rtgh

ಗ್ಯಾಸ್‌ ಸಿಲಿಂಡರ್‌ ಬಳಕೆದಾರರಿಗೆ ಶಾಕ್.!!‌ ಇನ್ಮುಂದೆ ಎಲ್ಲರಿಗೂ ಸಿಗಲ್ಲ ಸಬ್ಸಿಡಿ ಹಣ; ನೀವು ಒಮ್ಮೆ ಚೆಕ್‌ ಮಾಡಿ

ನಮಸ್ಕಾರ ಸ್ನೇಹಿತರೇ, ದೇಶದಿಂದ ಸಾಕಷ್ಟು ಗೃಹಿಣಿಯರಿಗೆ ಅನುಕೂಲವಾಗುವಂತಹ ಗೃಹ ಬಳಕೆಯ ಗ್ಯಾಸ್ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ ಉಜ್ವಲ್‌ ಯೋಜನೆ ಯಡಿಯಲ್ಲಿ ಸಾಕಷ್ಟು ಮಹಿಳೆಯರು ಗ್ಯಾಸ್ ಸಬ್ಸಿಡಿ ಪಡೆದುಕೊಳ್ಳುತ್ತಿದ್ದಾರೆ.

gas cylinder subsidy amount

ಹಣದುಬ್ಬರದ ಸಮಸ್ಯೆ ಹೆಚ್ಚಾಗುತ್ತಿದ್ದ ಹಾಗೆ ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಮೇಲಿನ ಸಬ್ಸಿಡಿಯನ್ನು ಕೂಡ ಸರ್ಕಾರ ಘೋಷಣೆ ಮಾಡಿದ್ದು ಗ್ರಾಹಕರಿಗೆ ತುಸು ನೆಮ್ಮದಿ ನೀಡಿತ್ತು. ಉಜ್ವಲ್‌ ಯೋಜನೆ ಅಡಿಯಲ್ಲಿ ಉಚಿತ ಗ್ಯಾಸ್ ಪಡೆದು ಕೊಂಡವರಿಗೆ 300ರೂಪಾಯಿ ಸಬ್ಸಿಡಿ ಹಾಗೂ ಸಾಮಾನ್ಯರಿಗೆ 200 ರೂಪಾಯಿಗಳ ಸಬ್ಸಿಡಿ ನೀಡಲಾಗಿದೆ ಎಂದು ತಿಳಿದು ಕೊಂಡಿದ್ದಾರೆ.

ಆದರೆ ಈಗ ಸದ್ಯ ಸಬ್ಸಿಡಿ ಪಡೆದುಕೊಳ್ಳಲು ಪ್ರತಿಯೊಬ್ಬ ಗ್ರಾಹಕರು ಈ ಕೆಲಸವನ್ನು ಮಾಡುವುದು ಕಡ್ಡಾಯವಾಗಿದೆ. ಇಲ್ಲದೆ ಇದ್ರೆ ಇನ್ನು ಕೆಲವೇ ದಿನಗಳಲ್ಲಿ ನಿಮಗೆ ಸಿಗುವ ಎಲ್ಪಿಜಿ ಗ್ಯಾಸ್ ಸಬ್ಸಿಡಿ ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗೆ ನೀಡಲಾಗುವ ಸಬ್ಸಿಡಿ ಪಡೆದುಕೊಳ್ಳುತ್ತಿದ್ದರು ಕೂಡ ಇಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದಿದ್ದಾರೆ.

ಸರ್ಕಾರದಿಂದ 25,000 ರೂಪಾಯಿಗಳು : ಸ್ವಂತ ಕೃಷಿ ಜಮೀನು ಹೊಂದಿರುವ ರೈತರಿಗೆ ಮಾತ್ರ


ಪ್ರತಿಯೊಬ್ಬ ಎಲ್‌ಪಿಜಿ ಗ್ಯಾಸ್ ಬಳಕೆ ಮಾಡುವ ಗ್ರಾಹಕನು ಈ ಕೆಲಸ ಮಾಡಿಕೊಳ್ಳಲೇಬೇಕು. ನವೆಂಬರ್ 25 ರಂದು ಇ ಕೆ ವೈ ಸಿ ಮಾಡುವ ಪ್ರಕ್ರಿಯೆಯು ಆರಂಭವಾಗಿದೆ. ಕೊನೆಯ ದಿನಾಂಕ ಡಿಸೆಂಬರ್ 15 ಎಂದೂ ಸರ್ಕಾರ ಘೋಷಿಸಿದೆ, ಈ ದಿನಾಂಕದ ಒಳಗೆ ಮಾಡಿಸಿಕೊಳ್ಳದೆ ಇರುವವರಿಗೆ ಯಾವುದೇ ರೀತಿಯ ಸಬ್ಸಿಡಿ ಬೆನಿಫಿಟ್ ಮುಂದೆ ಸಿಗುವುದಿಲ್ಲ.

ಬಯೋಮೆಟ್ರಿಕ್ ಮಾಡಿಸಿಕೊಳ್ಳಿ:

ಗ್ಯಾಸ್ ಏಜೆನ್ಸಿ ನಿರ್ದೇಶಕರಾದ ಸಂಜಯ್ ಕುಮಾರ್ ಜೈಸ್ವಾಲ್ ತಿಳಿಸಿರುವಂತೆ ಬಯೋಮೆಟ್ರಿಕ್ ಮೂಲಕ ಈ ಕೆವೈಸಿ ಮಾಡಿಸಿಕೊಳ್ಳದೆ ಇದ್ರೆ ಅಂತವರ ಸಬ್ಸಿಡಿ ತಕ್ಷಣಕ್ಕೆ ರದ್ದಾಗುತ್ತದೆ. ಇದಕ್ಕಾಗಿ ನೀವು ನಿಮ್ಮ ಗ್ಯಾಸ್ ಏಜೆನ್ಸಿಗೆ ಹೋಗಿ ಆಧಾರ್ ಕಾರ್ಡ್ ಮತ್ತು ನಿಮ್ಮ ಇತರ ವಿವರಗಳನ್ನು ನೀಡಿ ಬಯೋಮೆಟ್ರಿಕ್ ಮೂಲಕ ಇ ಕೆ ವೈ ಸಿ ಮಾಡಿಸಿಕೊಳ್ಳಬೇಕು ಹೀಗೆ ಮಾಡುವುದರಿಂದ ನಿಮಗೆ ಸಬ್ಸಿಡಿ ಹಣವನ್ನು ಪಡೆದುಕೊಳ್ಳಬಹುದು.

ಇದು ಆನ್ಲೈನ್ ನಲ್ಲಿ ಮಾಡಲು ಸಾಧ್ಯವಿಲ್ಲ ಎಂದರೆ ನೀವೇ ಸ್ವತಃ ಭೇಟಿ ನೀಡುವ ಮೂಲಕ ಬಯೋಮೆಟ್ರಿಕ್ ಮಾಡಿಸಿಕೊಳ್ಳಬೇಕು. ಡಿಸೆಂಬರ್ 15 ಕೊನೆಯ ದಿನಾಂಕವಾಗಿದ್ದು ಗ್ಯಾಸ್ ಸಬ್ಸಿಡಿ ಪಡೆದುಕೊಳ್ಳಲು ತಕ್ಷಣವೇ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ.

ಹೊಸ ದಾಖಲೆಗೆ ಸಜ್ಜಾದ ಚಿತ್ರರಂಗ.! ಕಾಂತಾರ ಅಧ್ಯಾಯ 1 ಟೀಸರ್‌ ಅನಾವರಣ.! ಫಸ್ಟ್‌ ಲುಕ್‌ನಲ್ಲೆ ಅಭಿಮಾನಿಗಳು ಫಿದಾ

ಮುಖವೆಲ್ಲ ಗಾಯ, ಬ್ಯಾಂಡೇಜ್.!! ವಿರಾಟ್‌ ಕೊಹ್ಲಿಗೆ‌ ಆಗಿದ್ದಾದ್ರೂ ಏನು.?

Leave a Comment