rtgh

ದೊಡ್ಮನೆಗೆ ರಾಯಲ್‌ ವೈಲ್ಡ್‌ ಕಾರ್ಡ್‌ ಎಂಟ್ರಿ.!! ಒಂದೇ ಕ್ಷಣದಲ್ಲಿ ಬದಲಾಯ್ತು ಮನೆ ವಾತಾವರಣ

ನಮಸ್ಕಾರ ಸ್ನೇಹಿತರೇ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್ 10 ಈಗಾಗಲೇ 50 ದಿನ ಪೂರೈಸಿದ್ದು, ಅಲ್ಲಿರುವ ಎಲ್ಲ ಕಂಟೆಸ್ಟಂಟ್‌ಗಳು 7ನೇ ವಾರದ ಕಿಚ್ಚನ ಜೊತೆ ವಾರದ ಕಥೆಯಲ್ಲಿ ಕೇಕ್‌ ಕತ್ತರಿಸಿ ಸಂಭ್ರಮಿಸಿದ್ದಾರೆ. ಈಗ ವೈಲ್ಡ್ ಕಾರ್ಡ್‌ ಎಂಟ್ರಿಯಲ್ಲಿ ಮತ್ತೊಬ್ಬ ಸ್ಪರ್ಧಿಯಾಗಿ ಒಟಿಟಿ ಬಿಗ್‌ಬಾಸ್‌ ಸ್ಪರ್ಧಿಯಾಗಿದ್ದ ಉದಯ್‌ ಸೂರ್ಯ ಮನೆಯೊಳಗೆ ಬರಲಿದ್ದಾನೆ ಎಂಬ ಸುದ್ದಿ ಕೇಳಿಬರುತ್ತಿದೆ.

bigg boss kannada ten wild card entry

ಹೌದು, ಬಿಗ್‌ಬಾಸ್‌ ಸೀಸನ್‌ 10ರ ಹೊಸ ಮನೆಯ ಮುಂದೆ ನಿಂತುಕೊಂಡಿರುವ ಉದಯ್ ಸೂರ್ಯ ಅವರು ತಾನು ಮನೆಯ ಒಳಗೆ ಹೋಗುವುದಾಗಿ ಕೈ ತೋರಿಸಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಬಿಗ್‌ಬಾಸ್‌ ಮನೆಗೆ 50 ದಿನಗಳ ನಂತರ ಉದಯ್‌ ಸೂರ್ಯ ವೈಲ್ಡ್ ಕಾರ್ಡ್‌ ಎಂಟ್ರಿ ಕೊಡಲಿದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಇನ್ನು ಬಿಗ್‌ಬಾಸ್‌ ಮಾಹಿತಿ ನೀಡುವ ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಅಭ್ಯರ್ಥಿ ವೈಲ್ಡ್ ಕಾರ್ಡ್‌ ಎಂಟ್ರಿ ಕೊಡಲಿದ್ದಾರೆ ಎಂಬ ಪೋಸ್ಟ್ ಹಂಚಿಕೊಂಡಿದೆ. ಇದರಿಂದ ವೈಲ್ಡ್ ಕಾರ್ಡ್ ಎಂಟ್ರಿ ಕೊಡುವ ಸಾಧ್ಯತೆ ಹೆಚ್ಚಾಗಿದೆ.

ಇನ್ನು ಬಿಗ್‌ಬಾಸ್‌ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ 50 ದಿನಗಳನ್ನು ಪೂರೈಸಿದ್ದು, ಕೆಲವರು ಮನೆಯನ್ನು ಬಿಟ್ಟು ಎಲಿಮಿನೇಟ್‌ ಆಗಿ ಹೊರ ಹೋಗಿದ್ದಾರೆ. ಕಳೆದ ವಾರವಷ್ಟೇ ಡಬಲ್‌ ಎಲಿಮಿನೇಷನ್ ಮೂಲಕ ಇಶಾನಿ ಹಾಗೂ ಧಾರಾವಾಹಿ ನಟಿ ಭಾಗ್ಯಶ್ರೀರವರು ಹೊರ ಬಂದಿದ್ದಾರೆ. ಜೊತೆಗೆ, ಸ್ನೇಕ್ ಶ್ಯಾಮ್, ರಕ್ಷಕ್‌ ಬುಲೆಟ್ ಅವರೂ ಮನೆಯಿಮದ ಹೊರ ಬಂದಿದ್ದಾರೆ.

ಹಣ ಉಳಿತಾಯ ಮಾಡಲು 3 ಸಲಹೆಗಳು : ಜೀವನವೇ ಬದಲಾಗುತ್ತದೆ ನೋಡಿ

ಇದರೊಂದಿಗೆ 7 ನೇ ವಾರದ ಅಂತ್ಯದಲ್ಲಿ ನೀತು ವನಜಾಕ್ಷಿ ಅವರು ಈಗ ಹೊರ ಬಂದಿದ್ದಾರೆ. ಈಗ ಬಿಬಿಕೆ ಅಭಿಮಾನಿಗಳು ಬಿಗ್‌ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್‌ ಎಂಟ್ರಿ ಕೊಡುವುದಾದರೆ ರಕ್ಷಕ್ ಬುಲೆಟ್ ಅವರಿಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ. ಆದರೆ, ಯಾರಿಗೆ ಈ ಅವಕಾಶ ಸಿಗುತ್ತದೆ ಎಂಬುದರ ಬಗ್ಗೆ ತಿಳಿದು ಬರಲಿದೆ..


ಅವರು ಯಾರೆಂಬುದನ್ನು ಅಧಿಕೃತವಾಗಿ ಹೇಳಲಾಗದಿದ್ದರೂ ಊಹೆ ಮಾಡಿ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗಿದೆ. ಗಾಸಿಪ್ ಆಧರಿಸಿ ಹೇಳುವುದಾದರೆ  ಇಂದು ಎಲಿಮಿನೇಟ್‌ ಆಗಲಿರುವ ಸ್ಪರ್ಧಿ ನೀತು ವನಜಾಕ್ಷಿ. ಸೋಷಿಯಲ್ ಮೀಡಿಯಾಗಳು ಹಾಗೂ ಹಲವು ಯೂಟ್ಯೂಬ್ ಜಾಲತಾಣಗಳಲ್ಲಿ ಸುದ್ದಿ ಹರಿಬಿಡಿರುವುದು ಸತ್ಯವಾಗಿದೆ. ಆದರೆ ಇದನ್ನು ಗಾಸಿಪ್ ಎನ್ನಬಹುದೇ ಹೊರತೂ ಅಧಿಕೃತ ಸುದ್ದಿ ಎನ್ನಲು ಸಾಧ್ಯವಿಲ್ಲ ಆದರೆ ಬಿಗ್‌ ಬಾಸ್‌ ತನ್ನ ಪ್ರೋಮೋವನ್ನು ಕೂಡ ಇದೀಗ ಸುದ್ದಿಯನ್ನು ಮಾಡಿದೆ. 

ಪ್ರತಿದಿನ ನಾಲ್ಕು ಸಾವಿರ ಗಳಿಸಿ, ಪುರುಷ ಮತ್ತು ಮಹಿಳೆಯರು ಈ ವಿಧಾನ ಬಳಸಿ

ಬೆಳೆ ವಿಮೆ ಹಣ ಬೇಕಾದರೆ ಫ್ರೂಟ್ಸ್ ಐಡಿ ಕಡ್ಡಾಯ ಕೂಡಲೇ ಈ ಕೆಲಸ ಮಾಡಿ

Leave a Comment