rtgh

ಈ ಬೆಳೆ ಬೆಳೆದರೆ ಎಕರೆಗೆ 5 ಲಕ್ಷ ಫಿಕ್ಸ್; ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ

ನಮಸ್ಕಾರ ಸ್ನೇಹಿತರೇ ಇವತ್ತಿನ ಲೇಖನದಲ್ಲಿ ನಿಮಗೆ ಯಾವ ರೀತಿಯ ಬೆಳೆಗಳನ್ನು ಬೆಳೆಯುವುದರಿಂದ ಎಕರೆಗೆ 5 ಲಕ್ಷ ರೂಪಾಯಿಗಳನ್ನು ಗಳಿಸಬಹುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ. ನಿರಂತರವಾಗಿ ಕೃಷಿ ಜಗತ್ತು ವಿಕಸನಗೊಳ್ಳುತ್ತಿದೆ ಮತ್ತು ಅಂತಹ ಒಂದು ಪ್ರಗತಿ ಎಂದರೆ ವಿನ್ಸೆಂಟ್ ಟೂ ಆಯ್ಕೆ ಅಲಂಕಾರಿಕ ಸೂರ್ಯಕಾಂತಿಯಾಗಿದೆ. ಈ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ್ದು ಇದು ಅದರ ಸೌಂದರ್ಯಕ್ಕೆ ಮಾತ್ರವಲ್ಲದೆ ರೈತರಿಗೂ ಹೆಚ್ಚು ಲಾಭದಾಯಕವಾಗಿರುತ್ತದೆ. ಹಾಗಾದರೆ ಈ ಬೆಳೆ ಬೆಳೆಯುವುದರಿಂದ ಏನೆಲ್ಲಾ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳಬಹುದು.

5 lakhs per acre crop has been developed by the university
5 lakhs per acre crop has been developed by the university
  1. ಕ್ರಾಂತಿಕಾರಿ ತಳಿ :

ವಿನ್ಸೆಂಟ್ 2 ಚಾಯ್ಸ್ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದಂತಹ ಕೇವಲ ಸೂರ್ಯಕಾಂತಿ ಮಾತ್ರವಲ್ಲ. ಅಲಂಕಾರಿಕ ಚಿನ್ನದ ಗಣಿಯಾಗಿ ರೈತರಿಗೆ ಇದು ಉಪಯೋಗಕಾರಿಯಾಗಿದೆ. ಈ ಸೂರ್ಯಕಾಂತಿ ಬೇಗನೆ ಹೂವು ಬಿಡುತ್ತದೆ.

  1. ಆರಂಭಿಕ ಆದಾಯ ಮತ್ತು ಬೇಗನೆ ಹೂವು ಬಿಡುತ್ತದೆ :

ಬೆಂಗಳೂರು ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದಂತಹ ಈ ತಳಿ ಸಾಂಪ್ರದಾಯಿಕ ಸೂರ್ಯಕಾಂತಿ ಹೂಗಳಿಗಿಂತ ವಿಭಿನ್ನವಾಗಿ ಹಾಗೂ ಈ ತಳಿಯು ಬೇಗನೆ ಅರಳುತ್ತದೆ. ಅಲ್ಲದೆ ಧಾನ್ಯ ಹಣ್ಣಾಗುವವರೆಗೂ ಕಾಯದೆ ತ್ವರಿತ ಆದಾಯವನ್ನು ಈ ತಳಿಯು ಖಚಿತಪಡಿಸುತ್ತದೆ.

  1. ವಿಶಿಷ್ಟ ಸೌಂದರ್ಯ ಶಾಸ್ತ್ರ :

ಈ ತಳಿಯು ಕಪ್ಪು ಧಾನ್ಯದ ಪದರವನ್ನು ಹೊಂದಿದ್ದು ಮಧ್ಯಮ ಗಾತ್ರದ ಹೂವುಗಳನ್ನು ಹೊಂದಿರುತ್ತದೆ ಮತ್ತು ಇದರಲ್ಲಿ ಬೀಜಗಳು ಇರುವುದಿಲ್ಲ.

  1. ದೀರ್ಘಕಾಲಿಕ ಸೌಂದರ್ಯ :

20 ರಿಂದ 25 ದಿನಗಳವರೆಗೆ ತಾಜಾ ಮತ್ತು ರೋಮನಚನಕಾರಿಯಾದ ದಳಗಳು ಈ ತಳಿಯಲ್ಲಿ ಕಾಣಿಸುತ್ತದೆ.


  1. ಸಣ್ಣ ಕೊಯ್ಲು ಚಕ್ರ :

ಕೇವಲ 45 ರಿಂದ 55 ದಿನಗಳಲ್ಲಿ ನಾಟಿ ಮಾಡಿದ ನಂತರ ಕೊಯ್ಲಿಗೆ ಈ ಸೂರ್ಯಕಾಂತಿ ಹೂ ಸಿದ್ಧವಾಗಿರುತ್ತದೆ ಇದರಿಂದ ನಿರಂತರ ಕೃಷಿ ಮತ್ತು ಮಾರಾಟಕ್ಕೆ ಈ ತಡೆಯು ಹೆಚ್ಚಿ ಸೂಕ್ತವಾಗಿದೆ. ಅಲ್ಲದೆ 25° ಸೆಲ್ಸಿಯಸ್ ನಿಂದ 35 ಡಿಗ್ರಿ ಸೆಲ್ಸಿಯಸ್ ನವರಿಗೆ ತಾಪಮಾನದಲ್ಲಿ ಇದು ಬೆಳೆಯುವುದರಿಂದ ಸೂಕ್ತ ಹವಾಮಾನವನ್ನು ಈ ತಳಿಯು ಹೊಂದಿರುತ್ತದೆ.

ಈ ತಳಿಯ ವಿಶೇಷತೆಗಳು :

ಬೆಂಗಳೂರು ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಈ ತಳಿಯು ಕೇವಲ 6 ಕೆ.ಜಿ ಬೀಜಗಳು ಪ್ರತಿ ಹೆಕ್ಟೇರ್ ಗೆ ಬೇಕಾಗುತ್ತದೆ. ಈ ತಳಿಯನ್ನು ಮರಳು ಮಿಶ್ರಿತ ಜೇಡಿಮಣ್ಣಿನಲ್ಲಿ ಬೆಳೆಯಬಹುದಾಗಿದೆ. ನಾಟಿ ಮಾಡುವಂತಹ ವಿಧಾನವೆಂದರೆ 30*30 ಸೆಂಟಿ ಮೀಟರ್ ಅಂತರದಲ್ಲಿ ಬೀಜಗಳನ್ನು 0.5 -1.10 ಇಂಚು ಆಳದಲ್ಲಿ ಬಿತ್ತನೆ ಮಾಡಬೇಕು. ವರ್ಷದ ಯಾವುದೇ ಸಮಯದಲ್ಲಿ ಹಬ್ಬದ ಋತು ಗಳಲ್ಲಿ ಹೆಚ್ಚಿನ ಲಾಭ ದೊಂದಿಗೆ ಈ ಬೆಳೆಯನ್ನು ಬೆಳೆಯಲು ಸೂಕ್ತವಾಗಿದೆ. ತಲ 15 ರೂಪಾಯಿಗಳವರೆಗೆ ಹೂಗಳನ್ನು ಪಡೆಯಬಹುದಾಗಿತ್ತು ಸುಮಾರು ಹತ್ತು ರೂಪಾಯಿಗೆ ಸಾಮಾನ್ಯವಾಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಾಲ್ಕರಿಂದ ಐದು ಲಕ್ಷ ರೂಪಾಯಿಗಳವರೆಗೆ ಪ್ರತೀ ಎಕರಿಗೆ ಆದಾಯವನ್ನು ಇದು ಪಡೆಯಬಹುದಾಗಿತ್ತು ಸಾಂಪ್ರದಾಯಿಕ ಸೂರ್ಯಕಾಂತಿ ಬೆಳೆಗಳನ್ನು ಈ ಬೆಳೆಯು ಮೀರಿಸುತ್ತದೆ.
ಈ ಬೆಳೆಯನ್ನು ಬೆಳೆಯಲು ಕೇವಲ 25000ಗಳನ್ನು ಪ್ರತೀಕರಿಗೆ ಖರ್ಚು ಮಾಡಬಹುದಾಗಿದ್ದು, ಇದರಿಂದ ಹೆಚ್ಚಿನ ಲಾಭವನ್ನೇ ಪಡೆಯಬಹುದಾಗಿದೆ.

ಬೆಂಗಳೂರಿನಲ್ಲಿ ಕೃಷಿ ಮೇಳ :

ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ವಿವರವಾದ ಕೃಷಿ ಪದ್ಧತಿಗಳು ಸೇರಿದಂತೆ ಈ ಸೂರ್ಯಕಾಂತಿ ದಳಿಯ ಸಮಗ್ರ ಪ್ರದರ್ಶನವನ್ನು ನವೆಂಬರ್ 17ರಿಂದ 20ರವರೆಗೆ ಆಯೋಜಿಸಲಾಗಿತ್ತು ಈ ಕೃಷಿ ಮೇಳಕ್ಕೆ ಭೇಟಿ ನೀಡಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೀಗೆ ಬೆಂಗಳೂರು ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ ಈ ಸೂರ್ಯಕಾಂತಿ ತಳಿವು ಹೆಚ್ಚಿನ ವಿಶೇಷತೆಯನ್ನು ಹೊಂದಿದ್ದು, ಈ ತಳಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ಬೆಂಗಳೂರಿನಲ್ಲಿ ನಡೆಯುವ ಕೃಷಿ ಮೇಳಕ್ಕೆ ಭೇಟಿ ನೀಡಿ ಇದರಿಂದ ಮಾಹಿತಿಯನ್ನು ಪಡೆದು ಈ ಬೆಳೆಯನ್ನು ಬೆಳೆದು ಸುಮಾರು ನಾಲ್ಕರಿಂದ ಐದು ಲಕ್ಷಗಳವರೆಗೆ ಆದಾಯವನ್ನು ಪಡೆಯಬಹುದಾಗಿದೆ. ಹಾಗಾಗಿ ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರು ಹಾಗೂ ಬಂಧು ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

Leave a Comment