ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ನಾಲ್ಕು ಕಂತಿನ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅತಿ ಹೆಚ್ಚು ಅನುದಾನ ಹೊಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಹಣ ಈಗಾಗಲೇ ಸಾಕಷ್ಟು ಮಹಿಳೆಯರ ಖಾತೆಗೆ ತಲುಪಿದೆ. ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ಬಿಡುಗಡೆ ಆಗುತ್ತಿದೆ. ಆದರೆ ಮಹಿಳೆಯರ ಖಾತೆಗೆ ತಲುಪುವಲ್ಲಿ ಮಾತ್ರ ಸಾಕಷ್ಟು ವಿಳಂಬವಾಗುತ್ತಿದೆ. ಇದಕ್ಕೆ ತಾಂತ್ರಿಕ ದೋಷಗಳು ಕಾರಣ ಎಂದು ಸರ್ಕಾರ ಮಾಹಿತಿ ನೀಡಿದೆ.
ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಆಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ನಾಲ್ಕನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಬಗ್ಗೆ ಹೊಸ ಅಪ್ಡೇಟ್ ನೀಡಿದ್ದಾರೆ. ಹಣ ಜಮಾ ಆಗಲು ವಿಳಂಬವಾಗುತ್ತಿದೆ ಎನ್ನುವ ಕಾರಣವನ್ನು ಕೂಡ ತಿಳಿಸಿದ್ದಾರೆ. ಒಂದು ವೇಳೆ ನಿಮ್ಮ ಖಾತೆಗೆ ಜನವರಿ ತಿಂಗಳಿನ ಆರಂಭದಲ್ಲಿಯೇ ಹಣ ಜಮಾ ಆಗದೇ ಇದ್ದರೆ ಚಿಂತೆ ಮಾಡುವ ಅಗತ್ಯವಿಲ್ಲ, ಸದ್ಯದಲ್ಲಿಯೇ ಪ್ರತಿಯೊಬ್ಬರ ಖಾತೆಗೂ ಕೂಡ ನಾಲ್ಕನೇ ಕಂತಿನ ಹಣ ಜಮಾ ಆಗಲಿದೆ ಎಂದು ತಿಳಿಸಿದ್ದಾರೆ.
ನಾಲ್ಕನೇ ಕಂತಿನ ಹಣ 26 ಜಿಲ್ಲೆಗಳಿಗೆ ಜಮಾ:
ಡಿಸೆಂಬರ್ ಕೊನೆಯ ವಾರದಲ್ಲಿಯೇ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣ ಬಿಡುಗಡೆ ಆಗಿತ್ತು. ಆದರೆ ಆಗ ಕೇವಲ 15 ಜಿಲ್ಲೆಗಳಿಗೆ ಮಾತ್ರ ಹಣ ವರ್ಗಾವಣೆ ಮಾಡಲಾಗಿತ್ತು. ಇದೀಗ ಜನವರಿ 3 2024, ಈ ದಿನಾಂಕದಂದು 26 ಜಿಲ್ಲೆಗಳಿಗೆ ನಾಲ್ಕನೇ ಕಂತಿನ ಹಣ ಜಮಾ ಮಾಡಲಾಗಿದೆ.
ಸಂಪೂರ್ಣ ಫಲಾನುಭವಿಗಳ ಖಾತೆಗೆ ಇದೇ ಬರುವ ಶನಿವಾರ ಅಂದರೆ 7 ಜನವರಿ 2024 ರಂದು ಫಲಾನುಭವಿಗಳ ಖಾತೆಗೂ ಕೂಡ ಹಣ ಜಮಾ ಆಗಲಿದೆ. ಹಾಗಾಗಿ ಮಹಿಳೆಯರು ಶನಿವಾರ ಅಥವಾ ಸೋಮವಾರದ ದಿನ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಬಹುದು.
ಗೃಹ ಲಕ್ಷ್ಮಿ ಶಿಬಿರ ಯಶಸ್ವಿ:
ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಯಾರಿಗೆ ಸಮಸ್ಯೆ ಇದೆಯೋ ಯಾರ ಖಾತೆಗೆ ಹಣ ಜಮಾ ಆಗಿಲ್ಲವೋ ಅಂತವರಿಗಾಗಿ ಗ್ರಾಮೀಣ ಮಟ್ಟದಲ್ಲಿ ಮೂರು ದಿನಗಳ ಶಿಬಿರ ಆಯೋಜನೆ ಮಾಡಲಾಗಿತ್ತು. ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಮಹಿಳೆಯರ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ. ಸುಮಾರು ನಾಲ್ಕು ಲಕ್ಷ ಮಹಿಳೆಯರು ಈ ಶಿಬಿರದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಸಹ ಓದಿ : ದೇಶದ ಲಕ್ಷ ಲಕ್ಷ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್! ಮೋದಿ ಸರ್ಕಾರದಿಂದ ಬಂಪರ್ ಉಡುಗೊರೆ
ಇನ್ನು ಮುಂದೆ ಯಾವ ಮಹಿಳೆಯರು ಕೂಡ ತಮ್ಮ ಖಾತೆಯಲ್ಲಿ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಹಣ ಪಡೆಯದೆ ಇರಲು ಸಾಧ್ಯವೇ ಇಲ್ಲ. ಈ ಬಗ್ಗೆ ಬ್ಯಾಂಕ್ ಗಳು ಕೂಡ ಮುತುವರ್ಜಿ ವಹಿಸಲಿದ್ದು ಕೆವೈಸಿ (E-KYC ) ಆಗದೆ ಇರುವ ಖಾತೆಯನ್ನು ಪತ್ತೆ ಹಚ್ಚಿ ಅಂತಹ ಮಹಿಳೆಯರ ಖಾತೆಗೆ ಜವಾಬ್ದಾರಿಯನ್ನು ಹೊತ್ತಿವೆ ಎಂದು ಸರ್ಕಾರ ತಿಳಿಸಿದೆ.
ಗೃಹಲಕ್ಷ್ಮಿ ಯೋಜನೆಯ ಡಿಬಿಟಿ ಸ್ಟೇಟಸ್ ಚೆಕ್ ಮಾಡಿ:
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳು 15 ರಿಂದ 20ನೇ ತಾರೀಕಿನ ಒಳಗೆ ಜಮಾ ಮಾಡಲಾಗುವುದು ಎಂದು ಸರ್ಕಾರ ತಿಳಿಸಿತ್ತು. ಆದರೆ ಈಗ ಸರ್ಕಾರ ನೀಡಿರುವ ಹೊಸ ಅಪ್ಡೇಟ್ ಪ್ರಕಾರ, ತಿಂಗಳಿನ 30 ದಿನಗಳ ಅವಧಿಯಲ್ಲಿ ಯಾವುದೇ ದಿನ ನಿಮ್ಮ ಖಾತೆಗೆ ಹಣ ಬರಬಹುದು, ತಾಂತ್ರಿಕ ದೋಷ ಗಳಿಂದಾಗಿ ಇದೇ ದಿನ ಹಣ ಬರುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.
ಹಾಗಾಗಿ ಪ್ರತಿ ಕಂತಿನ ಹಣ ಒಂದು ತಿಂಗಳ ಅವಧಿಯಲ್ಲಿ ಯಾವ ದಿನ ಬೇಕಾದರೂ ಮಹಿಳೆಯರ ಖಾತೆಗೆ ವರ್ಗಾವಣೆ ಆಗಬಹುದು. ನಾಲ್ಕನೇ ಕಂತಿನ ಹಣವು ಕೂಡ ಕೆಲವರ ಖಾತೆಗೆ ತಲುಪಲು ಜನವರಿ 30ರವರೆಗೂ ಅವಕಾಶವಿದೆ. ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಮೂಲಕ ತಮ್ಮ ಖಾತೆಗೆ ಹಣ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು.
ಮುಂದಿನ ಕಂತಿನ ಹಣದ ಬಗ್ಗೆ ಮಾಹಿತಿ ನೀಡಿದೆ ಸರ್ಕಾರ:
ನಾಲ್ಕನೇ ಕಂತಿನ ಹಣ ಜಮಾ ಆಗುತ್ತಿರುವ ಹಿನ್ನೆಲೆಯಲ್ಲಿ ಐದನೇ ಕಂತಿನ ಹಣವನ್ನು ಕೂಡ ಮಹಿಳೆಯರ ಖಾತೆಗೆ ಬಿಡುಗಡೆ ಮಾಡುವ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ, ಜನವರಿ 30ನೇ ತಾರೀಖಿನ ಒಳಗೆ ಐದನೇ ಕಂತಿನ ಹಣವನ್ನು ಕೂಡ ಬಿಡುಗಡೆ ಮಾಡಲಾಗುವುದು. ಹಾಗಾಗಿ ಬಹುತೇಕ ಮಹಿಳೆಯರ ಖಾತೆಗೆ ನಾಲ್ಕು ಮತ್ತು ಐದನೇ ಕಂತಿನ ಹಣ ಒಟ್ಟಾರೆಯಾಗಿ ರೂ.4,000 ಒಟ್ಟಿಗೆ ಬರುವ ಸಾಧ್ಯತೆ ಇದೆ.
ಇತರೆ ವಿಷಯಗಳು:
ಈ ಕಾರ್ಡ್ ಇದ್ದವರಿಗೆ ಮೊದಲ ಕಂತಿನ ಹಣ ಬಿಡುಗಡೆ! ಸರ್ಕಾರದಿಂದ 1,550 ರೂ. ಖಾತೆಗೆ ಜಮಾ
ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಭಾಗ್ಯ! ಜಿಲ್ಲಾವಾರು ಪಟ್ಟಿ ಬಿಡುಗಡೆ
ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ ಭಾಗ್ಯ! ಜಿಲ್ಲಾವಾರು ಪಟ್ಟಿ ಬಿಡುಗಡೆ