rtgh

ಎಲ್.ಪಿ.ಜಿ ಗ್ಯಾಸ್ ಇ-ಕೆವೈಸಿ ಮಾಡಿಸಿಲ್ವಾ.! ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ

ಹಲೋ ಸ್ನೇಹಿತರೇ, ಅಡುಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳಿಗೆ ಎಲ್.ಪಿ.ಜಿ ಎಜನ್ಸಿಯಲ್ಲಿ ಇ-ಕೆವೈಸಿ ಮಾಡಿಸುವ ಕುರಿತು ಸ್ಪಷ್ಟನೆ ನೀಡುವ ಬಗ್ಗೆ ಈ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ ಹೊಸ ಹಾಕಿದೆ. ಏನು ಹೊಸ ಪ್ರಕಟಣೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

LPG cylinder ekyc

ದಿನಾಂಕ 31.12.2023 ರ ಒಳಗಾಗಿ ಗ್ಯಾಸ್ ಏಜನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿದ್ರೆ ಮಾತ್ರ ಸಬ್ಸಿಡಿ ಸಿಗುತ್ತದೆ & ಸಿಲಿಂಡರ್ ಸರಬರಾಜು ಮಾಡಲಾಗುವುದು ಎಂದು ವದಂತಿಗಳಿಗೆ ಸಂಬಂದಿಸಿದಂತೆ ಈ ಕೆಳಕಂಡಂತೆ ಸ್ಪಷ್ಟನೆಯನ್ನು ನೀಡಲಾಗಿದೆ:

1) ಇ-ಕೆವ್ಯಸಿ ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲ & ಸಾರ್ವಜನಿಕರು ತಮ್ಮ ಬಿಡುವಿನ ಸಮಯದಲ್ಲಿ ಇ-ಕೆವೈಸಿ ಮಾಡಿಸಬಹುದಾಗಿದೆ.

2) ಇ-ಕೆವೈಸಿ ಪ್ರಕ್ರಿಯೆ ಫ್ರೀಯಾಗಿರುತ್ತದೆ.

ಆದ್ದರಿಂದ ದಿನಾಂಕ 31.12.2023 ರ ಒಳಗಾಗಿ ಗ್ಯಾಸ್ ಏಜನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಬೇಕು ಎಂಬ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಎಂದು ಪ್ರಕಟಣೆಯಲ್ಲಿ ಉಲ್ಲೇಖ ಮಾಡಲಾಗಿದೆ.


ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ:

ಅಡುಗೆ ಅನಿಲ ಸಂಪರ್ಕ ಹೊಂದಿದವರು ಡಿ.31 ರೊಳಗೆ E-KYC ಮಾಡಿಸಬೇಕು ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗಿತ್ತು E-KYC ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಪಡಿಸಿಲ್ಲ. ಬಿಡುವಿನ ಸಮಯದಲ್ಲಿ ಮಾಡಿಕೊಳ್ಳಬಹುದಾಗಿದೆ, ಇದಕ್ಕೆ ಗ್ಯಾಸ್ ಏಜೆನ್ಸಿಗಳಿಗೆ ಹಣ ಪಾವತಿಸಬೇಕೆಂದಿಲ್ಲ ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

ಗ್ರಾಹಕರು ಎಲ್ ಪಿ ಜಿ ಇ-ಕೆವೈಸಿ ಆಗಿದಿಯೋ ಇಲ್ಲವೋ ಎಂಬುದನ್ನು ತಮ್ಮ ಮೊಬೈಲ್‌ನಲ್ಲೆ ತಿಳಿದುಕೊಳ್ಳಬಹುದಾಗಿದೆ.

ಮಹಿಳೆಯರಿಗೆ ಸರ್ಕಾರದಿಂದ ಉಚಿತ ಮೊಬೈಲ್‌ ಯೋಜನೆ: ಇಲ್ಲಿ ಅರ್ಜಿ ಹಾಕಿದವರಿಗೆ ಲಾಭ

ಪಡಿತರ ಚೀಟಿದಾರರಿಗೆ ಹೊಸ ಸುದ್ದಿ.! ರೇಷನ್‌ ಕಾರ್ಡ್‌ದಾರರ ಹೊಸ‌ ಲಿಸ್ಟ್‌ ಬಿಡುಗಡೆ

Leave a Comment