rtgh

ಗೃಹಲಕ್ಷ್ಮಿಯರಿಗೆ 5ನೇ ಕಂತಿನ ಹಣ ಬಂತಾ? ಸ್ಟೇಟಸ್ ಚೆಕ್ ಮಾಡೋಕೆ ಇಲ್ಲಿದೆ ಸುಲಭ ಮಾರ್ಗ

ಹಲೋ ಸ್ನೇಹಿತರೇ, ಸಾಮಾನ್ಯವಾಗಿ ಕೈಯಲ್ಲಿ ಹಣ ಇಲ್ಲದೆ ಇದ್ರೆ ಬದುಕು ನಡೆಸುವುದೇ ಕಷ್ಟವಾಗುತ್ತದೆ. ಅದರಲ್ಲೂ ಮನೆಯಲ್ಲಿಯೇ ಇರುವ ಗೃಹಿಣಿಯರಿಗೆ ಹಣಕಾಸಿನ ಅವಶ್ಯಕತೆ ಇದ್ದಾಗಲೂ ಕೂಡ ಹಣ ಇಲ್ಲದೆ ಸಮಸ್ಯೆ ಅನುಭವಿಸುವ ಪರಿಸ್ಥಿತಿ ಎದುರಾಗುತ್ತೆ. ಈ ಪರಿಸ್ಥಿತಿಯನ್ನು ಚೆನ್ನಾಗಿ ಅರಿಯುತ್ತಿರುವ ಸರ್ಕಾರ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದೆ.

gruhalakshmi status check

ಹೌದು, ಇಂದು ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಕುಟುಂಬದ ಮಹಿಳೆಯರು ಪ್ರತಿ ತಿಂಗಳು ರೂ. 2,000 ಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆದು ತಮ್ಮ ಜೀವನದ ತಿಂಗಳ ಖರ್ಚಿನ ಒಂದು ಭಾಗವನ್ನು ನಿರ್ವಹಣೆ ಮಾಡಲು ಸಾಧ್ಯವಾಗುತ್ತಿದೆ. ಇಲ್ಲಿಯವರೆಗೆ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಹಣ ಜಮಾ ಮಾಡಲು ಸರ್ಕಾರ ಶತಾಯಗತಾಯ ಪ್ರಯತ್ನಿಸಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು 2000 ಗಳಂತೆ ಮಹಿಳೆಯರ ಖಾತೆಗೆ ಜಮಾ (DBT) ಆಗುತ್ತದೆ. ಈಗಾಗಲೇ ನಾಲ್ಕು ಕಂತಿನ ಹಣ ಬಿಡುಗಡೆ ಆಗಿದ್ದು 5ನೇ ಕಂತಿನ ಹಣವನ್ನು ಜನವರಿ 30ರ ಒಳಗೆ ಬಿಡುಗಡೆ ಮಾಡಲು ಸರ್ಕಾರ ನಿರ್ಧರಿಸಿದೆ. ಅಲ್ಲಿಗೆ, ಮಹಿಳೆಯರ ಬಳಿ ಸರ್ಕಾರದಿಂದ ಬರೋಬ್ಬರಿ ಹತ್ತು ಸಾವಿರ ರೂಪಾಯಿಗಳು ಖಾತೆಗೆ ಬಂದು ತಲುಪಿವೆ ಎಂದು ಹೇಳಬಹುದು.

ಗೃಹಲಕ್ಷ್ಮಿ ಹಣ ಸರ್ಕಾರಿ ಚಿಟ್ ಫಂಡ್ ನಲ್ಲಿ ಹೂಡಿಕೆ!

ಕೇರಳ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಕೂಡ ಸರ್ಕಾರಿ ಚಿಟ್ ಫಂಡ್ ನಲ್ಲಿ ಮಹಿಳೆಯರು ಹೂಡಿಕೆ ಮಾಡಲು ಸರ್ಕಾರ ಆಹ್ವಾನ ನೀಡಿದೆ. ಈಗಾಗಲೇ ಮಹಿಳೆಯರಿಗೆ ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಕೂಡ ಬರುತ್ತದೆ. ಅಷ್ಟೇ ಅಲ್ಲದೆ ಉಚಿತ ವಿದ್ಯುತ್ ನಿಂದಾಗಿ ವಿದ್ಯುತ್ ಬಿಲ್ಲು ಕೂಡ ಉಳಿಯುತ್ತಿದೆ. ಇಷ್ಟೆಲ್ಲ ಸೌಲಭ್ಯ ಸಿಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರು ಪ್ರತಿ ತಿಂಗಳು ಅಷ್ಟೋ ಇಷ್ಟೋ ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿದೆ.

ಇದನ್ನೂ ಸಹ ಓದಿ : SSLC ಪಾಸಾದವರಿಗೆ ಬ್ಯಾಂಕ್ ಉದ್ಯೋಗಾವಕಾಶ: ರೂ 28,000 ವರೆಗೆ ಸಂಬಳ


ಉಳಿತಾಯ ಮಾಡಿದ ಹಣವನ್ನು ಮನೆಯ ಸಾಸಿವೆ ಡಬ್ಬಿಯಲ್ಲಿ ಹಾಕಿರುವುದಕ್ಕಿಂತ, MSII ಮೂಲಕ ಸರ್ಕಾರಿ ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯಬಹುದು ಎಂದು ಸರ್ಕಾರ ತಿಳಿಸಿದೆ. ಸದ್ಯದಲ್ಲಿ ಸ್ವಸಹಾಯ ಗುಂಪುಗಳ ಮೂಲಕ ಮಹಿಳೆಯರಿಗೆ ಚೀಟಿ ಹೂಡಿಕೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು.

ಇಷ್ಟು ದಿನಗಳವರೆಗೆ ಅನ್ನಭಾಗ್ಯ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಬಹುದಿತ್ತೆ ಹೊರತು, ಗೃಹಲಕ್ಷ್ಮಿ ಯೋಜನೆಯ ಸ್ಟೇಟಸ್ ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ನೀವು ಸರ್ಕಾರದ ಇದೊಂದು ವೆಬ್ಸೈಟ್ನಲ್ಲಿ ಗೃಹಲಕ್ಷ್ಮಿ ಅಪ್ಲಿಕೇಶನ್ ಸ್ಟೇಟಸ್ ಕೂಡ ತಿಳಿದುಕೊಳ್ಳಬಹುದು.

ಮಾಹಿತಿ ಕಣಜ ವೆಬ್ಸೈಟ್ ನಲ್ಲಿ ತಿಳಿದುಕೊಳ್ಳಿ

  • ನೀವು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಗೂಗಲ್ ಬ್ರೌಸರ್ ಗೆ ಹೋಗಿ ಮಾಹಿತಿ ಕಣಜ ಎಂದು ಟೈಪ್ ಮಾಡಿ. ಅಥವಾ https://mahitikanaja.karnataka.gov.in/Service/Service/3136 ಡೈರೆಕ್ಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಮುಂದಿನ ಹಂತದಲ್ಲಿ ನಿಮಗೆ ಮುಖಪುಟ ಕರೆದುಕೊಂಡಾಗ ಗೃಹಲಕ್ಷ್ಮಿ ಅರ್ಜಿ ಸ್ಟೇಟಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನಂತರ ಅರ್ಜಿದಾರರು ತಮ್ಮ 12 ಅಂಕೆಯ ರೇಷನ್ ಕಾರ್ಡ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು. ಬಳಿಕ ಸಬ್ಮಿಟ್ ಎಂದು ಕ್ಲಿಕ್ ಮಾಡಿ.
  • ಇಷ್ಟು ಮಾಡಿದ್ರೆ ನಿಮಗೆ ಗೃಹಲಕ್ಷ್ಮಿ ಯೋಜನೆಯ ನಿಮ್ಮ ಖಾತೆಯ ಎಲ್ಲಾ ವಿವರಗಳು ತಿಳಿಯುತ್ತದೆ. ನೀವು ಅರ್ಜಿ ಹಾಕಿರುವ ದಿನಾಂಕ ಅರ್ಜಿ ಸ್ವೀಕಾರಗೊಂಡ ದಿನಾಂಕ, ಇದುವರೆಗೆ ನಿಮ್ಮ ಖಾತೆಗೆ ಜಮಾ ಆಗಿರುವ ಹಣದ ಮೊತ್ತ ಹೀಗೆ ಎಲ್ಲಾ ಗೃಹಲಕ್ಷ್ಮಿ ಡಿಬಿಟಿ ಸ್ಟೇಟಸ್ ತಿಳಿಯಬಹುದು.

ಒಂದು ವೇಳೆ ಮಾಹಿತಿ ಕಣಜ ವೆಬ್ಸೈಟ್ನಲ್ಲಿ ನಿಮ್ಮ ಗೃಹಲಕ್ಷ್ಮಿ ಖಾತೆಯ ಮಾಹಿತಿ ತಿಳಿಯದೆ ಇದ್ದಲ್ಲಿ, ಹಣ ಜಮಾ ಆಗಿದ್ಯೋ ಇಲ್ವೋ ಎಂಬುದನ್ನು ಬ್ಯಾಂಕಿಗೆ ಹೋಗಿ ನೇರವಾಗಿ ಖಾತೆಯನ್ನು ಚೆಕ್ ಮಾಡಿ ತಿಳಿಯಬಹುದು. ಅಥವಾ ಹತ್ತಿರದ ಸಿಡಿಪಿಓ ಕಚೇರಿಗೆ ಹೋಗಿ ಮಾಹಿತಿ ಪಡೆಯಬಹುದು. ಮಾಹಿತಿ ಕಣಜ ವೆಬ್ಸೈಟ್ ಚೆಕ್ ಮಾಡುವಾಗ ಕಚೇರಿ ಅವಧಿಯಲ್ಲಿಯೇ (ಬೆಳಿಗ್ಗೆ 10 ಗಂಟೆಯಿಂದ ಸಂಜೆ 5:00) ಚೆಕ್ ಮಾಡಿ.

ಇತರೆ ವಿಷಯಗಳು:

ಮನೆಗೆ ಸೋಲಾರ್‌ ಅಳವಡಿಸಲು ಸರ್ಕಾರದ ಉಚಿತ ಸೌರ ಫಲಕ! 25 ವರ್ಷ ಉಚಿತ ವಿದ್ಯುತ್‌

ಪಿಎಂ ಕಿಸಾನ್‌ 16 ನೇ ಕಂತಿಗೆ ಸರ್ಕಾರದ ಹೊಸ ರೂಲ್ಸ್!‌ ಈ 4 ಕೆಲಸ ಮಾಡಿದ್ರೆ ಮಾತ್ರ ದುಡ್ಡು

ಸಂಕ್ರಾಂತಿ ಪ್ರಯುಕ್ತ ಗೃಹಲಕ್ಷ್ಮಿ ಯೋಜನೆ 2000 ಖಾತೆಗೆ ಜಮಾ.! ನಿಮಗೂ ಹಣ ಬಂತಾ ಸ್ಟೇಟಸ್ ಹೀಗೆ ಚೆಕ್‌ ಮಾಡಿ

Leave a Comment