rtgh

ಫ್ರೀ ಕರೆಂಟ್ ಖುಷಿಯಲ್ಲಿರುವವರಿಗೆ ಶಾಕಿಂಗ್ ಸುದ್ದಿ! ವಿದ್ಯುತ್ ದರ ಮತ್ತೆ ಹೆಚ್ಚಳ

ಹಲೋ ಸ್ನೇಹಿತರೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಚಿತ ಯೋಜನೆಗಳನ್ನು ಜನರಿಗೆ ನೀಡಿದೆ. ಅವುಗಳಲ್ಲಿ ಮುಖ್ಯವಾಗಿ ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಶಕ್ತಿ ಯೋಜನೆ ಮೂಲಕ ಜನರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು. ರಾಜ್ಯ ಸರ್ಕಾರ ಘೋಷಣೆ ಮಾಡಿದ 5 ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ನಾಲ್ಕು ಯೋಜನೆಗಳ ಪ್ರಯೋಜನಗಳನ್ನು ಜನ ಪಡೆದುಕೊಳ್ಳುವಂತೆ ಆಗಿದೆ, ಇನ್ನು ಯುವ ನಿಧಿ ಯೋಜನೆ ಮಾತ್ರ ಜಾರಿಗೆ ಬರುವುದು ಬಾಕಿ ಇದೆ.

gruha jyoti scheme

ಗೃಹಜ್ಯೋತಿ ಯೋಜನೆ ಪ್ರಯೋಜನ ಪಡೆದುಕೊಳ್ಳುವವರಿಗೆ ಶಾಕಿಂಗ್ ಸುದ್ದಿ!

200 ಯೂನಿಟ್ ವರೆಗೆ ಯಾರು ವಿದ್ಯುತ್ ಬಳಕೆ ಮಾಡುತ್ತಾರೋ ಅಂತವರಿಗೆ ಉಚಿತವಾಗಿ ರಾಜ್ಯ ಸರ್ಕಾರ ವಿದ್ಯುತ್ ವಿತರಣೆ ಮಾಡುತ್ತಿದೆ. ಇದರಿಂದ ಲಕ್ಷಾಂತರ ಕುಟುಂಬಕ್ಕೆ ಸಹಾಯವಾಗಿದೆ, ಪ್ರತಿ ತಿಂಗಳು 1000, 2,000ಗಳನ್ನು ವಿದ್ಯುತ್ ಬಿಲ್ ಪಾವತಿ ಮಾಡಬೇಕಿತ್ತು. ಇದು ಬಡವರ ಪಾಲಿಗೆ ದೊಡ್ಡ ಹೊರೆಯಾಗಿತ್ತು ಆದರೆ ರಾಜ್ಯ ಸರ್ಕಾರ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಘೋಷಣೆ ಮಾಡಿದ ನಂತರ ಸಾಕಷ್ಟು ಜನರಿಗೆ ಹಣ ಉಳಿತಾಯವಾಗಿದೆ ಎನ್ನಬಹುದು.

ರಾಜ್ಯ ಸರ್ಕಾರ ಇದೀಗ ಶಾಕಿಂಗ್ ಸುದ್ದಿ ಒಂದನ್ನು ಕೊಟ್ಟಿದ್ದು, ಇನ್ನು ಮುಂದೆ ವಿದ್ಯುತ್ ದರದಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ. ಉಚಿತವಾಗಿ ವಿದ್ಯುತ್ ಪಡೆದುಕೊಳ್ಳುತ್ತಿರುವವರಿಗೆ ಹೆಚ್ಚಿನ ವ್ಯತ್ಯಾಸ ಆಗದೆ ಇದ್ದರೂ, ಯಾರಿಗೆ ಉಚಿತ ವಿದ್ಯುತ್ ಸಿಗುತ್ತಿಲ್ಲವೋ ಅವರಿಗೆ ಪ್ರತಿ ತಿಂಗಳು ದೊಡ್ಡ ಆಘಾತ ಎನ್ನಬಹುದು.

ಇದನ್ನೂ ಸಹ ಓದಿ : ಪಿಎಂ ಕಿಸಾನ್‌ 16ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ! ಇಲ್ಲಾಂದ್ರೆ ಬರಲ್ಲಾ ಕಂತಿನ ಹಣ

ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಎಸ್ಕಾಂ ಹೊಸ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದು ಇದಕ್ಕೆ ಒಪ್ಪಿಗೆ ಸಿಕ್ಕರೆ ಏಪ್ರಿಲ್ ಒಂದು 2024 ರಿಂದ ವಿದ್ಯುತ್ ದರ ಹೆಚ್ಚಳವಾಗಲಿದೆ. ಸದ್ಯ ಪ್ರತಿ ಯೂನಿಟ್ ಮೇಲೆ 50 ರಿಂದ 60 ಪೈಸೆ ಹೆಚ್ಚಳ ಮಾಡಲು ಮನವಿ ಸಲ್ಲಿಸಲಾಗಿದೆ. ಮೇಲ್ನೋಟಕ್ಕೆ ಇದು ದೊಡ್ಡ ಮೊತ್ತ ಅಲ್ಲದೇ ಇರಬಹುದು ಆದರೆ ಒಟ್ಟಾರೆಯಾಗಿ ಬಿಲ್ ಪಾವತಿ ಮಾಡುವಾಗ ಪ್ರತಿ ತಿಂಗಳ ಇನ್ನು ಮುಂದೆ ವಿದ್ಯುತ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ.


ರಾಜ್ಯದಲ್ಲಿ ಪ್ರತಿಯೊಬ್ಬರಿಗೂ, ಪ್ರತಿಯೊಬ್ಬರ ಬೇಡಿಕೆಗೂ ತಕ್ಕಷ್ಟು ವಿದ್ಯುತ್ ಶಕ್ತಿ ಉತ್ಪಾದನೆ ಆಗುತ್ತಿಲ್ಲ, ರಾಜ್ಯದಲ್ಲಿ ಮಳೆಯ ಅಭಾವದಿಂದಾಗಿ ವಿದ್ಯುತ್ ಶಕ್ತಿ ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ ಈ ಹಿನ್ನೆಲೆಯಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಲಾಗಿದೆ ಎಂದು ಸರ್ಕಾರ ಈ ಹಿಂದೆಯೇ ತಿಳಿಸಿದೆ. ಇದೀಗ ಮತ್ತೆ ವಿದ್ಯುತ್ ದರ ಏರಿಕೆ ಆದರೆ ಪ್ರತಿ ತಿಂಗಳು ಬಿಲ್ ಪಾವತಿ ಮಾಡುವವರಿಗೆ ದೊಡ್ಡ ಹೊರೆ ಆಗುವುದರಲ್ಲಿ ಸಂಶಯವೇ ಇಲ್ಲ.

ವಿದ್ಯುತ್ ದರ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರ ಇದುವರೆಗೆ ಅಧಿಕೃತ ಮಾಹಿತಿ ಒದಗಿಸಿಲ್ಲ. ಆದರೆ ವರದಿಯ ಪ್ರಕಾರ ಸದ್ಯದಲ್ಲಿಯೇ ಎಸ್ಕಾಂ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಮಾನ್ಯ ಮಾಡುವ ಸಾಧ್ಯತೆ ಇದೆ.

ಇತರೆ ವಿಷಯಗಳು:

ಇನ್ಮುಂದೆ 450 ರೂ.ಗೆ ಸಬ್ಸಿಡಿ ದರದಲ್ಲಿ ಸಿಗಲಿದೆ ಎಲ್‌ಪಿಜಿ ಸಿಲಿಂಡರ್‌! ಕೂಡಲೇ ಈ ಕೆಲಸ ಮಾಡಿ

ಗ್ಯಾಸ್ ಸಿಲಿಂಡರ್ ಇ-ಕೆವೈಸಿ ದಿನಾಂಕ ಮುಂದೂಡಿಕೆ! ಮೊಬೈಲ್‌ನಲ್ಲೇ ಸುಲಭವಾಗಿ ಮಾಡಿ

ಯುವನಿಧಿಗೆ ಹತ್ತೇ ದಿನಗಳಲ್ಲಿ 30,000 ಅರ್ಜಿ ಸಲ್ಲಿಕೆ! ಬೆಳಗಾವಿ ಟಾಪ್, ನೀವು ಸಲ್ಲಿಸಿದ್ರಾ?

Leave a Comment