ನಮಸ್ಕಾರ ಸ್ನೇಹಿತರೇ, 2023-24 ನೇ ಸಾಲಿನಲ್ಲಿ ಮುಂಗಾರು ಮಳೆ ಕೊರತೆಯಿಂದ ಶಿವಮೊಗ್ಗ ತಾಲ್ಲೂಕು ತೀವ್ರ ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿದ್ದು, ಮುಂಗಾರು ವೈಫಲ್ಯವಾಗಿರುವುದರಿಂದ ತಾಲ್ಲೂಕಿನಲ್ಲಿ ವಿವಿಧ ಕೃಷಿ ಹಾಗೂ ಇತರೆ ಬೆಳೆಗಳು ಹಾನಿಯಾಗಿರುವ ಕಾರಣ, ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಬಿಡುಗಡೆಯಾಗುವ ಸಾಧ್ಯತೆ ಇದ್ದು, ಪರಿಹಾರ ಪಡೆಯಲು ತಾಲ್ಲೂಕಿನ ರೈತರು ಏನು ಮಾಡಬೇಕು ಎನ್ನುವುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ. ಹಾಗಾಗಿ ಕೊನೆವರೆಗೂ ತಪ್ಪದೇ ಓದಿ.
ಕರ್ನಾಟಕದ ಶಿವಮೊಗ್ಗ ತಾಲ್ಲೂಕಿನಾದ್ಯಂತ ಒಟ್ಟು 27,313 ಭೂ ಹಿಡುವಳಿದಾರರ ಬಳಿ ಒಟ್ಟು 76,044 ತಾಕುಗಳಿದ್ದು ಇದರಲ್ಲಿ ಕೇವಲ 43,738 ಸರ್ವೆ ನಂಬರ್ ಗಳನ್ನು ಮಾತ್ರ FRUITS ತಂತ್ರಾಂಶದಲ್ಲಿ ದಾಖಲೆಗಳನ್ನು ನೋಂದಾಯಿಸಿರುತ್ತಾರೆ.
ಇಲ್ಲಿಯವರೆಗೆ ಶೇ.57.51 ರಷ್ಟು ರೈತರು ಮಾತ್ರ ಪಹಣಿಗಳನ್ನು FRUITS ತಂತ್ರಾಂಶದಲ್ಲಿ ಲಿಂಕ್ ಮಾಡಿಸಿದ್ದಾರೆ. ಇನ್ನುಳಿದ 33,206 ತಾಕುಗಳನ್ನು ರೈತರು ತಕ್ಷಣವೇ ಈ ತಂತ್ರಾಂಶದಲ್ಲಿ ಸೇರ್ಪಡೆ ಮಾಡಿಸಿಕೊಳ್ಳುವಂತೆ ತಹಶೀಲ್ದಾರ್ ನಾಗರಾಜ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್ ಎಸ್.ಟಿ ಇವರು ಜಂಟಿ ಪ್ರಕಟಣೆಯಲ್ಲಿ ಇದನ್ನು ತಿಳಿಸಿದ್ದಾರೆ.
ಹೊಸದಾಗಿ FID ಮಾಡಿಸಿಕೊಳ್ಳಲು ಹಾಗೂ ಪಹಣಿಗಳನ್ನು ಸೇರ್ಪಡೆ ಮಾಡಿಸಿಕೊಳ್ಳಲು ರೈತರು ತಮ್ಮ ಎಲ್ಲಾ ಪಹಣಿಗಳು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ನಕಲು ಪ್ರತಿ ದಾಖಲಾತಿಗಳೊಂದಿಗೆ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳು, ತೋಟಗಾರಿಕೆ ಹಾಗೂ ಗ್ರಾಮ ಆಡಳಿತಾಧಿಕಾರಿ ಕಚೇರಿಗಳನ್ನು ಸಂಪರ್ಕಿಸುವುದು.
ಇತರೆ ವಿಷಯಗಳು:
ಈ ಬೆಳೆ ಬೆಳೆದರೆ ಎಕರೆಗೆ 5 ಲಕ್ಷ ಫಿಕ್ಸ್; ವಿಶ್ವವಿದ್ಯಾನಿಲಯವು ಅಭಿವೃದ್ಧಿಪಡಿಸಿದೆ
500 ರೂ ನೋಟು ಬಳಸುವವರು ಒಮ್ಮೆ ನೋಡಿ; ರಿಸರ್ವ್ ಬ್ಯಾಂಕಿನಿಂದ ಹೊಸ ಮಾರ್ಗಸೂಚಿ ಬಿಡುಗಡೆ