rtgh

ಈ ಕುಟುಂಬಗಳಿಗೆ ಇನ್ಮುಂದೆ ಸಿಗಲ್ಲ ಉಚಿತ ರೇಷನ್! ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ

ಹಲೋ ಸ್ನೇಹಿತರೇ, ಪಡಿತರ ಚೀಟಿ ಮಹತ್ವ ಎಷ್ಟಿದೆ ಎಂದು ಎಲ್ಲರಿಗು ತಿಳಿದಿದೆ. ಯಾಕೆಂದರೆ ರಾಜ್ಯ ಸರ್ಕಾರದ 5 ಯೋಜನೆ ಬಿಡುಗಡೆ ಮಾಡಿದ ಎಲ್ಲಾ ಯೋಜನೆಗಳ ಲಾಭ ಪಡೆದುಕೊಳ್ಳಲು ಪಡಿತರ ಚೀಟಿ ಹೊಂದಿರುವುದು ಅತ್ಯಗತ್ಯವಾಗಿದೆ. ಇನ್ಮುಂದೆ ಯಾರಿಗೆಲ್ಲ ಉಚಿತ ರೇಷನ್‌ ಸಿಗುವುದಿಲ್ಲ ಎಂಬುದನ್ನು ತಿಳಿಯಿರಿ.

free ration new rules

ಅದರಲ್ಲೂ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳಬೇಕಿದ್ದರೆ ರೇಷನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯವಾಗುತ್ತದೆ.

BPL card, Antyodaya card ಹೊಂದಿರುವವರಿಗೆ ಉಚಿತ ರೇಶನ್ ಹಾಗೂ ಸರ್ಕಾರದ ಉಚಿತ ಯೋಜನೆಗಳ ಲಾಭ ಸಿಗುತ್ತದೆ.

ಅದೇ ರೀತಿ ಎಪಿಎಲ್ ಕಾರ್ಡ್ ಬಡತನ ರೇಖೆಗಿಂತ ಮೇಲ್ಪಟ್ಟವರಿಗೆ ವಿತರಣೆ ಮಾಡಲಾಗುತ್ತದೆ. ಒಂದು ಗುರುತಿನ ಚೀಟಿಯಂತೆ ಎಪಿಎಲ್ ಕಾರ್ಡ್ ಬಳಕೆ ಮಾಡಲಾಗುತ್ತದೆ. ಸರ್ಕಾರದ ಹೊಸ ನಿಯಮದ ಪ್ರಕಾರವಾಗಿ, ಬಿಪಿಎಲ್ ಕಾರ್ಡ್ ಹೊಂದಿರುವ ಅನೇಕ ಕುಟುಂಬಗಳು ಇನ್ನು ಮುಂದೆ ಉಚಿತ ಸರ್ಕಾರದ ಯೋಜನೆಯ ಪ್ರಯೋಜನ / ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ.

ಬಡತನ ರೇಖೆಗಿಂತ ಕೆಳಗಿನವರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವ ಉದ್ದೇಶವಾಗಿ, ಪಡಿತರ ಚೀಟಿ ವಿತರಣೆ ಮಾಡಲಾಗುವುದು. ಆದರೆ ಸಾಕಷ್ಟು ಜನ ಸರ್ಕಾರದ ಮಾನದಂಡಗಳನ್ನು ನಿರ್ಲಕ್ಷ ಮಾಡಿ, ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವುದು ಸರ್ಕಾರದ ಗಮನಕ್ಕೆ ತಿಳಿದಿದೆ.


ಸರ್ಕಾರಕ್ಕೆ ಮೇಲಿಂದ ಮೇಲೆ ಬಿಪಿಎಲ್ ಹೊಸ ಕಾರ್ಡ್ ವಿತರಣೆಗೆ ಒತ್ತಡ ಹೇರಲಾಗಿದ್ದು. ಈಗಾಗಲೇ ಯಾರು ಅಕ್ರಮವಾಗಿ ಹೊಂದಿರುತ್ತಾರೋ ಅಂತವರನ್ನು ಗುರುತಿಸಿ ಕಾರ್ಡ್ ರದ್ದುಪಡಿಗೆ ಸರ್ಕಾರ ಮುಂದಾಗಿದೆ. ಆಹಾರ ಇಲಾಖೆಯ ಮಾಹಿತಿಯ ಪ್ರಕಾರ ಈಗಾಗಲೇ ಸುಮಾರು 4 ಲಕ್ಷ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ.

ಈ ತಿಂಗಳಿಂದ ಅಂದರೆ ಜನವರಿಯಲ್ಲಿ ವಿತರಣೆ ಆಗುವ ಪಡಿತರ ವಸ್ತುಗಳು ನಿಮಗೆ ಸಿಕ್ಕಿಲ್ಲ /ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯ ಹಣ ಮುಂದಿನ ಕಂತು ನಿಮ್ಮ ಖಾತೆಗೆ ಜಮೆಯಾಗಿಲ್ಲಾ ಎಂದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ.

ರೇಷನ್ ಕಾರ್ಡ್ ರದ್ದುಪಡಿ ಆಗಿರುವ ಬಗ್ಗೆ ಸರ್ಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. ನಿಮ್ಮ ಪಡಿತರ ಚೀಟಿ ರದ್ದಾಗಿದೆಯೋ ಇಲ್ಲವೋ ಎಂಬುದನ್ನು ನೀವು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದಾಗಿದೆ ಆದರೆ ಹೇಗೆ ಎಂದು ತಿಳಿಯಿರಿ.

ರೇಷನ್ ಕಾರ್ಡ್ ಸ್ಟೇಟಸ್ ಹೀಗೆ ಚೆಕ್ ಮಾಡಿ!
https://ahara.kar.nic.in/Home/EServices ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.

ಈ ಸರ್ವಿಸ್ ವಿಭಾಗದಲ್ಲಿ ಮೇಲ್ಭಾಗದಲ್ಲಿ 3 ಲೈನ್ ಕಾಣಿಸುತ್ತದೆ. ಅದರ ಮೇಲೆ ನೀವು ಕ್ಲಿಕ್ ಮಾಡಿದರೆ ಎಡಭಾಗದಲ್ಲಿ ಈ ಸ್ಥಿತಿ ಎಂಬುದನ್ನು ಕಾಣಬಹುದಾಗಿದೆ.

ನಂತರ ಅಲ್ಲಿ ರದ್ದುಪಡಿಸಲಾದ ಅಥವಾ ತಡೆಹಿಡಿಯಲಾದ ಪಡಿತರ ಚೀಟಿ ಎನ್ನುವ ಆಯ್ಕೆ ಕಂಡುಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಮುಂದಿನ ಹಂತದಲ್ಲಿ ಹೊಸ ಫೋಟೋ ತೆಗೆದುಕೊಂಡಾಗ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮೊದಲಾದ ಮಾಹಿತಿಯನ್ನು ಭರ್ತಿ ಮಾಡಬೇಕು.

ಈಗ ರದ್ದಾಗಿರುವ ಪಡಿತರ ಚೀಟಿ ಲಿಸ್ಟ್ ಕಾಣಿಸುತ್ತದೆ. ಇದರಲ್ಲಿ ಪಡಿತರ ಕಾರ್ಡ್ ಹೊಂದಿದ್ದ ಕುಟುಂಬದ ಯಜಮಾನನ ಹೆಸರು ಹಾಗೂ ರದ್ದಾಗಿರುವುದಕ್ಕೆ ಕಾರಣವನ್ನು ಕೂಡ ನೀಡಲಾಗುವುದು. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ರೆ ಇನ್ನು ಮುಂದೆ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.

ಸ್ವಯಂ-ಉದ್ಯೋಗಕ್ಕೆ ಸಬ್ಸಿಡಿ ಹಣ: ಆಯ್ಕೆಯಾದ ಫಲಾನುಭವಿಗಳಿಗೆ 5 ಕೋಟಿ ನೇರ ನಗದು

ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಮಾಡಿಸಿಲ್ವಾ.! ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ

Leave a Comment