ಹಲೋ ಸ್ನೇಹಿತರೇ, ಫಲಾನುಭವಿ ರೈತರ ಖಾತೆಗೆ ಜನವರಿ 10, 2024 ರಂದು ಬರ ಪರಿಹಾರ ನಿಧಿ ಜಮಾ ಮಾಡಲಾಗಿದ್ದು, ರೈತರಿಗೆ ಜನ 2,000ಗಳನ್ನು ಖಾತೆಗೆ ವರ್ಗಾವಣೆ ಮಾಡಲಾಗಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಿರುವ ಮಾಹಿತಿಯ ಪ್ರಕಾರ ಬರಪೀಡಿತ ಪ್ರದೇಶದಲ್ಲಿ ವಾಸಿಸುವ ರೈತರ ಖಾತೆಗೆ ಮೊದಲ ಕಂತಿನ ಪರಿಹಾರ ನಿಧಿಯಾಗಿ ರೂ. 2,000ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲು
ಬರಪೀಡಿತ ಪ್ರದೇಶದ ರೈತರಿಗೆ ಹಣ ವರ್ಗಾವಣೆ ಆಗಿರುವುದರ ಬಗ್ಗೆ ಸರ್ಕಾರ ಈಗಾಗಲೇ ಮಾಹಿತಿ ನೀಡಿದೆ, ಫ್ರೂಟ್ಸ್ ತಂತ್ರಾಂಶ ಅಂಶದಲ್ಲಿ ಯಾವ ರೈತರು FID ಹೊಂದಿದ್ದಾರೋ ಅಂತವರ ಖಾತೆಗೆ ಹಣ ಜಮಾ ಮಾಡಲಾಗಿದೆ, ನೀವು ಈ ಫ್ರೂಟ್ಸ್ ತಂತ್ರಾಂಶದ ಅಡಿಯಲ್ಲಿ ಮೊಬೈಲ್ ಮೂಲಕವೇ ಯಾರ ಖಾತೆಗೆ ಹಣವನ್ನು ವರ್ಗಾವಣೆ ಆಗಿದೆ ಎಂಬುದನ್ನು ಸುಲಭವಾಗಿ ನೀವು ತಿಳಿದುಕೊಳ್ಳಬಹುದಾಗಿದೆ.
ಮೊಬೈಲ್ ನಲ್ಲಿ ತಿಳಿಯಿರಿ ಡಿಬಿಟಿ ಸ್ಟೇಟಸ್
ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ನೋಂದಾವಣೆ ಮಾಡಿಕೊಂಡಿರುವ ಹೆಸರಿನ ರೀತಿಯಲ್ಲಿ ಬರ ಪರಿಹಾರ ನಿಧಿಯನ್ನು ಕೂಡ ಬಿಡುಗಡೆ ಮಾಡಲಾಗಿದ್ದು, ಪಿ.ಎಂ ಕಿಸಾನ್ ಯೋಜನೆ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಬರ ಪರಿಹಾರವೂ ಕೂಡ ನಿಮ್ಮ ಖಾತೆಗೆ ಜಮಾ ಆಗುವ ಸಾಧ್ಯತೆ ಇರುತ್ತದೆ.
https://fruitspmk.karnataka.gov.in/MISReport/FarmerDeclarationReport.aspx ಪಿ ಎಂ ಫ್ರೂಟ್ಸ್ ತಂತ್ರಜ್ಞಾನದ ವೆಬ್ಸೈಟ್ಗೆ ಭೇಟಿ ನೀಡಿ. ಅನಂತರ ಈ ವೆಬ್ ಸೈಟ್ ನಲ್ಲಿ ಕೇಳಲಾಗಿರುವ ನಿಮ್ಮ ಜಿಲ್ಲೆ ಮತ್ತು ತಾಲೂಕು ಹಾಗೂ ಹೋಬಳಿ ಆಯ್ಕೆ ಮಾಡಿ ಸಲ್ಲಿಸು ಎನ್ನುವ ಬಟನ್ ನ ಮೇಲೆ ಕ್ಲಿಕ್ ಮಾಡಿ
ಬೈಕರ್‌ಗಳಿಗೆ ನಾಳೆಯಿಂದ ₹25,000 ದಂಡ ಫಿಕ್ಸ್! ಮನೆಯಿಂದ ಹೊರಹೋಗೋ ಮುನ್ನ ಈ ಹೊಸ ನಿಯಮ ಪಾಲಿಸಿ
ಈಗ ಫಲಾನುಭವಿಗಳ ಲಿಸ್ಟ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ನಿಮ್ಮ ಹೆಸರು ಇದ್ರೆ ಯಾವುದೇ ತೊಂದರೆ ಇಲ್ಲದೆ ನಿಮ್ಮ ಖಾತೆಗೆ ಬರ ಪರಿಹಾರ ನಿಧಿ ರೂ.2,000 ಜಮಾ ಆಗುತ್ತದೆ ಎಂದು ನೀವು ಭಾವಿಸಿಕೊಳ್ಳಬಹುದಾಗಿದೆ.
ಆಧಾರ್ ನಂಬರ್ ಹಾಕಿ FID ಖಚಿತಪಡಿಸಿಕೊಳ್ಳಿ.
FID ಹೊಂದಿರುವ ರೈತರಿಗೆ ಮಾತ್ರವೇ ಬರ ಪರಿಹಾರದ ನಿಧಿಯು ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ಈಗಾಗಲೇ ತಿಳಿಸಿದೆ. ಇದಕ್ಕಾಗಿ ನೀವು ನಿಮ್ಮ ಹೆಸರಿನಲ್ಲಿ FID ಇದಿಯೋ ಅಥವಾ ಇಲ್ಲವೋ ಎಂಬುದನ್ನು ಆಧಾರ್ ನಂಬರ್ ಹಾಕಿ ಖಚಿತ ಪಡಿಸಿಕೊಳ್ಳಿ. https://fruitspmk.karnataka.gov.in ಈ ವೆಬ್ಸೈಟ್‌ಗೆ ತೆರಳಿ, ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಸರ್ಚ್ ಎಂದು ಕ್ಲಿಕ್ ಮಾಡಿ.
ಈಗ 16 ಅಂಕಿಯ ಫ್ರೂಟ್ಸ್ ಐಡಿ ಕಾಣಿಸುತ್ತದೆ. ಒಂದು ವೇಳೆ ಡಾಟಾ ನಾಟ್ ಫೌಂಡ್ ಎನ್ನುವ ಸಂದೇಶ ಕಾಣಿಸಿದರೆ ನಿಮ್ಮ ಹೆಸರಿನಲ್ಲಿ FID ರಚನೆ ಆಗಿಲ್ಲ ಎಂದು ಅರ್ಥವಾಗುತ್ತದೆ. ಅಂತಹ ಸಂದರ್ಭದಲ್ಲಿ ನೀವು ಹತ್ತಿರದ ರೈತ ಕೇಂದ್ರಕ್ಕೆ ಹೋಗಿ ತಕ್ಷಣವೇ ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಿ.
ಇತರೆ ವಿಷಯಗಳು:
ಮಹಿಳೆಯರಿಗೆ ಹೈ ಕೋರ್ಟ್ ಮಹತ್ವದ ಆದೇಶ.! ಇನ್ಮುಂದೆ ಮಿಲಿಟರಿ ನರ್ಸಿಂಗ್‌ನಲ್ಲಿ 100% ಮೀಸಲಾತಿ
KEA ಪ್ರಕಟಣೆ: 5,151 ಸರ್ಕಾರಿ ಹುದ್ದೆಗಳ ಭರ್ತಿ.! ಆಸಕ್ತರು ಈ ಕೂಡಲೇ ಅಪ್ಲೇ ಮಾಡಿ