rtgh

ಹೊಸ ಲೇಬರ್‌ ಕಾರ್ಡ್‌ ಪಡೆಯಲು ಅರ್ಜಿ ಆಹ್ವಾನ.! ನೀವು ಪಡೆದುಕೊಳ್ಳಬೇಕಾ? ಹಾಗಿದ್ದರೆ ತಕ್ಷಣ ಈ ಕೆಲಸ ಮಾಡಿ

ಹಲೋ ಸ್ನೇಹಿತರೇ, ಕಾರ್ಮಿಕ ಇಲಾಖೆಯಿಂದ ಹೊಸದಾಗಿ ಲೇಬರ್ ಕಾರ್ಡ್ ಪಡೆಯಲು ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಏನೆಲ್ಲಾ ದಾಖಲೆಗಳು ಬೇಕು ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

labour card application

ಕಟ್ಟಡ & ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಅರ್ಥಿಕ ಸಂಕಷ್ಟ ಎದುರಾದ ಸಮಯದಲ್ಲಿ ನೆರವಾಗಲು ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಸಹಾಯಧನ ಯೋಜನೆಯನ್ನು ಅನುಷ್ಥಾನ ಮಾಡಲಾಗಿದೆ.

ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಾಯಧನ ಯೋಜನೆಯ ಪ್ರಯೋಜನ ಪಡೆದುಕೊಳ್ಳ / ವಿವಿಧ ಯೋಜನೆಗಳ ಅರ್ಜಿಯನ್ನು ಕರೆದಾಗ ಅರ್ಜಿ ಸಲ್ಲಿಸಲು ಕಾರ್ಮಿಕರು ಕಡ್ಡಾಯವಾಗಿ ಲೇಬರ್ ಕಾರ್ಡ ಹೊಂದಿರಬೇಕಾಗುತ್ತದೆ.

ಲೇಬರ್ ಕಾರ್ಡ ನೋಂದಣಿ ಅಭಿಯಾನ:

ಪ್ರಸ್ತುತ ಕಾರ್ಮಿಕ ಇಲಾಖೆಯಿಂದ ಅರ್ಹ ಜನರಿಗೆ ಯೋಜನೆಯ ಪ್ರಯೋಜನ ಒದಗಿಸಲು ಲೇಬರ್ ಕಾರ್ಡ ನೋಂದಣಿ ಅಭಿಯಾನವನ್ನು 30 ಡಿಸೆಂಬರ್ 2023 ರಿಂದ 31 ಮಾರ್ಚ 2024 ರ ವರೆಗೆ ಮಾಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.


ಲೇಬರ್ ಕಾರ್ಡ ಪ್ರಯೋಜನಗಳು:

ಈ ಕಾರ್ಡ ಹೊಂದಿರು ಫಲಾನುಭವಿಗಳಿಗೆ ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಅನೇಕ ಯೋಜನೆಯಡಿ ಆರ್ಥಿಕ ನೆರವು ಪಡೆದುಕೊಳ್ಳಬಹುದು.

  • ಮದುವೆ ಸಹಾಯಧನ.
  • ವೈದ್ಯಕೀಯ ವೆಚ್ಚದ ನೆರವು.
  • ಮಾಸಿಕ ಪಿಂಚಣಿ ಸೌಲಭ್ಯಗಳು.
  • ಶ್ರಮಸಾಮರ್ಥ್ಯ ಟೂಲ್ ಕಿಟ್ಗಳು.
  • ಉಚಿತ ಸಾರಿಗೆ ಬಸ್ ಪಾಸ್ ವಿತರಣೆ.
  • ಅಂತ್ಯಕ್ರಿಯೆ ವೆಚ್ಚದ ನೆರವು.
  • ಶೈಕ್ಷಣಿಕ ಸಹಾಯಧನ ಯೋಜನೆಗಳು.
  • ಹೆರಿಗೆ ಸೌಲಭ್ಯಗಳು.
  • ತಾಯಿ ಮಗು ಸಹಾಯಹಸ್ತಾ ಯೋಜನೆ.
  • ಅಪಘಾತ ಪರಿಹಾರ ನೆರವು.
  • ದುರ್ಬಲತೆ ಪಿಂಚಣಿ ಸೌಲಭ್ಯ.

ಲೇಬರ್ ಕಾರ್ಡ ಪಡೆಯಲು ಸಲ್ಲಿಸಬೇಕಾಗದ ದಾಖಲೆಗಳು:

(1) ಅರ್ಜಿದಾರರ ಅಧಾರ್ ಕಾರ್ಡ ಪ್ರತಿ (aadhar card)̤
(2) ಬ್ಯಾಂಕ್ ಪಾಸ್ ಬುಕ್ (bank pass book)
(3) 90 ದಿನಗಳ ಉದ್ಯೋಗ ದೃಢೀಕರಣ ಪತ್ರ.
(4) ಪೋಟೋ.( photo)
(5) ಮೊಬೈಲ್ ನಂಬರ್ (mobile number)̤

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತವಾಗಿ ನಿಮ್ಮ ಹತ್ತಿರದ ಹಿರಿಯ ಕಾರ್ಮಿಕ ನಿರೀಕ್ಷಕರ ಕಚೇರಿ / ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ.

ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಿನ್ನೆಲೆ:

ಕಟ್ಟಡ & ಇತರೆ ನಿರ್ಮಾಣ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು ಅಸಂಘಟಿತ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಇಂತಹ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಒಂದನೇ ಮಾರ್ಚ್ 1996 ರಿಂದ ಅನ್ವಯವಾಗುವಂತೆ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ, 1996 ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ಕೇಂದ್ರ ನಿಯಮಗಳು, 

1998 ಅನ್ನು ಜಾರಿಗೆ ತಂದಿರುತ್ತದೆ. ಸದರಿ ಕಾಯ್ದೆಗಳನ್ನು ಯಥಾವತ್ತಾಗಿ ಜಾರಿಗೆ ತರುವ ಉದ್ದೇಶದಿಂದ 2006 ರಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕರ್ನಾಟಕ ನಿಯಮಗಳನ್ನು ರೂಪಿಸುತ್ತದೆ. ಇದರ ಅನುಷ್ಠಾನಕ್ಕೆ 2007ರಲ್ಲಿ ರಾಜ್ಯ ಸರ್ಕಾರವು ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ರಚಿಸಲಿದೆ..

ನಿರುದ್ಯೋಗಿ ಯುವಕರಿಗೆ ಬಿಗ್‌ ಅಪ್ಡೇಟ್.!!‌ ಯುವನಿಧಿ ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಫಿಕ್ಸ್;‌ ಬೇಗ ಈ ಕೆಲಸ ಮಾಡಿ

ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಚಳಿಗಾಲದ ರಜೆ ಘೋಷಣೆ! ಜನವರಿ 1 ರಿಂದ ಸತತ 15 ದಿನ ರಜೆ

Leave a Comment