ಹಲೋ ಸ್ನೇಹಿತರೇ, ರಾಜ್ಯದಲ್ಲಿ ಶಕ್ತಿ ಯೋಜನೆ ಯಶಸ್ವಿಯಾಗಿ ಜಾರಿಗೆ ಬಂದ ಬಳಿಕ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಪಡೆಯುವ ಮಹಿಳೆಯರ ಓಡಾಟ ಪ್ರಮಾಣ ಕೂಡ ಅಧಿಕವಾಗುತ್ತಿದೆ. ಇದೇ ನಿಟ್ಟಿನಲ್ಲಿ ಖಾಲಿಯಾಗಿ ಇರುತ್ತಿದ್ದ ಸರಕಾರಿ ಬಸ್ ಗಳು ಸದಾ ತುಂಬಿ ಹರಿಯುತ್ತಿದೆ. ಅದೇ ರೀತಿ ಶಕ್ತಿ ಯೋಜನೆ ಯಶಸ್ವಿಗೊಳಿಸಲು ಹೆಚ್ಚುವರಿಯಾಗಿ ಬಸ್ ಹಾಗೂ ಸಿಬ್ಬಂದಿಗಳ ನೇಮಕ ಮಾಡುವ ಬಗ್ಗೆ ಸರ್ಕಾರ ತೀರ್ಮಾನ ಕೂಡ ಕೈಗೊಂಡಿದ್ದು ಇದೀಗ ಇದರ ಬೆನ್ನಲ್ಲೇ ಮಹಿಳೆಯರಿಗೆ ಶಕ್ತಿ ಯೋಜನೆಯ ಮಿತಿ ನೆನಪಿಸುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ..
ಶಕ್ತಿ ಯೋಜನೆಯನ್ನು ಸರ್ಕಾರಿ ಸ್ವಾಮ್ಯದ ಎಲ್ಲ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುವ ಅವಕಾಶ ಇರದ ಕಾರಣ ಈ ಬಗ್ಗೆ ಮಹಿಳೆಯರು ಅರಿವು ಹೊಂದುವುದು ಅತ್ಯವಶ್ಯಕವಾಗಿದೆ. ಈಗಾಗಲೇ ರಾಜ್ಯದಲ್ಲಿ ಪಲ್ಲಕ್ಕಿ ಬಸ್ ಓಡಾಟಕ್ಕೆ ಮಾನ್ಯತೆಯನ್ನು ಸಹ ಸಿಗುತ್ತಿದ್ದು ಈ ಬಸ್ ನ್ನು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ವಿಧಾನಸೌದದ ಮುಂಭಾಗದಲ್ಲಿಯೇ ಚಾಲನೆಯನ್ನು ನೀಡಲಾಗಿದೆ. ಆದರೆ ಈ ಬಸ್ ಶಕ್ತಿ ಯೋಜನೆಯ ಅಡಿಯಲ್ಲಿ ಬರದೇ ಪ್ರತಿ ಪ್ರಯಾಣಿಕರು ಕೂಡ ಟಿಕೆಟ್ ಹಣ ನೀಡಿಯೇ ಕಡ್ಡಾಯವಾಗಿ ಪ್ರಯಾಣವನ್ನು ಮಾಡಬೇಕು.
ಪಲ್ಲಕ್ಕಿ ಯೋಜನೆ:
ಕೆಎಸ್ ಆರ್ಟಿಸಿ ನಲ್ಲಿ ಸಾಮಾನ್ಯ ಬಸ್ ನಂತೆಯೇ ನಾನ್ ಎಸಿ ಬಸ್ ಗಳಲ್ಲಿಯು ಕೂಡ ಜನರಿಗೆ ಚಿರ ಪರಿಚಿತವಾಗಿದ್ದು ಅನೇಕ ವರ್ಷಗಳಾದರೂ ನಾನ್ ಎಸಿ ಬಸ್ ಗಳಿಗೆ ಹೆಸರಿಟ್ಟಿರಲಿಲ್ಲ ಆದರೆ ಈಗ ಈ ಯೋಜನೆ ಮುಖೇನ ಹೆಸರಿಡಲಾಗುತ್ತಿದೆ. ಪಲ್ಲಕ್ಕಿ ಎನ್ನುವ ಹೆಸರಿನ ಮೂಲಕ ನಾನ್ ಎಸಿ ಸೇವೆ ಪುನಃ ಪುನರಾರಂಭವಾಗಿದೆ. ಹಾಗಿದ್ದರೂ ಮಹಿಳೆಯರ ಶಕ್ತಿ ಯೋಜನೆಯಲ್ಲಿ ಅನ್ವಯ ಆಗಲಾರದು. ಹೀಗಾಗಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಪಲ್ಲಕ್ಕಿ ಹೆಸರನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರೇ ಸೂಚನೆಯನ್ನು ನೀಡಿದ್ದರು ಅದರಂತೆ ಈಗ ಪಲ್ಲಕ್ಕಿ ಹೆಸರಿನೊಂದಿಗೆ ನಾನ್ ಎಸಿ ಬಸ್ ರಿ ಎಂಟ್ರಿ ಕೊಟ್ಟಿದೆ ಎಂದು ಬಹಿರಂಗ ಪಡಿಸಿದರು.
ನಿರುದ್ಯೋಗಿ ಯುವಕರಿಗೆ ಗುಡ್ ನ್ಯೂಸ್.! ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಕೇಂದ್ರದಿಂದ 90 ಸಾವಿರ ರೂ ನೇರ ಖಾತೆಗೆ ಜಮೆ
ಈ ಬಾರಿ ಪಲ್ಲಕ್ಕಿ ಬಸ್ ನಲ್ಲಿ ಅನೇಕ ವಿಶೇಷತೆ ಇರುವುದು ಕಾಣಬಹುದು. ನಾನ್ ಎಸಿ ಬಸ್ ಅನ್ನು ಅತ್ಯಂತ ಲಕ್ಶೂರಿಯಾಗಿ ಪರಿಚಯಿಸಲಾಗುತ್ತಿದೆ. 148ಬಸ್ ನಲ್ಲಿ 40ನಾನ್ ಎಸಿ ಬಸ್ ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಟಾಟಾ ಮತ್ತು ಅಶೋಕಾ ಲೇಲ್ಯಾಂಡ್ ಕಂಪೆನಿಗೆ ಸೇರಿದ್ದ ಬಸ್ ನಲ್ಲಿ ವಿಭಾಗವನ್ನು ಕಾಣಬಹುದು. ಅಶೋಕ ಲೇಲ್ಯಾಂಡ್ ಕಂಪೆನಿ ಇಂದ 40 ನಾನ್ ಎಸಿ ಸ್ಲೀಪರ್ ಹಾಗೂ 100 ನಗರ ಸಾರಿಗೆ ಬಸ್ ಗಳು ಇದೆ. 40 ನಾನ್ ಎಸಿ ಬಸ್ ನಲ್ಲಿ 30 ರಾಜ್ಯದ ಒಳಗೆ ಹಾಗೂ 10 ಹೊರ ರಾಜ್ಯಕ್ಕೆ ಈ ಬಸ್ ಪ್ರಯಾಣಿಸಲಿದೆ. ಅದೇ ರೀತಿ ಟಾಟಾ ಕಂಪೆನಿಯಿಂದ 4ನಾನ್ ಎಸಿ ಸ್ಲೀಪರ್ ಕೋಚ್ ಮತ್ತು 4 ಎಸಿ ಸ್ಲೀಪರ್ ಕೋಚ್ ಬಸ್ ಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಉಳಿದ 100 ನಗರ ಸಾರಿಗೆ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ ಅನ್ವಯ ಆಗಲಿದೆ.
ಈ ವಿಶೇಷತೆ ಇರಲಿದೆ:
- ಬಸ್ ಅತ್ಯಂತ ಲಕ್ಶೂರಿ ವಿಧಾನದಲ್ಲಿ ಮಾಡಲಾಗಿದ್ದು ಆಡಿಯೋ ಸ್ಪೀಕರ್ ಮೂಲಕ ಪ್ರಯಾಣಿಕರಿಗೆ ಗೈಡ್ ಲೈನ್ ನೀಡಲಾಗುವುದು.
- BS6ಮಾದರಿಯಲ್ಲಿ ಹೆಚ್‌ಪಿ ಇಂಜಿನ್ ಅಳವಡಿಕೆ ಇದರಲ್ಲಿ ಇರಲಿದೆ.
- ಮಲಗಲು ದಿಂಬಿನ ವ್ಯವಸ್ಥೆ ಇರಲಿದೆ.
- ಚಪ್ಪಲಿ, ನೀಡಿನ ಬಾಟಲ್ ಇಡಲು ಪ್ರತ್ಯೇಕ ಸ್ಥಳಾವಕಾಶ ಇರಲಿದೆ.
- ಡಿಜಿಟಲ್ ಗಡಿಯಾರದ ಜೊತೆಗೆ ಎಲ್‌ಇಡಿ ಫ್ಲೋರ್ ಸಹ ಇರಲಿದೆ.
- ಚಾಲಕರಿಗೆ ಮತ್ತು ನಿರ್ವಾಹಕರಿಗೆ ಪ್ರಯಾಣಿಕರ ಬಗ್ಗೆ ತಿಳಿಯಲು ಹೈಟೆಕ್ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.
- ಮೊಬೈಲ್ ಸ್ಟ್ಯಾಂಡ್ ವ್ಯವಸ್ಥೆ ಇರಲಿದೆ.
- ಇದು ಹೈಟೆಕ್ ಬಸ್ ಆಗಿರಲಿದ್ದು 30 ಸ್ಲೀಪರ್ ಬರ್ತ್ ಸೀಟ್ ಗಳು ಇರಲಿವೆ.
- ಸೀಟ್ ನಂಬರ್ ನ ಮೇಲೆ ಎಲ್‌ಇಡಿ ಅಳವಡಿಕೆ ಇರಲಿದೆ. ಓದಲು ಇತರ ಪ್ರಕ್ರಿಯೆಗಳಿಗೆ ನಿರವಾಗಲಿದೆ.
- ಪ್ರತೀ ಸೀಟುಗಳಲ್ಲಿ ಮೊಬೈಲ್ ಹಾಗೂ ಲ್ಯಾಪ್ ಟಾಪ್ ಚಾರ್ಜಿಂಗ್ ವ್ಯವಸ್ಥೆ ಇರಲಿದೆ.
ಇತರೆ ವಿಷಯಗಳು
ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ಏನಿದು ಹೊಸ ನಿಯಮ??
ಸ್ವಂತ ಮನೆ ಕನಸು ಇನ್ನು ದುಬಾರಿ.!! 3 ತಿಂಗಳಲ್ಲಿ ಮನೆ ಬೆಲೆ ಏರಿಕೆ; ಯಾಕೆ ಗೊತ್ತಾ??