rtgh

ಅಂಗಡಿ ಮಾಲಿಕರೇ ಹುಷಾರ್.!!‌ ನಿಮ್ಮ ಅಂಗಡಿ ಬೋರ್ಡ್‌ ಈ ರೀತಿ ಇದ್ರೆ ಬೀಳುತ್ತೆ ಭಾರೀ ದಂಡ

ಹಲೋ ಸ್ನೇಹಿತರೇ, ಅಂಗಡಿ ಮಾಲೀಕರಿಗೆ ಮಹತ್ವದ ಸೂಚನೆ ಒಂದನ್ನು ಹೊರಡಿಸಿದ್ದು 2024 ಫೆಬ್ರುವರಿ ತಿಂಗಳ ಅಂತ್ಯದ ಒಳಗೆ ಈ ಕೆಲಸ ಮಾಡದೆ ಇದ್ದರೆ ಬಾರಿ ಪ್ರಮಾಣದ ದಂಡ ತೆರಬೇಕಾದೀತು ಎಂದು ಎಚ್ಚರಿಕೆ ನೀಡಿದೆ. ಈ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

BBMP new rules for local shops

ಕರ್ನಾಟಕದಲ್ಲಿ ಯಾವುದೇ ಅಂಗಡಿ ಅಥವಾ ಸಂಸ್ಥೆಗಳಿರಲ್ಲಿ ತಮ್ಮ ಬೋರ್ಡ್ ನಲ್ಲಿ ಕನ್ನಡವನ್ನೇ ಹೆಚ್ಚಾಗಿ ಬಳಸಬೇಕು ಕನ್ನಡಕ್ಕೆ ಪ್ರಮುಖ ಸ್ಥಾನವನ್ನು ಬೋರ್ಡ್ ಗಳಲ್ಲಿಯೂ ನೀಡಬೇಕು ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ವಾಣಿಜ್ಯ ಸಂಸ್ಥೆಗಳು ತಮ್ಮ ಸಂಸ್ಥೆಯ ಮುಂದೆ ಹಾಕಿರುವ ನಾಮಫಲಕದಲ್ಲಿ ಕನಿಷ್ಠ 60% ನಷ್ಟಾದರೂ ಕನ್ನಡ ಅಕ್ಷರವನ್ನು ಬಳಸಬೇಕು. ಒಂದು ವೇಳೆ ಈ ಕೆಲಸ ಮಾಡದೆ ಇದ್ದರೆ ತಮ್ಮ ಟ್ರೇಡ್ ಲೈಸೆನ್ಸ್ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.

ವಾಣಿಜ್ಯ ಸಂಸ್ಥೆಗಳಿಗೆ ಶೀರ್ಘದಲ್ಲಿಯೇ ನೋಟಿಸ್ ಜಾರಿ

ವಾಣಿಜ್ಯ ಸಂಸ್ಥೆಗಳು ತಮ್ಮ ಹೆಸರಿನ ಫಲಕದಲ್ಲಿ ಕನ್ನಡವನ್ನು 60% ನಷ್ಟಾದರೂ ಬಳಸಲೇಬೇಕು ಎಂದು ರಾಜ್ಯ ಸರ್ಕಾರ ತಿಳಿಸಿದೆ. ಶೀಘ್ರದಲ್ಲಿಯೇ ಈ ನಿಯಮವನ್ನು ಅನುಸರಿಸದೇ ಇರುವ ಸಂಸ್ಥೆಗಳನ್ನು ಗುರುತಿಸಿ ಅವರಿಗೆ ನೋಟಿಸ್ ಕಳುಹಿಸಲಾಗುತ್ತದೆ ಎಂದು ಬೆಂಗಳೂರು ಬೃಹತ್ ನಗರ ಪಾಲಿಕೆ ಅಧಿಕಾರಿ ತಿಳಿಸಿದ್ದಾರೆ.

ಕನ್ನಡ ಬಳಕೆ ಉತ್ತೇಜಿಸಲು ಈ ಕ್ರಮ

ಬೆಂಗಳೂರು ಎಂದು ಮಹಾನಗರವಾಗಿ ಹೊರಹೊಮ್ಮಿದ್ರೂ ಕೂಡ ಭಾರತದ ಐಟಿ ರಾಜಧಾನಿಯಲ್ಲಿ ಕನ್ನಡ ಪ್ರಮುಖ ಭಾಷೆಯಾಗಿ ಇಂದಿಗೂ ತನ್ನ ಸ್ಥಾನ ಪಡೆದುಕೊಂಡಿದೆ. ಆದರೆ ಅನೇಕ ಇತರ ರಾಜ್ಯದ ನಿವಾಸಿಗಳು ಕನ್ನಡಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಾರೆ. ಕನ್ನಡ ಭಾವನಾತ್ಮಕ ಸಮಸ್ಯೆಯಾಗಿ ಕನ್ನಡಿಗರನ್ನು ಕಾಡಲು ಶುರುಮಾಡಿದೆ. ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಕನ್ನಡಕ್ಕೆ ಸಲ್ಲ ಬೇಕಾಗಿರುವ ಗೌರವ ಸಲ್ಲಬೇಕು ಎಂದು ಈ ಹೊಸ ಶರತ್ತನ್ನು ಎಲ್ಲಾ ವಾಣಿಜ್ಯ ಸಂಸ್ಥೆಗಳು ಅಂಗಡಿಗಳು ರೆಸ್ಟೋರೆಂಟ್ ಗಳು ಪಾಲಿಸಬೇಕು ಎಂದು ಬಿಬಿಎಂಪಿ ತಿಳಿಸಿದೆ.

ನಿರುದ್ಯೋಗಿ ಯುವಕರಿಗೆ ಗುಡ್‌ ನ್ಯೂಸ್.!‌ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಕೇಂದ್ರದಿಂದ 90 ಸಾವಿರ ರೂ ನೇರ ಖಾತೆಗೆ ಜಮೆ


ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗಡಿ ಅಥವಾ ವಾಣಿಜ್ಯ ಸಂಸ್ಥೆಗಳ ನಾಮಫಲಕದಲ್ಲಿ ಕನ್ನಡ ಅಕ್ಷರವನ್ನು ಹೆಚ್ಚಾಗಿ ನಮೂದಿಸಬೇಕು ಎಂದು ತಿಳಿಸಲಾಗಿದೆ. ಬಿಬಿಎಂಪಿ ನಿಯಮದ ಅನುಸಾರ ನಾಗರಿಕ ಸಮೀಕ್ಷೆ ನಡೆಸಲು 1400 ಕಿಲೋಮೀಟರ್ ವ್ಯಾಪ್ತಿಯಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳನ್ನು ಸಮೀಕ್ಷೆ ಮಾಡಿ ಆ ವ್ಯಾಪ್ತಿಯಲ್ಲಿ ಬರುವ ಅಂಗಡಿಗಳ ನಾಮಫಲಕವನ್ನು ಗುರುತಿಸಲಾಗುವುದು ಒಂದು ವೇಳೆ ಕನ್ನಡ ನಾಮಫಲಕವು ಕಾಣಿಸದೆ ಇದ್ದರೆ ತಕ್ಷಣವೇ ಮಾಲೀಕರಿಗೆ ನೋಟಿಸ್ ಅನ್ನು ಕಳುಹಿಸಲಾಗುವುದು. ಕನ್ನಡ ನಾಮ ಫಲಕ ಹಾಕಲು ಫೆಬ್ರುವರಿ 28 2024ರ ವರೆಗೆ ಮಾತ್ರ ಗಡುವು ನೀಡಲಾಗುವುದು ಎಂದು ಬಿಬಿಎಂಪಿಯು ತಿಳಿಸಿದೆ.

ಸರ್ವೇ ಕೆಲಸವನ್ನು ಬಿಬಿಎಂಪಿ ವಲಯದ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುವುದು. ಈಗಾಗಲೇ ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿ ಮಾಲ್ ಗಳ ಮಾಲೀಕರಿಗೆ 15 ರಿಂದ 20 ದಿನಗಳ ಒಳಗೆ ಕನ್ನಡ ನಾಮಫಲಕ ಹಾಕಲು ಗಡುವು ನೀಡಲಾಗಿದೆ. ಒಂದು ವೇಳೆ ಈ ಕೆಲಸ ಮಾಡದೆ ಇದ್ದರೆ ಅಂತವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಯಾವ ರೀತಿಯಲ್ಲಿ ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಇನ್ನು ನಿರ್ಧಾರವಾಗಿಲ್ಲ ಆದರೆ ದಂಡವನ್ನು ಮಾತ್ರ ದೊಡ್ಡ ಮೊತ್ತದಲ್ಲಿ ಪಾವತಿಸಬೇಕಾಗಬಹುದು. ಇದನ್ನ ತಪ್ಪಿಸಿಕೊಳ್ಳಬೇಕು ಅಂತ ಇದ್ರೆ ಕರ್ನಾಟಕದಲ್ಲಿ ಕನ್ನಡ ನಾಮಫಲಕ ಹಾಕಲು ಹಿಂಜರಿಯಬೇಡಿ ಎಂದು ಬಿಬಿಎಂಪಿ ಮುಖ್ಯಸ್ಥರು ತಿಳಿಸಿದ್ದಾರೆ.

ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ‌ಏನಿದು ಹೊಸ ನಿಯಮ??

ಸ್ವಂತ ಮನೆ ಕನಸು ಇನ್ನು ದುಬಾರಿ.!! 3 ತಿಂಗಳಲ್ಲಿ ಮನೆ ಬೆಲೆ ಏರಿಕೆ; ಯಾಕೆ ಗೊತ್ತಾ??

Leave a Comment