು ನಿರ್ಧರಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳ ಅಡಿಯಲ್ಲಿ 2023-24ನೇ ಸಾಲಿಗೆ ಅನುದಾನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಅದರಲ್ಲಿ ಮುಖ್ಯವಾಗಿ ಚೇತನ ಮತ್ತು ಧನಶ್ರೀ ಯೋಜನೆಯು ಈ ಹೆಚ್ಚಾಗಿ ಮಹಿಳೆಯರಿಗೆ ಆರ್ಥಿಕ ನೆರವನ್ನು ನೀಡುತ್ತದೆ.

ಇದನ್ನು ಓದಿ : ಇನ್ನು ಮುಂದೆ ಗೃಹಲಕ್ಷ್ಮಿ ಹಣ ನಿಮ್ಮ ಮನೆಯಲ್ಲಿ ಇವರ ಖಾತೆಗೆ ಜಮಾ

ಚೇತನ ಮತ್ತು ಧನಶ್ರಿ ಯೋಜನೆ ಜಾರಿ :

ದಮನಿತ ಮಹಿಳೆಯರಿಗೆ ಚೇತನ ಯೋಜನೆಯ ಅಡಿಯಲ್ಲಿ ಆದಾಯ ತರುವಂತ ಚಟುವಟಿಕೆಗಳನ್ನು ಕೈಗೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರವು 30,000ಗಳವರೆಗೆ ಪ್ರೋತ್ಸಾಹ ಧನವನ್ನು ನೀಡಲು ನಿರ್ಧರಿಸಿದೆ. ಅದರಂತೆ ಧನಶ್ರೀ ಯೋಜನೆಯ ಮೂಲಕ ಸ್ವಯಂ ಉದ್ಯೋಗ ಕೈಗೊಳ್ಳಲು ಹೆಚ್ಐವಿ ಸೋಂಕಿತ ಮಹಿಳೆಯರಿಗೆ 30000 ಪ್ರೋತ್ಸಾಹ ಧನವನ್ನು ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ. ನೇರ ಸಹಾಯಧನವನ್ನು ಈ ಎರಡು ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಮಹಿಳೆಯರು ಸರಕಾರದಿಂದ ಪಡೆಯಬಹುದು. ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಮಹಿಳೆಯರು ಗ್ರಾಮವನ್ ಕರ್ನಾಟಕವನ್ನು ಬಾಪೂಜಿ ಕೇಂದ್ರಗಳಲ್ಲಿ ಆನ್ಲೈನ ಮೂಲಕ ಸಲ್ಲಿಸಬಹುದಾಗಿದ್ದು ತಮ್ಮ ಬ್ಯಾಂಕ್ ಖಾತೆಗೆ ಮುಖ್ಯವಾಗಿ ಅರ್ಜಿದಾರರು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಬೇಕು. ಡಿಸೆಂಬರ್ 22 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು ಈ ಯೋಜನೆಗಳ ಪ್ರಯೋಜನವನ್ನು ಪಡೆಯಲು ನಿಗದಿತ ಸಮಯದೊಳಗೆ ಮಹಿಳೆಯರು ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರವು ಮಹಿಳೆಯರನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದ್ದು ಈ ಎರಡು ಯೋಜನೆಗಳು ಹೆಚ್ಚು ಉಪಯುಕ್ತವನ್ನು ಮಹಿಳೆಯರಿಗೆ ಮಾಡಬಹುದು ಎಂದು ರಾಜ್ಯ ಸರ್ಕಾರ ಯೋಚಿಸಿದೆ. ಹಾಗಾಗಿ ಈ ಮಾಹಿತಿಯನ್ನು ಈ ರೀತಿಯ ಅರ್ಹ ಮಹಿಳೆಯರಿಗೆ ಶೇರ್ ಮಾಡುವ ಮೂಲಕ ಅವರು ಯೋಜನೆಯ ಪ್ರಯೋಜನವನ್ನು ಪಡೆಯುವಂತೆ ಮಾಡಿ ಧನ್ಯವಾದಗಳು.


ಇತರೆ ವಿಷಯಗಳು :

ಈ ಬೆಳೆ ಬೆಳೆದರೆ ಎಕರೆಗೆ 5 ಲಕ್ಷ ಫಿಕ್ಸ್; ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ

ದೊಡ್ಮನೆಗೆ ರಾಯಲ್‌ ವೈಲ್ಡ್‌ ಕಾರ್ಡ್‌ ಎಂಟ್ರಿ.!! ಒಂದೇ ಕ್ಷಣದಲ್ಲಿ ಬದಲಾಯ್ತು ಮನೆ ವಾತಾವರಣ

Leave a Comment