ಹಲೋ ಸ್ನೇಹಿತರೇ, ಕಳೆದ 3 ದಿನಗಳಿಂದ ಚಿನ್ನ & ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಎಷ್ಟು ಕಡಿಮೆಯಾಗಿದೆ ಮತ್ತು ನಿಮ್ಮ ನಗರದಲ್ಲಿನ ದರಗಳನ್ನು ಇಲ್ಲಿಂದಲೇ ಪರಿಶೀಲಿಸಿ.
ಕಳೆದ 3 ದಿನಗಳಿಂದ ಚಿನ್ನ & ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಾಣುತ್ತಿದೆ. ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಇಳಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿಯೂ 450 ರೂ.ಇಳಿಕೆಯಾಗಿದೆ. ಬುಲಿಯನ್ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 63,000 ರೂ.ಆಗಿದೆ. ಬೆಳ್ಳಿ ಕೂಡಾ 76,000 ರ ಆಸುಪಾಸಿನಲ್ಲಿ ವಹಿವಾಟು ನಡೆಯುತ್ತಲಿದೆ.
ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 50 ರೂ. ಇಳಿಕೆಯಾಗಿ 63,150 ರೂ. ತಲುಪಿದೆ. ಬೆಳ್ಳಿ ಬೆಲೆಯೂ 450 ರೂ. ಕಡಿಮೆಯಾಗಿದ್ದು, ಪ್ರತಿ ಕೆಜಿಗೆ 76,300 ರೂ. ತಲುಪಿದೆ.
MCX ನಲ್ಲಿ ಬೆಲೆ ಎಷ್ಟು? :
ಆದರೆ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ ಚಿನ್ನದ ಬೆಲೆ ಹೆಚ್ಚಾಗಿದೆ. MCX ನಲ್ಲಿ ಇಂದು 0.09 ಶೇಕಡಾ ಏರಿಕೆಯೊಂದಿಗೆ 10 ಗ್ರಾಂ ಗೆ 62,236 ರೂ.ಆಗಿದೆ. ಬೆಳ್ಳಿ ಪ್ರತಿ ಕೆಜಿಗೆ ಶೇ.0.13ರಷ್ಟು ಹೆಚ್ಚಿಗೆಯೊಂದಿಗೆ 72139 ರೂ. ಆಗಿದೆ.
ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ (10 ಗ್ರಾಂ )
24 ಕ್ಯಾರೆಟ್ ಬಂಗಾರದ ಬೆಲೆ – ₹62,920.
22 ಕ್ಯಾರೆಟ್ ಬಂಗಾರದ ಬೆಲೆ – ₹57,700.
ದೇಶದ ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಬಂಗಾರದ ದರ (10 ಗ್ರಾಂ )
ದೆಹಲಿ – ₹57,850
ಮುಂಬಯಿ -₹57,700
ಹೈದರಾಬಾದ್ – ₹57,700
ಕೇರಳ – ₹57,700
ಚೆನ್ನೈ – ₹58,200
ಕೊಲ್ಕತಾ – ₹57,700
ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಚಿನ್ನ & ಬೆಳ್ಳಿಯ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ ಪ್ರತಿ ಔನ್ಸ್ ಗೆ 2,030 ಡಾಲರ್ ಆಗಿದ್ದರೆ, ಬೆಳ್ಳಿ 23.04 ಡಾಲರ್ ಆಗಿದೆ.
ಈ ಮಧ್ಯೆ, MCX ಫ್ಯೂಚರ್ ಮಾರುಕಟ್ಟೆಯಲ್ಲಿ ಫೆಬ್ರವರಿ ಚಿನ್ನದ ಬೆಲೆ 10 ಗ್ರಾಂ ಗೆ 86 ರೂ. ಏರಿಕೆ 62,265 ರೂ.ಆಗಿದೆ. ಮಾರ್ಚ್ ತಿಂಗಳ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 243 ರೂ.ಗಳ ಏರಿಕೆ 72,290 ರೂ. ಆಗಿದೆ.
ನಿಮ್ಮ ನಗರದಲ್ಲಿನ ದರಗಳನ್ನು ಪರಿಶೀಲಿಸಿ :
ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆ ಸಹ ನೀವು ಪರಿಶೀಲಿಸಿ. ಇಂಡಿಯನ್ ಬುಲಿಯನ್ & ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಾರ ನೀವು 8955664433 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಿ.
ಇತರೆ ವಿಷಯಗಳು
Breaking News: ಇನ್ಮುಂದೆ ತುಂಡುಡುಗೆ ಧರಿಸಿದ್ರೆ ʼನೋ ಎಂಟ್ರಿʼ, ದೇವಾಲಯದಲ್ಲಿ ಬದಲಾಯ್ತು ನಿಯಮ.!
ಈ ಪಟ್ಟಿಯಲ್ಲಿ ಹೆಸರಿದ್ದವರಿಗೆ ಮಾತ್ರ ಬರ ಪರಿಹಾರ! ನಿಮ್ಮ ಹೆಸರಿದಿಯಾ ಕೂಡಲೇ ಚೆಕ್ ಮಾಡಿ