ಹಲೋ ಸ್ನೇಹಿತರೇ, ಫೆಬ್ರವರಿ 14ರಿಂದ 17ರವರೆಗೆ ಮದ್ಯ ಮಾರಾಟವನ್ನು ನಿರ್ಬಂಧಿಸಲಾಗುವುದು, ಕೇಲವು ಪ್ರದೇಶದಲ್ಲಿ ಮಾತ್ರ ನಿರ್ಬಂಧ ಮಾಡಲಾಗುವುದು, ಎಲ್ಲೆಲ್ಲಿ ನಿರ್ಬಂಧ ಮಾಡಲಾಗುವುದು ಮತ್ತು ಯಾಕೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಚುನಾವಣೆ ನಡೆಯುವ ಸಮಯದಲ್ಲಿ ನೀತಿ ಸಂಹಿತೆ ಜಾರಿಗೆ ಬರುತ್ತದೆ. ಪ್ರಜಾ ಪ್ರತಿನಿಧಿ ಕಾಯ್ದೆಯ ಅನ್ವಯ ಮತದಾನ & ಮತ ಎಣಿಕೆಯ ವೇಳೆಗೆ ಮದ್ಯ ಮಾರಾಟವನ್ನು ನಿರ್ಬಂಧಿಸಲಾಗುವುದು. ಅಬಕಾರಿ ಕಾಯ್ದೆಯಲ್ಲೂ ಇದೇ ನಿಯಮಯಿದೆ. ಹೀಗಾಗಿ, ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರಿನ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಗಳಲ್ಲಿ ಮದ್ಯ ಮಾರಾಟ ನಿರ್ಬಂಧ ಜಾರಿಯಲ್ಲಿರುತ್ತದೆ.
ಫೆ 14ರ ಸಂಜೆ 5 ಗಂಟೆಯಿಂದ ಫೆ 17 ಬೆಳಗ್ಗೆ 6 ಗಂಟೆಯ ವರೆಗೂ ಬೆಂಗಳೂರು ಮಹಾ ನಗರದ ಹಲವೆಡೆ ಮದ್ಯ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗುತ್ತದೆ. ಪ್ರೇಮಿಗಳ ದಿನ ಆಚರಿಸಲಾಗುವ ಫೆ 14ರಂದೇ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಾಗುತ್ತದೆ.
ಮದ್ಯ ಮಾರಾಟ ನಿರ್ಬಂಧ ಏಕೆ?
ಬೆಂಗಳೂರು ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಉಪ ಚುನಾವಣೆ ಇರುವ ಕಾರಣ ಫೆ 16 ರಿಂದ ಬೆಂಗಳೂರಿನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಜಾರಿಯಲ್ಲಿ ಇರಲಿದೆ. ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಹೊರತಾದ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ ಹೇರಲಾಗುವುದು ಎಂಬ ಮಾಹಿತಿ ತಿಳಿದಿದೆ.
1951ರ ಪ್ರಜಾ ಪ್ರತಿನಿಧಿಯ ಕಾಯ್ದೆಯ ಸೆಕ್ಷನ್ 135 (C) ಹಾಗೂ 1967ರ ಕರ್ನಾಟಕ ಅಬಕಾರಿ ಕಾಯ್ದೆಯ ನಿಯಮ 10 (B) ಅಡಿಯಲ್ಲಿಯೇ ಈ ನಿರ್ಬಂಧ ಜಾರಿಗೆ ತರಲಾಗುವುದು ಎಂದು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತರು ಕೆ. ಎ. ದಯಾನಂದ ಅವರು ಮಾಹಿತಿ ತಿಳಿಸಿದ್ದಾರೆ.
ಈ ಚುನಾವಣೆಯ ಮತದಾನ ಪ್ರಕ್ರಿಯೆ ಬೆಂಗಳೂರು ನಗರ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದ ಮತದಾರರು ಕೂಡ ಭಾಗಿಯಾಗಲಿದ್ದಾರೆ. ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ಮಹದೇವಪುರ, ಯಶವಂತಪುರ, ಬೆಂಗಳೂರು ದಕ್ಷಿಣ ಹಾಗೂ ಆನೇಕಲ್ ಕ್ಷೇತ್ರದ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಹೀಗಾಗಿ ಈ ಎಲ್ಲಾ ಕ್ಷೇತ್ರಗಳಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಫೆ 23ರವರೆಗೂ ಜಾರಿಯಲ್ಲಿರಲಿದೆ. ಮದ್ಯ ಮಾರಾಟ ನಿರ್ಬಂಧ ಕೂಡಾ ಈ ಕ್ಷೇತ್ರದಲ್ಲಿ ಜಾರಿಯಲ್ಲಿರಲಿದೆ.
ಇತರೆ ವಿಷಯಗಳು
ರಾಜ್ಯ ಸರ್ಕಾರದಿಂದ ರೈತರಿಗೆ 3 ಹೊಸ ಯೋಜನೆಗಳು ಜಾರಿ.! ರೈತರಿಗೆ ಪ್ರತಿ ತಿಂಗಳು 3000 ಪಿಂಚಣಿ
ರೇಷನ್ ಕಾರ್ಡ ತಿದ್ದುಪಡಿ ಆರಂಭ.! ಇಂದು & ನಾಳೆ ಈ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ