ನಮಸ್ಕಾರ ಸ್ನೇಹಿತರೆ, ಎಲ್ಲರಿಗೂ ತಿಳಿದಿರುವ ಹಾಗೆ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಒಂದಾದ ವಾಟ್ಸಾಪ್ ತನ್ನ ಬಳಕೆದಾರರಿಗೆ ಸಾಕಷ್ಟು ಅನುಕೂಲಗಳನ್ನು ತರುವಂತಹ ಫೀಚರ್ಸ್ ಗಳನ್ನು ಪರಿಚಯಿಸುತ್ತಿದೆ. ಈ ವಾಟ್ಸಪ್ ನಲ್ಲಿ ಇದೀಗ ಗೌಪ್ಯತೆಗೆ ಸಂಬಂಧಿಸಿದಂತಹ ಹೊಸ ಎಲ್ಲರಿಗಿಂತ ವಾಟ್ಸಾಪ್ ಮುಂಚೂಣಿಯಲ್ಲಿದೆ. ಪ್ರಮುಖವಾಗಿ ಅನಗತ್ಯ ಸಂಖ್ಯೆಗಳನ್ನು ಇವುಗಳಲ್ಲಿ ಬ್ಲಾಕ್ ಮಾಡುವ ಆಯ್ಕೆಯೂ ಕೂಡ ಒಂದಾಗಿದ್ದು ವಾಟ್ಸಪ್ ಫೀಚರ್ಸ್ ಅನ್ನು ಹೇಗೆ ಬಳಕೆ ಮಾಡುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳಬಹುದು.
ವಾಟ್ಸಪ್ ನಲ್ಲಿ ಹೊಸ ಫ್ಯೂಚರ್ :
ನೀವು ಅನಗತ್ಯ ಕರೆಗಳನ್ನು ವಾಟ್ಸಪ್ ನಲ್ಲಿ ಅಥವಾ ಅಪರಿಚಿತ ಸಂಖ್ಯೆಗಳನ್ನು ಬ್ಲಾಕ್ ಮಾಡುವುದಕ್ಕಾಗಿ ಇದೀಗ ವಾಟ್ಸಪ್ ನ ಮೇಟಾ ಕಂಪನಿಯು ಅವಕಾಶ ಕಲ್ಪಿಸಿದೆ. ಇದರಿಂದಾಗಿ ನೀವು ನಿಮ್ಮನ್ನು ಅನಗತ್ಯ ಮೆಸೇಜ್ ಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಕಿರುಕುಳ ಸಂದೇಶಗಳಿಂದ ಅಥವಾ ಡ್ಯಾಮ್ ಗಳಿಂದ ಮುಕ್ತಿಯನ್ನು ಪಡೆಯಬಹುದಾಗಿದೆ. ಹೀಗೆ ಅನಗತ್ಯ ಸಂಖ್ಯೆಗಳಿಂದ ಬರುವ ಕರೆ ಹಾಗೂ ಸಂದೇಶಗಳನ್ನು ವಾಟ್ಸಾಪ್ನಲ್ಲಿ ಬ್ಲಾಕ್ ಮಾಡುವ ವಿಧಾನ ಹೇಗೆ ಎಂಬುದನ್ನು ನೋಡುವುದಾದರೆ,
ಅನಗತ್ಯ ಎನಿಸುವ ನಂಬರ್ ಗಳನ್ನು ವಾಟ್ಸಪ್ ನಲ್ಲಿ ಬ್ಲಾಕ್ ಮಾಡುವ ವಿಧಾನ :
ಅನಗತ್ಯ ಎನಿಸುವಂತಹ ನಂಬರ್ ಗಳನ್ನು ನೀವು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಬೇಕಾದರೆ ಕೆಲವೊಂದು ಹಂತಗಳನ್ನು ಪೂರ್ಣಗೊಳಿಸಬೇಕು. ವಾಟ್ಸಪ್ ಅನ್ನು ಮೊದಲಿಗೆ ತೆರೆಯಬೇಕು. ಅದರಲ್ಲಿ ನೀವು ನಿಮಗೆ ಅನಗತ್ಯ ಎನಿಸುವ ಚಾಟ್ ಅನ್ನು ಓಪನ್ ಮಾಡಿ. ಚಾಟ್ ಅನ್ನು ಓಪನ್ ಮಾಡಿದ ನಂತರ ನಿಮಗೆ ಅದರಲ್ಲಿ ಚಾಟ್ ನ ಮೇಲಿನ ಬಲಮೂಲೆಯಲ್ಲಿರುವಂತಹ ಮೂರು ಡಾಟುಗಳನ್ನು ಟ್ಯಾಪ್ ಮಾಡಬೇಕಾಗುತ್ತದೆ. ಡಾಟ್ಗಳನ್ನು ಟ್ಯಾಪ್ ಮಾಡಿದ ನಂತರ ನೀವು ಇನ್ನಷ್ಟು ಆಪ್ ಅಥವಾ ಬ್ಲಾಕ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ಇದನ್ನು ಖಚಿತಪಡಿಸಲು ಮತ್ತೊಮ್ಮೆ ಬ್ಲಾಕ್ ಆಯ್ಕೆಯನ್ನು ಟ್ಯಾಪ್ ಮಾಡಬೇಕಾಗುತ್ತದೆ.
ವಾಟ್ಸಪ್ ನಂಬರ್ ಅನ್ನು ಬ್ಲಾಕ್ ಮಾಡಲು ಇನ್ನೊಂದು ಆಯ್ಕೆಯನ್ನು ಸಹ ಮಾಡಬಹುದು. ಅದು ಹೇಗೆಂದರೆ ನಿಮ್ಮ ವಾಟ್ಸಪ್ ಅನ್ನು ಮೊದಲಿಗೆ ತೆರೆದು ಅದರಲ್ಲಿ ಸೆಟ್ಟಿಂಗ್ಸ್ ನಲ್ಲಿ ಪ್ರೈವಸಿ ಹಾಗೂ ಬ್ಲಾಕ್ ಕಾಂಟ್ಯಾಕ್ಟ್ ಗಳಿಗೆ ಹೋಗುವುದರ ಮೂಲಕ ಇದರಲ್ಲಿ ಟ್ಯಾಪ್ ಮಾಡಿ ನಿಮಗೆ ಅನಗತಿ ಅನಿಸುವಂತ ಸಂಖ್ಯೆಗಳನ್ನು ಹುಡುಕುವುದರ ಮೂಲಕ ಅದನ್ನು ಆಯ್ಕೆ ಮಾಡಿ ಟ್ಯಾಪ್ ಮಾಡಿದ ನಂತರ ಬ್ಲಾಕ್ ಅನ್ನು ಮಾಡಲು ಖಚಿತಪಡಿಸಿಕೊಂಡು ಟ್ಯಾಪ್ ಮಾಡಿ. ಹೀಗೆ ವಾಟ್ಸಪ್ ನಲ್ಲಿ ನೀವು ಈ ಮೂಲಕ ಅನಗತ್ಯ ಸಂಖ್ಯೆಗಳನ್ನು ಬ್ಲಾಕ್ ಮಾಡಬಹುದಾಗಿದೆ.
ಅಪರಿಚಿತ ಸಂಖ್ಯೆಗಳನ್ನು ಸೈಲೆಂಟ್ ಮಾಡುವ ವಿಧಾನ :
ಇತ್ತೀಚಿಗೆ ತನ್ನ ಬಳಕೆದಾರರಿಗೆ ವಾಟ್ಸಾಪ್ ಅಪರಿಚಿತ ಸಂಖ್ಯೆಗಳಿಂದ ಬರುವಂತಹ ಕರೆಗಳನ್ನು ಸೈಲೆಂಟ್ ಮಾಡುವುದಕ್ಕೂ ಸಹ ಅವಕಾಶವನ್ನು ಕಲ್ಪಿಸಿದೆ. ಇದರಿಂದಾಗಿ ನೀವು ಅಪರಿಚಿತ ವಾಟ್ಸಪ್ ಕರೆ ಯಾವುದೇ ಬಂದರೂ ಸಹ ಅದನ್ನು ಸೈಲೆನ್ಸ್ ಸೇರಿಸಬಹುದಾಗಿದೆ. ಬಳಕೆದಾರರಿಗೆ ವರ್ದಿತ ಗೌಪ್ಯತೆ ಮತ್ತು ಕರೆ ನಿರ್ವಹಣೆಯನ್ನು ಸೈಲೆನ್ಸ್ ಅನೌನ್ ಕಾಲ್ ಫೀಚರ್ಸ್ನಲ್ಲಿ ವಿನ್ಯಾಸಗೊಳಿಸಲಾಗಿದೆ. ಇದರಿಂದಾಗಿ ಹಗರಣಗಳು ಸ್ಟ್ಯಾಂಡ್ ಮತ್ತು ಪರಿಚಯವಿಲ್ಲದ ಸಂಖ್ಯೆಗಳಿಂದ ಕರೆಗಳ ವಿರುದ್ಧ ಪರಿಣಾಮಕಾರಿಯಾಗಿ ಇದು ರಕ್ಷಣೆಯಾಗಿ ಕಾರ್ಯನಿರ್ವಹಿಸುತ್ತದೆ.
ವಾಟ್ಸಾಪ್ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ :
ವಾಟ್ಸಪ್ ಭಾರತದಲ್ಲಿ ತನ್ನ ಸೆಪ್ಟೆಂಬರ್ ತಿಂಗಳ ಮಾಸಿಕ ವರದಿಯನ್ನು ಇನ್ನು ಇದೇ ಸಮಯದಲ್ಲಿ ಬಿಡುಗಡೆ ಮಾಡಿದೆ. ಒಟ್ಟು 71.1 ಲಕ್ಷ ಖಾತೆಗಳನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ವಾಟ್ಸಪ್ ಬ್ಯಾನ್ ಮಾಡಿರುವುದಾಗಿ ಹೇಳಿದೆ. ವಾಟ್ಸಾಪ್ ಈ ಕ್ರಮವನ್ನು ಭಾರತದ ಇತಿ ನಿಯಮಗಳ ಅನ್ವಯ ಕೈಗೊಂಡಿರುವ ಹೇಳಿಕೊಂಡಿದೆ. ಇದು ಸೆಪ್ಟೆಂಬರ್‌ನ ಒಂದು ಮೂವತ್ತರ ನಡುವಿನ ವರದಿ ಎಂದು ವಾಟ್ಸಾಪ್ ಹೇಳಿಕೊಂಡಿದ್ದು ಇದರಲ್ಲಿ ಸುಮಾರು 25.7 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ರಿಪೋರ್ಟ್ ಸ್ವೀಕರಿಸದೆ ಪೂರ್ವಭಾವಿಯಾಗಿ ಬ್ಯಾನ್ ಮಾಡಿರುವುದಾಗಿ ಈ ಮೂಲಕ ತಿಳಿಸಿದೆ. ವಾಟ್ಸಾಪ್ ಕಂಪನಿಯು ಈ ರೀತಿ ಮಾಡಿರುವುದು ತನ್ನ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ತೆಗೆದುಕೊಂಡಂತಹ ನಿರ್ಧಾರವಾಗಿದೆ ಎಂದು ಹೇಳಿಕೊಂಡಿದೆ. ವಾಟ್ಸಾಪ್ ಫ್ಲಾಟ್ ಫಾರ್ಮ್ ದೂರುಗಳ ಮೇಲ್ಮನವಿ ಸಮಿತಿಯಿಂದ ಈ ಅವಧಿಯಲ್ಲಿ ಆರು ಆದೇಶಗಳನ್ನು ಸ್ವೀಕರಿಸಿದೆ. ಅಲ್ಲದೆ ಈ ಆರು ಆದೇಶಗಳನ್ನು ಸಹ ಅನುಸರಿಸಲಾಗಿದೆ ಎಂದು ಹೇಳಲಾಗಿದ್ದು ಸೆಪ್ಟೆಂಬರ್ ನಲ್ಲಿ 1031 ಬ್ಯಾಂಕ್ ಖಾತೆಯ ಬೆಂಬಲವಾಗಿದ್ದು. 396 ಮೇಲ್ಮನವಿ 1518 ಇತರ ಬೆಂಬಲ 370 ಉನ್ನತ ಬೆಂಬಲ ಹಾಗೂ 127 ಸುರಕ್ಷತೆ ಎಲ್ಲವನ್ನು ಸೇರಿ 10442 ಬಳಕೆದಾರರ ವರದಿಗಳನ್ನು ವಾಟ್ಸಾಪ್ ಸ್ವೀಕರಿಸಿರುವುದಾಗಿ ಹೇಳಿದೆ.
ಹೀಗೆ ವಾಟ್ಸಪ್ ಕಂಪನಿಯು ತನ್ನ ಗ್ರಾಹಕರಿಗಾಗಿ ಅನಗತ್ಯ ಕರೆ ಗಳಿಂದ ದೂರ ಇಡುವ ಸಲುವಾಗಿ ಈ ಹೊಸ ಫೀಚರ್ಸ್ ಅನ್ನು ಬಿಡುಗಡೆ ಮಾಡಿದ್ದು ಇದರಿಂದ ಗ್ರಾಹಕರು ಸುಲಭವಾಗಿ ಅನಗತ್ಯ ಕರೆಗಳಿಂದ ವಂಚಿತರಾಗದೆ ಇರಬಹುದು. ಹಾಗಾಗಿ ಇವತ್ತಿನ ದಿನಮಾನಗಳಲ್ಲಿ ಎಲ್ಲರೂ ಸಹ ವಾಟ್ಸಪ್ ಅನ್ನು ಬಳಸುತ್ತಿದ್ದು ಈ ಮಾಹಿತಿಯನ್ನು ನಿಮ್ಮೆಲ್ಲ ಸ್ನೇಹಿತರಿಗೂ ಶೇರ್ ಮಾಡುವುದರ ಮೂಲಕ ವಾಟ್ಸಪ್ ನಲ್ಲಿ ಹೊಸ ಫೀಚರ್ಸ್ನ ಬಗ್ಗೆ ಅವರಿಗೆ ತಿಳಿಸಿ ಧನ್ಯವಾದಗಳು.