rtgh

ಬರ ಪರಿಹಾರ ಪಡೆಯಲು ರೈತರ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ : ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ

ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸುತ್ತಿರುವ ವಿಷಯ ಏನೆಂದರೆ, ಬರ ಪರಿಹಾರ ಪಡೆಯಲು ಯಾವೆಲ್ಲ ರೈತರು ಅರ್ಹರಿದ್ದಾರೆ ಎಂಬುದರ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು ಆ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಇವತ್ತಿನ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತಿದೆ.

Government has released the list of farmers to get drought relief

ಸರ್ಕಾರದಿಂದ ಕಟ್ಟುನಿಟ್ಟಿನ ಕ್ರಮ :

ಪ್ರಸ್ತುತ ಕಂದಾಯ ಸಚಿವರು ಈ ಬಾರಿ ಪರ ಪರಿಹಾರದ ಹಣವು ಸರಿಯಾದ ವ್ಯಕ್ತಿಗೆ ವರ್ಗಾವಣೆ ಮಾಡಲು ತಿಳಿಸಿದ್ದು ಅನರ್ಹ ಫಲಾನುಭವಿಗಳಿಗೆ ವರ್ಗಾವಣೆ ಆಗಿರುವುದನ್ನು ಗಮನಿಸಿದ್ದು ಕೇವಲ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮಾತ್ರ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಾಕಲು ರೈತರ ವಿವರವನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಬಳಕೆ ಮಾಡಿಕೊಳ್ಳಲು ನಿರ್ಣಯವನ್ನು ಕೈಗೊಳ್ಳಲಾಗಿದೆ. ಈಗಾಗಲೇ ಕೆಲವೊಂದು ಇಷ್ಟು ಅನರ್ಹ ರೈತರಿಗೆ ಹಣವು ಬಿಡುಗಡೆ ಮಾಡಲಾಗಿದ್ದು ಇದನ್ನು ಗಮನಿಸಿದ ಸರ್ಕಾರವು ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕ್ರಮವನ್ನು ಕೈಗೊಂಡಿದೆ. ನೆರೆಹಾವಳಿ ಅಥವಾ ನಿರೀಕ್ಷಿತ ಅವಘಡಗಳಿಂದ ಉಂಟಾಗುವ ಬೆಳೆ ಹಾನಿಗೆ ಪ್ರತಿಬಾರಿಯೂ ರಾಜ್ಯ ಸರ್ಕಾರದಿಂದ ಪರಿಹಾರದ ಹಣವನ್ನು ಸರ್ಕಾರವು ಪರಿಹಾರ ತಂತ್ರಾಂಶವನ್ನು ಬಳಕೆ ಮಾಡಿಕೊಂಡು ಅವರ ಬ್ಯಾಂಕ್ ಖಾತೆಗೆ ಎನ್ ಡಿ ಆರ್ ಎಸ್ ಮಾರ್ಗಸೂಚಿಯ ಪ್ರಕಾರ ಫಲಾನುಭವಿಗಳಿಗೆ ಸರ್ಕಾರವು ಹಣವನ್ನು ವರ್ಗಾವಣೆ ಮಾಡಲಾಗುತ್ತಿತ್ತು.

ಆದರೆ ಈ ಮಾದರಿಯನ್ನು ಅನುಸರಿಸಿ ಹಣವನ್ನು ವರ್ಗಾವಣೆ ಮಾಡುತ್ತಿದ್ದಾಗ ಹೆಚ್ಚು ಅನರ್ಹ ಅನರ್ಹ ಫಲಾನುಭವಿಗಳಿಗೆ ವರ್ಗಾವಣೆ ಆಗಿರುವುದನ್ನು ಸರ್ಕಾರವು ಗಮನಿಸಿದ್ದು ಈ ಬಾರಿ ಬರ ಪರಿಹಾರದ ಹಣವನ್ನು ಪ್ರಸ್ತುತ ಕಂದಾಯ ಸಚಿವರು ಅವರ ಬ್ಯಾಂಕ್ ಖಾತೆಗೆ ಮಾತ್ರ ನೇರವಾಗಿ ವರ್ಗಾವಣೆ ಮಾಡಲು ಕ್ರಮವನ್ನು ಕೈಗೊಂಡಿದೆ.

ಎಫ್ ಐ ಡಿ ನಂಬರ್ ಕಡ್ಡಾಯ :

ಅನಹ ರೈತರಿಗೆ ಹಣ ಜಮಾ ಆಗುತ್ತಿರುವ ಕಾರಣದಿಂದಾಗಿ ಮಳೆ ಕೊರತೆಯಿಂದ ಮುಂಗಾರು ಉಂಟಾಗಿರುವ ನಷ್ಟಕ್ಕೆ ಬರ ಪರಿಹಾರವನ್ನು ಪ್ರತಿಯೊಬ್ಬ ರೈತರು ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ಕೃಷಿ ಇಲಾಖೆಯಿಂದ ನೊಂದಣಿ ಯಾಗಿ ಎಫ್ಐ ಡಿ ನಂಬರನ್ನು ಹೊಂದುವುದು ರೈತರಿಗೆ ಕಡ್ಡಾಯಗೊಳಿಸಲಾಗಿದೆ. ವರ್ಷ ಜಮೀನನ್ನು ಹೊಂದಿರುವ ರೈತರು ಎಲ್ಲ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಎಫ್ ಐಡಿ ನಂಬರ್ ಅನ್ನು ಪರಿಹಾರದ ಹಣವನ್ನು ಪಡೆಯಲು ಹೊಂದಿರುವುದು ಹಾಗೂ ತಮ್ಮ ಹೆಸರಿನಲ್ಲಿರುವ ಎಲ್ಲಾ ಸರ್ವೆ ನಂಬರ್ ಗಳನ್ನು ಈ ನಂಬರಿಗೆ ಸೇರ್ಪಡೆ ಮಾಡಿಕೊಳ್ಳುವುದು ರೈತರಿಗೆ ಕಡ್ಡಾಯಗೊಳಿಸಲಾಗಿದೆ.

ಎಫ್ ಐ ಡಿ ನಂಬರ್ ಪಡೆದುಕೊಳ್ಳುವ ವಿಧಾನ :

ಪರಿಹಾರ ಲಿಸ್ಟ್ ನಲ್ಲಿ ಕ್ಲಿಕ್ ಮಾಡುವುದರ ಮೂಲಕ ಫಲಾನುಭವಿ ಆದ ಸಂಖ್ಯೆಯನ್ನು ನಮೂದಿಸಿ ಅದರಲ್ಲಿ ಸರ್ಚ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಫ್ರೂಟ್ ಐಡಿ ಎಂದು ತೋರಿಸುತ್ತದೆ. ಅದರಲ್ಲಿ ನೀವು ಎಫ್ಐಡಿಯ 16 ಅಂಕಿಯ ನಂಬರ್ ಗಳನ್ನು ತೋರಿಸಿದಾಗ ಆಗ ಮಾತ್ರ ನೀವು ಬರ ಪರಿಹಾರದ ಹಣವನ್ನು ಪಡೆಯಲು ಅರ್ಹರು ಎಂದು ಅರ್ಥ. ಒಂದು ವೇಳೆ ಆಧಾರ್ ನಂಬರ್ ಅನ್ನು ಹಾಕಿ ಸರ್ಚ್ ಮಾಡಿದರೆ ನೀವು ಅದರಲ್ಲಿ ಆಬ್ಜೆಕ್ಟ್ ರೆಫರೆನ್ಸ್ ನಾಟ್ ಟು ಅಂಡ್ ಇನ್ಸ್ಟಂಟ್ ಆಫ್ ಆನ್ ಆಬ್ಜೆಕ್ಟ್ ಅಥವಾ ಆಧಾರ್ ನಂಬರ್ ಅಥವಾ ಎಂದು ತೋರಿಸಿದರೆ ನಿಮ್ಮ ಯಾವುದೇ ಮಾಹಿತಿ ಅದರಲ್ಲಿ ಇಲ್ಲ ಎಂದರ್ಥ. ಹಾಗಾಗಿ ನೀವು ತಕ್ಷಣವೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ fid ನಂಬರನ್ನು ಆಧಾರ್ ಕಾರ್ಡ್ ಪ್ರತಿ ಬ್ಯಾಂಕ್ ಪಾಸ್ ಬುಕ್ ಪ್ರತಿಯೊಂದು ಮಾಡಿಸಿಕೊಳ್ಳಬೇಕು.


ಇದನ್ನು ಓದಿ : ಜನರಿಗೆ ಬೊಂಬಾಟ್‌ ಆಫರ್.!!‌ ಕೇವಲ 4900 ರೂ. ಹೂಡಿಕೆ ಮಾಡಿದ್ರೆ; ಕ್ಷಣದಲ್ಲಿ ಮಿಲಿಯನೇರ್‌ ಆಗೋದು ಪಕ್ಕಾ

ಎಫ್ ಐ ಡಿ ನಂಬರ್ ಇದ್ದಾಗ ಮಾತ್ರ ಪರಿಹಾರದ ಹಣ ಜಮಾ :

ಸರ್ಕಾರದ ವಿವಿಧ ಪ್ರಯೋಜನಗಳನ್ನು ಪಡೆಯಲು ರೈತರು ಇಫ್ ಐಡಿ ನಂಬರ್ ಹೊಂದುವುದು ಎಷ್ಟು ಮುಖ್ಯವಾಗಿರುತ್ತದೆಯೋ ಅದೇ ರೀತಿಯಲ್ಲಿ ಫ್ರೂಟ್ ಐಡಿಯಲ್ಲಿ ಎಲ್ಲಾ ಜಮೀನಿನ ಸರ್ವೆ ನಂಬರ್ ಸೇರ್ಪಡೆ ಆಗಿರುವುದು ಸಹ ಕಡ್ಡಾಯ ಮಾಡಲಾಗಿದೆ. ಈ ಹಿಂದಿನ ಪದ್ಧತಿಯಲ್ಲಿ ಅನೇಕ ಲೋಪಾದೋಷಗಳು ಇದ್ದು ಕಂದಾಯ ಇಲಾಖೆಯು ಎನ್ ಡಿ ಆರ್ ಎಫ್ ಮಾರ್ಗ ಸೂಚಿಯ ಪ್ರಕಾರ ಈ ಹಿಂದಿನ ವರ್ಷಗಳಲ್ಲಿ ನೆರೆಹಾವಳಿ ಅಥವಾ ಹಾನಿ ಪರಿಹಾರ ನೀಡಲು ಅಧಿಕಾರಿಗಳು ಪರಿಹಾರ ತಂತ್ರಾಂಶದಲ್ಲಿ ಹಾನಿಯಾದ ರೈತರ ಅರ್ಜಿಯನ್ನು ಮೊದಲು ನೋಂದಣಿ ಮಾಡಿ ನಂತರ ಡಿಬಿಟಿ ಮೂಲಕ ಜಿಲ್ಲಾ ಮಟ್ಟದಿಂದ ಹಣ ವರ್ಗಾವಣೆ ಮಾಡಲಾಗುತ್ತಿತ್ತು. ಇದರಿಂದಾಗಿ ಯಾರದ್ದೋ ಜಮೀನಿಗೆ ಯಾರದ್ದೋ ಬ್ಯಾಂಕ್ ಖಾತೆಗೆ ವಿವರ ಹಾಕಿ ನೋಂದಣಿ ಮಾಡಿ ಅನರ್ಹ ಫಲಾನುಭವಿಗಳಿಗೆ ಹಣ ವರ್ಗಾಯಿಸುವ ಪ್ರಕರಣಗಳು ಸಾಕಷ್ಟು ಕಂಡಿರುವುದರಿಂದ ಇವುಗಳನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿ ಫ್ರೂಟ್ ಐಡಿಯನ್ನು ಕಡ್ಡಾಯಗೊಳಿಸಲಾಗಿದೆ.

ಹೀಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ರೈತರು ಪಡೆದುಕೊಳ್ಳಬೇಕಾದರೆ ಫ್ರೂಟ್ ಐಡಿ ಕಡ್ಡಾಯಗೊಳಿಸಲಾಗಿದೆ ಹಾಗಾಗಿ ಫ್ರೂಟ್ ಐಡಿ ಹೊಂದುವುದು ಹೆಚ್ಚು ಅಗತ್ಯವಾಗಿದೆ. ಹಾಗಾಗಿ ನಿಮ್ಮ ಸ್ನೇಹಿತರಿಗೂ ಸಹ ಫ್ರೂಟ್ ಐಡಿ ಇದ್ದರೆ ಮಾತ್ರ ಬೆಳೆ ಪರಿಹಾರ ಹಣ ಹಾಗೂ ಇನ್ನಿತರ ಯಾವುದೇ ಯೋಜನೆಗಳ ಪ್ರಯೋಜನವನ್ನು ಪಡೆಯಲು ಸುಲಭವಾಗುತ್ತದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಸ್ಯಾಲರಿ ಕೂಡ ಹೆಚ್ಚು

ಮಹಿಳೆಯರಿಗೆ ಬಂಪರ್‌ ಕೊಡುಗೆ.!! ಸ್ವಾವಲಂಬಿಯಾಗಲು ಸರ್ಕಾರದ ಹೊಸ ಸ್ಕೀಮ್;‌ ನೀವು ಅಪ್ಲೇ ಮಾಡಿ

Leave a Comment