ಹಲೋ ಸ್ನೇಹಿತರೇ, ಕಳೆದ ಒಂದೆರಡು ವರ್ಷಗಳ ಹಿಂದೆ ಎಲ್‌ಪಿಜಿ ಸಿಲಿಂಡರ್ ದರ ಒಂದೇ ಸಮನೆ ಏರಿಕೆ ಆಗಿತ್ತು. ಇದು ಗ್ರಾಹಕರಲ್ಲಿ ದೊಡ್ಡ ಅಸಮಾಧಾನವನ್ನು ಹುಟ್ಟು ಹಾಕಿತ್ತು. ಯಾಕಂದ್ರೆ ಪ್ರತಿ ತಿಂಗಳು ಸಾವಿರಕ್ಕಿಂತಲೂ ಹೆಚ್ಚು ಹಣವನ್ನು ಎಲ್‌ಪಿಜಿ ಸಿಲೆಂಡರ್ ಖರೀದಿ ಮಾಡುವುದಕ್ಕೆ ವ್ಯಯಿಸಬೇಕಿತ್ತು. ಆದ್ರೆ 2023 ರಲ್ಲಿ ಜನರಿಗೆ ತುಸು ರಿಲೀಫ್ ತಂದುಕೊಟ್ಟಿತ್ತು ಕೇಂದ್ರ ಸರ್ಕಾರ.
ಸಿಲೆಂಡರ್ ದರ ಇಳಿಕೆ
2023ರಲ್ಲಿ ಪಂಚ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಲ್ ಪಿ ಜಿ ಸಿಲಿಂಡರ್ ಮೇಲೆ ಸಬ್ಸಿಡಿ ಘೋಷಣೆ ಮಾಡಿತು. ಸಾಮಾನ್ಯರಿಗೆ ಮಾತ್ರ 200 ರೂಪಾಯಿಗಳ ಸಬ್ಸಿಡಿ ಮತ್ತು ಉಜ್ವಲ ಯೋಜನೆಯ ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಂಡವರಿಗೆ ರೂ.300 ಸಬ್ಸಿಡಿ ಒದಗಿಸಲಾಗುತ್ತಿದೆ.
ಇದೀಗ ಸರ್ಕಾರ LPG ಸಿಲಿಂಡರ್ ಗೆ ಸಂಬಂಧಪಟ್ಟ ಹಾಗೆ ಮತ್ತೊಂದು ಹೊಸ ಅಪ್ಡೇಟ್ ನೀಡಿದೆ, ಇದರಿಂದ ಸಾಮಾನ್ಯ ಜನರಿಗೆ ಅನುಕೂಲ ಇದೆಯಾ ಎಂಬುದನ್ನು ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರವು ಕೂಡ ಕೇಂದ್ರ ಸರ್ಕಾರದ ಮೇಲೆ ಗ್ಯಾಸ್ ಸಿಲಿಂಡರ್ ತರ ಇಳಿಕೆ ಮಾಡುವಂತೆ ಒತ್ತಾಯ ಹೇರಿದೆ. ಇನ್ನೇನು ಲೋಕಸಭಾ ಚುನಾವಣೆಯು ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಬೆಲೆ ಇಳಿಕೆ ಬಗ್ಗೆ ಬಹಳ ಮಹತ್ವದ ನಿರ್ಧಾರ ಕೈಗೊಂಡಿರುವ ಬಗ್ಗೆ ವರದಿಯಾಗಿದೆ.
ಪ್ರಸ್ತುತ ದೇಶದಲ್ಲಿ ಎಲ್ ಪಿ ಜಿ ಸಿಲಿಂಡರ್ ಬಳಸುವವರ ಸಂಖ್ಯೆ 33 ಕೋಟಿ ಅಷ್ಟು. 2025 – 26ರ ವೇಳೆಗೆ 75 ಲಕ್ಷ ಹೊಸ ಗ್ಯಾಸ್ ಕನೆಕ್ಷನ್ ಸೇರ್ಪಡೆಕೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಇದೀಗ ಗ್ಯಾಸ್ ಸಿಲಿಂಡರ್ ದರವನ್ನು ಇನ್ನಷ್ಟು ಇಳಿಕೆ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಲೋಕಸಭಾ ಚುನಾವಣೆಯನ್ನು ಎದುರಿಸುವಲ್ಲಿ ಸಹಾಯಕವಾಗಬಹುದು ಎಂದು ತಜ್ಞರು ಊಹಿಸಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರವು ಸಬ್ಸಿಡಿ ದರವನ್ನು ಹೆಚ್ಚಿಸಲು ನಿರ್ಧರವನ್ನು ತಿಳಿಸಿದ್ದಾರೆ.
200 ರೂ. ಬದಲು 300ಗೆ ಸಬ್ಸಿಡಿ ದರದಲ್ಲಿ ಹೆಚ್ಚಳ ಆಗುವ ಸಾಧ್ಯತೆಯು ಇದೆ. ಕೇಂದ್ರ ಸರ್ಕಾರದಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ ಸದ್ಯದಲ್ಲಿ ಗ್ಯಾಸ್ ಸಿಲಿಂಡರ್ ದರದ ಬಗ್ಗೆ ಹೊಸ ಅಪ್ಡೇಟ್ ಸಿಗುವ ನಿರೀಕ್ಷೆ ಕೂಡ ಇದೆ.
ಇತರೆ ವಿಷಯಗಳು:
30 ಲಕ್ಷ ರೈತರ ಖಾತೆಗೆ ಈ ವಾರದಲ್ಲಿ ಬರ ಪರಿಹಾರ! ಮೊದಲ ಕಂತಿನ ಬಿಡುಗಡೆಗೆ ಸರ್ಕಾರದ ಸಿದ್ದತೆ
ಬಸ್‌ನಲ್ಲಿ ಕೂರುವ ಮುನ್ನ ಎಚ್ಚರ.!! ಮಹಿಳಾ ಸೀಟಿನಲ್ಲಿ ಕುಳಿತ ಪುರುಷರಿಗೆ 34 ಸಾವಿರ ದಂಡ