rtgh

ರೇಷನ್ ಕಾರ್ಡ ತಿದ್ದುಪಡಿ ಆರಂಭ.! ಇಂದು & ನಾಳೆ ಈ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ

ಹಲೋ ಸ್ನೇಹಿತರೇ, ಆಹಾರ ಇಲಾಖೆಯಿಂದ ಇಂದು ಅಂದರೆ 6 ಮತ್ತು 7 ಎರಡು ದಿನ ವೈದ್ಯಕೀಯ ಎಮರ್ಜೆನ್ಸಿ ಕಾರಣಗಳಿಂದಾಗಿ ಪಡಿತರ ಚೀಟಿ ತಿದ್ದುಪಡಿ ಮಾಡಿಕೊಳ್ಳಲು ಅವಶ್ಯಕತೆ ಇದ್ದವರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗುತ್ತಿದೆ. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ration card correction karnataka

ಇಂದು ಅಂದರೆ 6 ರಂದು ಮಧ್ಯಾಹ್ನ 1 ಗಂಟೆಯಿಂದ 4 ಗಂಟೆ ವರೆಗೂ ಕಲಬುರ್ಗಿ, ಬೆಂಗಳೂರು ವಿಭಾಗ ವ್ಯಾಪ್ತಿಯ ಜಿಲ್ಲೆಯ ಗ್ರಾಹಕರಿಗೆ ಅರ್ಜಿ ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗಿದೆ.

  • ಬಳ್ಳಾರಿ, ಚಿತ್ರ ದುರ್ಗ, ದಾವಣಗೆರೆ, ಕಲಬುರ್ಗಿ, ರಾಯಚೂರು, ರಾಮನಗರ, ಶಿವಮೊಗ್ಗ, ತುಮಕೂರು, ಯಾದಗಿರಿ, ವಿಜಯನಗರ, ಬೀದರ್, ಚಿಕ್ಕಬಳ್ಳಾಪುರ, ಕೋಲಾರ, ಕೊಪ್ಪಳ.

ನಾಳೆ 2 ರಂದು ಮಧ್ಯಾಹ್ನ 1 ಗಂಟೆಯಿಂದ 4-00 ಗಂಟೆ ವರೆಗೂ ಬೆಳಗಾವಿ, ಮೈಸೂರು ವಿಭಾಗದ ಜಿಲ್ಲೆಯ ಸಾರ್ವಜನಿಕರಿಗೆ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.

  • ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಂಗಳೂರು, ದಕ್ಷಿಣಕನ್ನಡ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಮಂಡ್ಯ, ಮೈಸೂರು, ಉಡುಪಿ, ಉತ್ತರಕನ್ನಡ, ವಿಜಯಪುರ.

ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ಅಗತ್ಯ ದಾಖಲಾತಿಗಳ ಸಮೇತವಾಗಿ ನಿಮ್ಮ ಹತ್ತಿರದ ಗ್ರಾಮ ಒನ್ / ಕರ್ನಾಟಕ ಒನ್ ಕೇಂದ್ರಗಳ ಮೂಲಕವೇ ಆನ್ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ ಬೇರೆ ಯಾವ ಕಡೆಯಲ್ಲಿಯೂ ಅಥವಾ ಕೇಂದ್ರಗಳಲ್ಲಿಯೂ ಅರ್ಜಿಯನ್ನು ಸಲ್ಲಿಸಲು ಅವಕಾಶವಿಲ್ಲ.


ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ:

ಸಾರ್ವಜನಿಕರಿಗೆ ಆಹಾರ ಇಲಾಖೆ ವತಿಯಿಂದ ಈ ರೀತಿ ಪಡಿತರ ಚೀಟಿ ತಿದ್ದುಪಡಿಗೆ ಕೇವಲ 1 ದಿನ & ನಿಗದಿತ ಸಮಯದಲ್ಲಿ ಮಾತ್ರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಬರುತ್ತಿದೆ ಕೇವಲ ಬೆರಳೆಣಿಕೆಯಷ್ಟು ಅರ್ಜಿ ಸಲ್ಲಿಸಲು ಮಾತ್ರ ಸಾಧ್ಯವಾಗುತಿದ್ದು ಈ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ ಈ ಸಮಸ್ಯೆಗೆ ಶಾಶ್ವತ ಪರಿಹಾರದ ಅಗತ್ಯವಿದೆ.

ಆಹಾರ & ನಾಗರಿಕ ವ್ಯವಹಾರ ಇಲಾಖೆಯ ಅಧಿಕೃತ ವೆಬ್ಸೈಟ್: click here

ಪಿಂಚಣಿದಾರರಿಗೆ ಬಂಪರ್‌ ಕೊಡುಗೆ! ಈ ಯೋಜನೆಯಡಿ ಪ್ರತಿ ತಿಂಗಳು ಪಡೆಯಿರಿ 5 ಸಾವಿರ ರೂ.

ಹಾಲಿಗೆ ಹೆಚ್ಚಿನ ಪ್ರೋತ್ಸಾಹ ಧನ ಏರಿಕೆಗೆ ಎಸ್‌ ಎಂದ ಸರ್ಕಾರ.!! ಅರ್ಹ ಫಲಾನುಭವಿಗಳ ಪಟ್ಟಿ ಪ್ರಕಟ

Leave a Comment