ಹಲೋ ಸ್ನೇಹಿತರೇ, ರಾಜ್ಯ ಸರಕಾರದಿಂದ 05 ಜನವರಿ 2024 ರಂದು ಮೊದಲ ಕಂತಿನ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ. ಕೃಷಿ ಇಲಾಖೆಯ ಪ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿರುವ ಮಾಹಿತಿಗೆ ಅನುಗುಣವಾಗಿ ರೈತರ ಖಾತೆಗೆ ಮೊದಲ ಕಂತಿನ ರೂ 2,000 ಜಮಾ ಆಗಲಿದೆ. ಯಾರಿಗೆಲ್ಲ ಜಮೆಯಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ತಮ್ಮ ವಿವರ ದಾಖಲಾಗಿರುವುದನ್ನು ನಿಮ್ಮ ಮೊಬೈಲ್ನಲ್ಲಿ ಹೇಗೆ ಖಚಿತಪಡಿಸಿಕೊಳ್ಳಬವುದು ಎಂಬುದನ್ನು ತಿಳಿಯಿರಿ.
2 ವಿಧಾನವನ್ನು ಅನುಸರಿಸಿ ರೈತರು ತಮ್ಮ ಜಮೀನು & ಬ್ಯಾಂಕ್ ವಿವರ ಕೃಷಿ ಇಲಾಖೆಯ ಪ್ರೂಟ್ಸ್ ವೆಬ್ಸೈಟ್ ನಲ್ಲಿ ದಾಖಲಾಗಿ FID ನಂಬರ್ ಸೃಜನೆ ಆಗಿರುತ್ತದೆ ಎಂದು ಚೆಕ್ ಮಾಡಿಕೊಳ್ಳಬಹುದು.
ವಿಧಾನ-1: ಹಳ್ಳಿವಾರು ಅರ್ಹ ರೈತರ ಪಟ್ಟಿ ಪಡೆಯುವಲ್ಲಿ ಹೆಸರನ್ನು ಚೆಕ್ ಮಾಡುವ ಮೂಲಕ:
ರೈತರ ತಮ್ಮ ಮೊಬೈಲ್ ಬಳಕೆ ಮಾಡಿಕೊಂಡು fruits ಜಾಲತಾಣವನ್ನು ಭೇಟಿ ಮಾಡಿ. ಜಿಲ್ಲೆ ಇತ್ಯಾದಿ ವಿವರಗಳನ್ನು ಈ ಕೆಳಗೆ ತಿಳಿಸಿರುವ ಹಂತವನ್ನು ಅನುಸರಿಸಿಕೊಂಡು ಹಳ್ಳಿವಾರು ಅರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ತಿಳಿದುಕೊಳ್ಳಿ.
ಈ ಪಟ್ಟಿಯು ಪಿ ಎಂ ಕಿಸಾನ್ ಯೋಜನೆಯಡಿ ನೋಂದಣಿಯಾದ ರೈತರ ಪಟ್ಟಿಯಾಗಿದ್ದು ಬಹುತೇಕ ಈ ಪಟ್ಟಿಯಲ್ಲಿರುವವರಿಗೆ FID ನಂಬರ್ ಇರುತ್ತದೆ ಈ ಪಟ್ಟಿ ಅನುಗುಣವಾಗಿಯೇ ಬರ ಪರಿಹಾರದ ಹಣ DBT ಮೂಲಕ ರೈತರ ಖಾತೆಗೆ ಜಮಾ ಆಗಲಿದೆ.
Step-1: ಮೊದಲಿಗೆ ಈ ಲಿಂಕ್ Parihara list ಮೇಲೆ ಕ್ಲಿಕ್ ಮಾಡಿಕೊಂಡು ಕೃಷಿ ಇಲಾಖೆಯೆ ಅಧಿಕೃತ ಪಿ ಎಂ ಕಿಸಾನ್ ಪ್ರೂಟ್ಸ್ ತಂತ್ರಾಂಶವನ್ನು ಭೇಟಿ ನೀಡಿ.
Step-2: ನಂತರ ಇಲ್ಲಿ ನಿಮ್ಮ ಜಿಲ್ಲೆ & ತಾಲ್ಲೂಕು, ಹೋಬಳಿ, ಗ್ರಾಮದ ಹೆಸರನ್ನು ಆಯ್ಕೆ ಮಾಡಿ “ವಿಕ್ಷೀಸು” ಬಟನ್ ಮೇಲೆ ಕ್ಲಿಕ್ ಮಾಡಿ. ಹಳ್ಳಿವಾರು ಅರ್ಹ ಫಲಾನುಭವಿ ಪಟ್ಟಿ ತೋರಿಸಿದ ನಂತರ ಒಮ್ಮೆ ಆ ಪಟ್ಟಿಯಲ್ಲಿ ನಿಮ್ಮ ಹೆಸರಿದಿಯಾ ಎಂದು ಚೆಕ್ ಮಾಡಿ. ಇದ್ದಲಿ ನಿಮಗೆ ರಾಜ್ಯ ಸರ್ಕಾರದಿಂದ ನೀಡುವ ಪರಿಹಾರದ ಹಣ ಯಾವುದೇ ತಾಂತ್ರಿಕ ತೊಂದರೆಯಿಲ್ಲದೆ ನಿಮ್ಮ ಖಾತೆಗೆ DBT ಮೂಲಕ ಜಮಾ ಆಗುತ್ತದೆ.
ವಿಧಾನ-2: ಆಧಾರ್ ನಂಬರ್ ಹಾಕಿ FID ನಂಬರ್ ಖಚಿತಪಡಿಸಿಕೊಳ್ಳುವುದರ ಮೂಲಕ:
ಈಗಾಗಲೇ ಸರ್ಕಾರದ ವಿವಿಧ ಇಲಾಖೆ ಮೂಲಕ ತಿಳಿಸಿರುವ ಮಾಹಿತಿಯ ಪ್ರಕಾರ ಈ ವರ್ಷ ಬರ ಪರಿಹಾರ ಹಣ ಪಡೆಯಲು FID ನಂಬರ್ ಕಡ್ಡಾಯ ಮಾಡಲಾಗಿದೆ. ಈ ನಂಬರ್ ಹೊಂದಿರುವವರಿಗೆ ಮಾತ್ರ ಪರಿಹಾರದ ಹಣ ಜಮಾ ಆಗಲಿದೆ ಎಂದು ಹೇಳಲಾಗಿದೆ.
ಇದರ ಪ್ರಕಾರ ರೈತರ ತಮ್ಮ ಅಧಾರ್ ನಂಬರ್ ಹಾಕಿ FID ನಂಬರ್ ಆಗಿರುವುದನ್ನು ದೃಢಪಡಿಸಿಕೊಂಡು ಈ ಕೆಳಗೆ ನೀಡಿರುವ ಲಿಂಕ್ನ್ನು ಬಳಕೆ ಮಾಡಿಕೊಂಡು ನಿಮ್ಮ ಅಧಾರ್ ನಂಬರ್ನ್ನು ಹಾಕಿ FID ನಂಬರ್ ರಚನೆ ಆಗಿದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದಾಗಿದೆ.
Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ FID number check ನಿಮ್ಮ 12 ಅಂಕಿಯ ಆಧಾರ್ ನಂಬರ್ ಅನ್ನು ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿ.
Step-2: “Search” ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಇಲ್ಲಿ 16 ಅಂಕಿಯ “FID1404**********” ಈ ರೀತಿಯ ಸಂಖ್ಯೆ ಕಾಣಿಸುತ್ತದೆ ಈ ಸಂಖ್ಯೆ ಬಂದರೆ ನಿಮ್ಮ FID ನಂಬರ್ ರಚನೆಯಾಗಿದೆ ಎಂದು ಒಂದೊಮ್ಮೆ “Data not found” ಎಂದು ತೋರಿಸಿದ್ದಲ್ಲಿ ನಿಮ್ಮ FID ನಂಬರ್ ರಚನೆಯಾಗಿಲ್ಲ ಎಂದರ್ಥ, ಆಗ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ಅಗತ್ಯ ದಾಖಲಾತಿಗಳನ್ನು ಒದಗಿಸಿ FID ಸಂಖ್ಯೆಯನ್ನು ರಚನೆ ಮಾಡಿಕೊಳ್ಳಿ.
ಇತರೆ ವಿಷಯಗಳು
ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್.! ಇನ್ಮುಂದೆ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಡಬಲ್ ಹಣ
ಗೀಸರ್ ಬಳಕೆದಾರರೇ ಹುಷಾರ್.!! ಒಮ್ಮೆ ಈ ತಪ್ಪು ಮಾಡಿದ್ರೆ ಮುಗಿತು ನಿಮ್ಮ ಕಥೆ