ಹಲೋ ಸ್ನೇಹಿತರೇ, ಅಂಗವಿಕಲರು ಸಮಾಜಕ್ಕೆ ಹೊರೆ ಅಲ್ಲ. ಇತ್ತೀಚಿನ ದಿನಗಳಲ್ಲಿ ಕ್ರೀಡೆಯೂ ಸೇರಿದಂತೆ ಎಲ್ಲ ರಂಗಗಳಲ್ಲಿ ಅಂಗವಿಕಲರು ಅಪ್ರತಿಮ ಸಾಧನೆ ತೋರುತ್ತಿದ್ದಾರೆ. ಹೀಗಾಗಿ, ಸಮಾಜಕ್ಕೆ ಹೊರೆ ಎನ್ನುವ ಭಾವನೆಯನ್ನು ದೂರ ಮಾಡಬೇಕಿದೆ. ಅಂಗವಿಕಲರಿಗೆ ಶಿಕ್ಷಣ, ಉದ್ಯೋಗಗಳಲ್ಲಿ ಸಮಾನ ಅವಕಾಶವನ್ನು ದೊರಕಿಸುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಅಂಗವಿಕಲರಿಗೆ ಸ್ವ-ಉದ್ಯೋಗ ಇತರ ಚಟುವಟಿಕೆಗಳಿಗೆ ಪ್ರಯಾಣ ಬೆಳೆಸಲು ಅನುಕೂಲ ಮಾಡಿಕೊಡುವ ದೇಸೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ 4000 ಸಾವಿರ ಉಚಿತ ತ್ರಿಚಕ್ರ ಬೈಕ್ ಗಳನ್ನು ಅಂಗವಿಕಲರಿಗೆ ವಿತರಿಸಲು ಸರಕಾರದಿಂದ ನಿರ್ಣಯ ಕೈಗೊಳ್ಳಲಾಗಿದೆ.
ಅಂಗವಿಕರುಗಳಲ್ಲಿ ಅರ್ಹ ಫಲಾನುಭವಿಗಳಿಗೆ 36 ಕೋಟಿ ರೂ. ವೆಚ್ಚದಲ್ಲಿ 4,000 ಯಂತ್ರ ಚಾಲಿತ ಉಚಿತ ದ್ವಿಚಕ್ರ ವಾಹನ ವಿತರಿಸಲು ರಾಜ್ಯ ಸರ್ಕಾರದಿಂದ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಅಂಕಣದಲ್ಲಿ ಉಚಿತವಾಗಿ ಬೈಕ್ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬವುದು? ಎಲ್ಲಿ ಅರ್ಜಿ ಸಲ್ಲಿಸಬೇಕು? ಹಾಗೂ ಆಯ್ಕೆ ವಿಧಾನ ಹೇಗಿರುತ್ತದೆ ಎಂದು ಈ ಕೆಳಗೆ ತಿಳಿಸಲಾಗಿದೆ.
ಯಾರೆಲ್ಲ ಅಜಿ ಸಲ್ಲಿಸಬಹುದು:
ರಾಜ್ಯ ಸರಕಾರದಿಂದ ಉಚಿತ ಬೈಕ್ ಪಡೆಯಲು ಅಂಗವಿಕಲರು ಅರ್ಜಿ ಸಲ್ಲಿಸಬವುದು, 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಒಟ್ಟು 13,24,205 ಅಂಗವಿಕಲರಿದ್ದು ಜಿಲ್ಲಾವಾರು ಅಂಗವಿಕಲರ ವಿವರವು ಈ ಕೆಳಗಿನ ಪೋಟೋದಲ್ಲಿ ಲಭ್ಯವಿದ್ದು, ಇದರ ಆಧಾರದ ಮೇಲೆ ಅರ್ಹ ಅರ್ಜಿದಾರರು ಅರ್ಜಿ ಸಲ್ಲಿಸಬವುದು.
105 ಕೋಟಿ ಬರ ಪರಿಹಾರ ಹಣ ಬಿಡುಗಡೆ.! 1ನೇ ಕಂತಿನ ಹಣ ಯಾರಿಗೆಲ್ಲ ಸಿಗಲಿದೆ?
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅಂಗವಿಕಲರಿಗೆ ಉಚಿತವಾಗಿ ತ್ರಿಚಕ್ರ ಬೈಕ್ ಅನ್ನು ವಿತರಣೆಗೆ ಜಿಲ್ಲಾವಾರು ಅರ್ಜಿ ಆಹ್ವಾನಿಸಲಾಗುತ್ತದೆ. ಪ್ರತೀ ಜಿಲ್ಲೆಯ ಅಂಗವಿಕಲರ ಸಂಖ್ಯೆಗೆ ಅನುಗುಣವಾಗಿ ಗುರಿಯನ್ನು ನಿಗದಿಪಡಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸೊಂಟದಲ್ಲಿನ ಮೇಲ್ಬಾಗ ಸದೃಢವಾಗಿರುವ ವಿಕಲಚೇತನರು ವಾಹನಕ್ಕಾಗಿ LLR ವಾಹನ ಕಲಿಕಾ ಅರ್ಹತಾ ಪತ್ರ ದಾಖಲೆ ಲಗತ್ತಿಸಿ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು ನಿಮ್ಮ ಜಿಲ್ಲೆಯಲ್ಲಿನ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿಗಳಲ್ಲಿ ಸಲ್ಲಿಸಬೇಕು.
ಫಲಾನುಭವಿ ಆಯ್ಕೆ ವಿಧಾನ:
ಅರ್ಜಿ ಸಲ್ಲಿಸಿದ ಬಳಿಕ ನೀವು ಸಲ್ಲಿಸಿದ ಎಲ್ಲಾ ದಾಖಲಾತಿಗಳನ್ನು ಪರೀಶಿಲಿಸಿ ನಂತರ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(CEO)ರವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸುತ್ತದೆ. ಸರಕಾರ ಚಕ್ರ ವಾಹನಗಳ ಪೂರೈಕೆಗೆ ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ಏಜನ್ಸಿಗಳ ಮೂಲಕ ಆಯಾ ಜಿಲ್ಲೆಗೆ ನಿಗಧಿಪಡಿಸಿದ ಗುರಿಯಂತೆ ವಾಹನಗಳನ್ನು ಪೂರೈಕೆ ಮಾಡುತ್ತದೆ. ಬಳಿಕ ಆಯ್ಕೆಯಾದ ಅರ್ಹ ಫಲಾನುಭವಿಗಳಿಗೆ ದ್ವಿಚಕ್ರ ವಾಹನವನ್ನು ನೀಡಲಾಗುತ್ತದೆ.
ಇತರೆ ವಿಷಯಗಳು:
ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ & ತಿದ್ದುಪಡಿಗೆ ಅವಕಾಶ.! ತಕ್ಷಣ ಈ ಕೇಂದ್ರವನ್ನು ಸಂಪರ್ಕಿಸಿ
ಸರ್ಕಾರಿ ನೌಕರರಿಗೆ ಬಂಪರ್ ನ್ಯೂಸ್.!!ಮಾರ್ಚ್‌ನಲ್ಲಿ ನಿಮ್ಮ ಡಿಎ 4% ಏರಿಕೆ