rtgh

ನಿರುದ್ಯೋಗಿ ಯುವಕರಿಗೆ ಬಿಗ್‌ ಅಪ್ಡೇಟ್.!!‌ ಯುವನಿಧಿ ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಫಿಕ್ಸ್;‌ ಬೇಗ ಈ ಕೆಲಸ ಮಾಡಿ

ಹಲೋ ಸ್ನೇಹಿತರೇ, ಕಾಂಗ್ರೆಸ್ ಸರ್ಕಾರದ 5ನೇ ಗ್ಯಾರಂಟಿ ಯೋಜನೆ ಯುವ ನಿಧಿ ಯೋಜನೆ. ಈ ಯೋಜನೆಗೆ ಯುವಕ ಯುವತಿಯರಿಗೆ ಅರ್ಜಿ ಆಹ್ವಾನಿಸಲಾಗಿದ್ದು ಡಿಸೆಂಬರ್ ಕೊನೆಯ ವಾರದಿಂದ ಅರ್ಜಿ ಸಲ್ಲಿಕೆಯು ಆರಂಭವಾಗಿದೆ. ರಾಜ್ಯದಲ್ಲಿ 5 ಲಕ್ಷಕ್ಕೂ ಅಧಿಕ ಯುವಕ ಯುವತಿಯರು ಯುವ ನಿಧಿ ಯೋಜನೆಯ ಮೂಲಕ ನಿರುದ್ಯೋಗ ಭತ್ಯೆ ಪಡೆದುಕೊಳ್ಳಬಹುದು.

last date for Yuva Nidhi Yojana
ಯುವ ನಿಧಿ ಯೋಜನೆ ಬಗ್ಗೆ ಸರ್ಕಾರದ ಅಪ್ಡೇಟ್?

ಡಿಸೆಂಬರ್ 26 ನೇ ತಾರೀಖಿನಿಂದ ಯುವ ನಿಧಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯ ಮೂಲಕ ಮುಂದಿನ ಎರಡು ವರ್ಷಗಳ ಕಾಲ 2022 – 23ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ, ಪದವೀಧರರು ಹಾಗೂ ಡಿಪ್ಲೋಮಾ ತರಗತಿ ಮುಗಿಸಿರುವವರು ಕ್ರಮವಾಗಿ 3000 ಹಾಗೂ 1,500 ನಿರುದ್ಯೋಗ ಭತ್ಯೆಯಾಗಿ ಪಡೆದುಕೊಳ್ಳಲಿದ್ದಾರೆ. ಶಿಕ್ಷಣ ಮುಗಿಸಿ ಕಳೆದ ಆರು ತಿಂಗಳುಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಈ ಅವಕಾಶವನ್ನು ನೀಡಲಾಗಿದೆ.

ಅರ್ಜಿ ಸಲ್ಲಿಸಿದ ಯಾರಿಗೆ ಜಮಾ ಆಗಲಿದೆ ನಿರುದ್ಯೋಗ ಭತ್ಯೆ?

2022 – 23ನೇ ಸಾಲಿನಲ್ಲಿ ಪದವಿ ಕೋರ್ಸ್ ಹಾಗೂ ಡಿಪ್ಲೋಮಾ ಕೋರ್ಸ್ ಮುಗಿಸಿರುವವರಿಗೆ ನಿರುದ್ಯೋಗ ಭತ್ಯೆ ಸಿಗುತ್ತದೆ. ಯೋಜನೆಯ ಅವಧಿ ಎರಡು ವರ್ಷಗಳು. ಎರಡು ವರ್ಷಗಳ ಒಳಗಾಗಿ ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಕೆಲಸ ಸಿಕ್ಕರೆ ತಕ್ಷಣವೇ ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕು ಎನ್ನುವುದನ್ನು ಸರ್ಕಾರವೇ ತಿಳಿಸಿದೆ. ಅಲ್ಲಿಂದ ಮಾಸಿಕ ವೇತನ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುತ್ತದೆ.

ಗ್ಯಾಸ್ ಸಿಲಿಂಡರ್ ಇ-ಕೆವೈಸಿ ದಿನಾಂಕ ಮುಂದೂಡಿಕೆ! ಮೊಬೈಲ್‌ನಲ್ಲೇ ಸುಲಭವಾಗಿ ಮಾಡಿ

ಇಂಥವರು ಅರ್ಜಿ ಸಲ್ಲಿಸಿದರು ಮಾಸಿಕ ಭತ್ಯೆ ಸಿಗುವುದಿಲ್ಲ
  • ಪದವಿ ಅಥವಾ ಡಿಪ್ಲೋಮೋ ಶಿಕ್ಷಣ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಕೆಲಸ ಮಾಡದೆ ಶಿಕ್ಷಣ ಮುಂದುವರೆಸುವವರು.
  • ಸರ್ಕಾರಿ ಅಥವಾ ಖಾಸಗಿ ವಲಯದಲ್ಲಿ ಕೆಲಸ ನಿರ್ವಹಿಸುತ್ತಿರುವವರು.
  • ಅಪ್ರೆಂಟಿಸ್ಗಳಾಗಿದ್ದು ತಿಂಗಳ ವೇತನ ಪಡೆಯುತ್ತಿರುವವರು.
  • ಸ್ವಂತ ಉದ್ಯೋಗ ಮಾಡುತ್ತಿರುವವರು
  • ಸರ್ಕಾರದ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿರುವವರು

ನಿರುದ್ಯೋಗ ಭತ್ಯೆ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಕೆಲಸ ಸಿಕ್ಕರೆ ಅದನ್ನು ಸರ್ಕಾರದ ಗಮನಕ್ಕೆ ತರಬೇಕು. ಒಂದು ವೇಳೆ ಇದನ್ನು ಹೇಳದೆ ಹಾಗೆ ಮುಚ್ಚಿಟ್ಟರೆ ಸರ್ಕಾರ ಅಭ್ಯರ್ಥಿಗೆ ದೊಡ್ಡ ಪ್ರಮಾಣದಲ್ಲಿ ದಂಡ (penalty) ವಿಧಿಸಬಹುದು.


ಸರ್ಕಾರ ಈಗಾಗಲೇ ನೀಡಿರುವ ಮಾಹಿತಿಯ ಪ್ರಕಾರ ಜನವರಿ 12 ರಿಂದ 20ನೇ ತಾರೀಖಿನ ಒಳಗೆ ಯುವ ನಿಧಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮಾ ಆಗಲಿದೆ.

ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಚಳಿಗಾಲದ ರಜೆ ಘೋಷಣೆ! ಜನವರಿ 1 ರಿಂದ ಸತತ 15 ದಿನ ರಜೆ

ಫ್ರೀ ಕರೆಂಟ್ ಖುಷಿಯಲ್ಲಿರುವವರಿಗೆ ಶಾಕಿಂಗ್ ಸುದ್ದಿ! ವಿದ್ಯುತ್ ದರ ಮತ್ತೆ ಹೆಚ್ಚಳ

ಅಂಗಡಿ ಮಾಲೀಕರೇ ಹುಷಾರ್.!!‌ ಇನ್ಮುಂದೆ ಚೀನಿ ವಸ್ತು ಮಾರಾಟ ಮಾಡಿದ್ರೆ ಬೀಳುತ್ತೆ ಭಾರೀ ದಂಡ

Leave a Comment