ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಡಿಸೆಂಬರ್ ತಿಂಗಳ ಹಣ ಕೂಡ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂದು ಮಾಹಿತಿ ತಿಳಿದಿದೆ. ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದರೆ ಯೋಜನೆಯ ಹಣ ಪ್ರತಿ ತಿಂಗಳು ಬರುತ್ತಿದೆಯೇ ಮತ್ತು ಯಾವಾಗ ಬರುತ್ತದೆ ಎಂಬುದನ್ನು ತಿಳಿಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಎಲ್ಲ ಮಹಿಳೆಯರಿಗೂ ಪ್ರತಿ ತಿಂಗಳು 2000 ಹಣ ತಿಂಗಳ 10 ದಿನಾಂಕದ ಒಳಗಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದ್ದು. ಸದ್ಯ ಇದೀಗ ಸರ್ಕಾರದಿಂದ ಹಣ ಸಿಗದೇ ಇರುವ ಮಹಿಳೆಯರಿಗೂ ಹಣ ನೀಡಲು ಕೆಲವು ಕಾರ್ಯಕ್ರಮಗಳನ್ನು ಮಾಡಲಾಗಿದೆ ಇದೀಗ ಡಿಸೆಂಬರ್ ತಿಂಗಳ 2000 ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಹಣ ಬಂದಿರುವ ಬಗ್ಗೆ ಹಾಗೂ ಈ ಯೋಜನೆಯ ಸ್ಟೇಟಸ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ.
ಮೊದಲನೆಯದಾಗಿ ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಓಪನ್ ಮಾಡಿ ಅದರಲ್ಲಿ ಮಾಹಿತಿ ಕಣಜ ಎಂದು ಟೈಪ್ ಮಾಡಿ ನಂತರ ನಿಮಗೆ ಇಲಾಖೆಯ ಮಾಹಿತಿ ಕಣಜ ಅಧಿಕೃತ ವೆಬ್ಸೈಟ್ ತೆರೆದುಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಮತ್ತೊಂದು ಪೇಜ್ ಓಪನ್ ಆಗಿ ಅದರ ಕೆಳಭಾಗಕ್ಕೆ ಸ್ಕ್ರೋಲ್ ಮಾಡಿ ಅದರಲ್ಲಿ ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ. ನಂತರ ಮತ್ತೊಂದು ಪೇಜ್ ತೆರೆಯುತ್ತದೆ ನಂತರ ಅದರಲ್ಲಿ ಗೃಹಲಕ್ಷ್ಮಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿಕೊಳ್ಳಿ
ನಂತರ ಹೊಸ ಪೇಜ್ ತೆರೆಯುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಬೇಕಾಗುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ನಂತರ ಮುಂದುವರೆಯಿರಿನಂತರ ನಿಮಗೆ ಕೊನೆಯದಾಗಿ ಒಂದು ಪೇಜ್ ತೆರೆಯುತ್ತದೆ ಆ ಪೇಜ್ ನಲ್ಲಿ ನಿಮ್ಮ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಅಪ್ರೂವ್ ಆಗಿದೆ /ರಿಜೆಕ್ಟ್ ಆಗಿದೆ ಎಂದು ಸ್ಟೇಟಸ್ ಕಾಣಿಸುತ್ತದೆ ಅದರ ಕೊನೆಯಲ್ಲಿ ಡೀಟೇಲ್ಸ್ ಎಂದು option ಇರುತ್ತದೆ.
ಅದರ ಮೇಲೆ ಕ್ಲಿಕ್ ಮಾಡಿ ಕೆಳಭಾಗದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಎಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಮತ್ತು ಯಾವ ಯಾವ ತಿಂಗಳಿನಲ್ಲಿ ಹಣ ಜಮೆಯಾಗಿದೆ ಈಗಾಗಲೇ ಎಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿದೆ ಅದು ಯಾವ ದಿನಾಂಕ ಜಮೆಯಾಗಿದೆ ಎಂಬ ಎಲ್ಲಾ ಮಾಹಿತಿಯನ್ನು ಕೂಡ ನೀವು ಇದರಲ್ಲಿ ಚೆಕ್ ಮಾಡಬಹುದು. ಈ ರೀತಿಯಾಗಿ ನಿಮ್ಮ ಮೊಬೈಲ್ನಲ್ಲಿ ಸುಲಭವಾಗಿ ಯಾವುದೇ ಅರ್ಜಿದಾರರ ಸ್ಟೇಟಸ್ ಚೆಕ್ ಮಾಡಬಹುದಾಗಿದೆ.
ಇತರೆ ವಿಷಯಗಳು
SSLC ಪಾಸಾದವರಿಗೆ ಬ್ಯಾಂಕ್ ಉದ್ಯೋಗಾವಕಾಶ: ರೂ 28,000 ವರೆಗೆ ಸಂಬಳ
ಯುವನಿಧಿ ಯೋಜನೆ: ಮೊದಲ ಕಂತಿನ ಹಣ ವರ್ಗಾವಣೆಗೆ ದಿನಾಂಕ ನಿಗದಿ.! ಸರ್ಕಾರದಿಂದ ಫಲಾನುಭವಿ ಲಿಸ್ಟ್ ರಿಲೀಸ್