rtgh

ವಿದ್ಯಾರ್ಥಿಗಳಿಗೆ ಬಂಪರ್‌ ಕೊಡುಗೆ.!! ಈ ವರ್ಗದವರ ಖಾತೆಗೆ 75 ಸಾವಿರ ಸ್ಕಾಲರ್ಶಿಪ್;‌ ಅಪ್ಲೇ ಮಾಡಿದವರಿಗೆ ಮಾತ್ರ

ಹಲೋ ಸ್ನೇಹಿತರೇ, ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ ಡಿ ಎಫ್ ಸಿ ಸಮಾಜದಲ್ಲಿ ಹಿಂದುಳಿದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇದಕ್ಕೆ ಅರ್ಹರಾದ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಿ, 75,000 ವಿದ್ಯಾರ್ಥಿ ವೇತನ ಪಡೆದು ಕೊಳ್ಳಬಹುದಾಗಿದೆ.

HDFC Bank Transitional Scholarship
ಯಾರು ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಬಹುದು?

ಎಚ್ ಡಿ ಎಫ್ ಸಿ ಬ್ಯಾಂಕ್ ಪರಿವರ್ತನಾ ಸ್ಕಾಲರ್ಶಿಪ್ ಮೂಲಕ ಈ ಸಿ ಎಸ್ ಎಸ್ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.

ಉನ್ನತ ವಿದ್ಯಾಭ್ಯಾಸ ಮಾಡಲು ಬಯಸುವವರು, ಇನ್ನು ಮುಂದೆ ಆರ್ಥಿಕವಾಗಿ ಸಮಸ್ಯೆ ಇದ್ದರೆ ಶಿಕ್ಷಣ ಪಡೆಯಲು ಹಿಂದೇಟು ಹಾಕುವ ಅಗತ್ಯವಿಲ್ಲ. ಶಿಕ್ಷಣಕ್ಕೆ ಹೊರೆಯಾಗದ ರೀತಿಯಲ್ಲಿ ಆರ್ಥಿಕವಾಗಿ ಸಹಾಯ ನೀಡಲು ಎಚ್ ಡಿ ಎಫ್ ಸಿ ಬ್ಯಾಂಕ್ ಗಳು ಮುಂದಾಗಿದೆ.

1 ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುವವರು, ಪಿಯುಸಿ ಮತ್ತು ಡಿಗ್ರಿ, ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿ ವೇತನದ ಮೊತ್ತ
  • ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ – ವಾರ್ಷಿಕವಾಗಿ ರೂ.15000
  • 7ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ – ವಾರ್ಷಿಕವಾಗಿ ರೂ. 18,000.
ಪದವಿ ವಿದ್ಯಾಭ್ಯಾಸ ಮಾಡುವವರಿಗೆ:
  • ವೃತ್ತಿಪರ ಕೋರ್ಸ್ ಗಳಿಗೆ – ವಾರ್ಷಿಕವಾಗಿ ರೂ. 50,000
  • ಸಾಮಾನ್ಯ ಪದವಿಗೆ – ವಾರ್ಷಿಕವಾಗಿ ರೂಪಾಯಿ 30,000.
  • ಸ್ನಾತಕೋತ್ತರ ಪದವಿಗೆ ಸಾಮಾನ್ಯ ಕೋರ್ಸ್ ಗಳಿಗೆ – ವಾರ್ಷಿಕವಾಗಿ ರೂಪಾಯಿ 35,000
  • ವೃತ್ತಿಪರ ಕೋರ್ಸ್ ಗಳಿಗೆ – ವಾರ್ಷಿಕವಾಗಿ ರೂ.75,000 ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು.

ರೈತರಿಗೆ ಸೋಲಾರ್‌ ಪಂಪ್‌ಗಳ ಮೇಲೆ 90% ಸಬ್ಸಿಡಿ ಕೊಡುಗೆ! ಇಂದೇ ಅಪ್ಲೇ ಮಾಡಿ


ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು
  • ಭಾರತೀಯ ಪ್ರಜೆ ಆಗಿರಬೇಕು
  • ಇಂದಿನ ವರ್ಷದ ತರಗತಿಯಲ್ಲಿ ಕನಿಷ್ಠ 55% ಮಾರ್ಕ್ಸ್ ಪಡೆದಿರಬೇಕು.
  • ಕುಟುಂಬದ ವಾರ್ಷಿಕ ವರಮಾನ 2.5 ಲಕ್ಷ ಮೀರಿರಬಾರದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
  • ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
  • ರೇಷನ್ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಮುಂದಿನ ತರಗತಿಗೆ ಸೇರ್ಪಡೆಗೊಂಡಿದ್ದು ಕಾಲೇಜ್ ಶುಲ್ಕದ ರಶೀದಿ
ಅರ್ಜಿ ಸಲ್ಲಿಸುವ ವಿಧಾನ

ಆನ್ಲೈನ್ ಮೂಲಕ https://www.buddy4study.com/page/hdfc-bank-parivartans-ecss-programme ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಇರುವ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಿ.

ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕವು ಜನವರಿ 15, 2024 (last date to apply January 15th 2024)

Amazon Great Republic Day sale 2024: ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಮೇಲೆ 80% ವರೆಗೂ ರಿಯಾಯಿತಿ

ಕೇವಲ 10 ರೂ.ಗೆ LED ಬಲ್ಬ್! ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ: ಸರ್ಕಾರದ ಹೊಸ ಯೋಜನೆ

Leave a Comment