rtgh

LPG ಬಳಕೆದಾರರಿಗೆ ಬಿಗ್‌ ಅಪ್ಡೇಟ್!‌ ಇ-ಕೆವೈಸಿ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ

ಹಲೋ ಸ್ನೇಹಿತರೇ, ಅಡುಗೆ ಅನಿಲ ಸಂಪರ್ಕ ಹೊಂದಿರುವ ಫಲಾನುಭವಿಗಳಿಗೆ ಎಲ್‌ಪಿಜಿ ಎಜನ್ಸಿಗಳಲ್ಲಿ ಇ-ಕೆವೈಸಿ ಮಾಡಿಸುವ ಕುರಿತು ಸ್ಪಷ್ಟನೆ ನೀಡುವ ಬಗ್ಗೆ ಈ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ ಹೊರಡಿಸಲಾಗಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

LPG e kyc updates

ಗ್ಯಾಸ್‌ ಸಿಲಿಂಡರ್‌ ಸಂಪರ್ಕ ಹೊಂದಿರುವ ಫಲಾನುಭವಿಗಳಿಗೆ ಎಲ್.ಪಿ.ಜಿ ಎಜನ್ಸಿಗಳಲ್ಲಿ ಇ-ಕೆವೈಸಿ ಮಾಡಿಸುವ ಕುರಿತು ಸ್ಪಷ್ಟನೆ ನೀಡುವ ಬಗ್ಗೆ ಈ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ ಹೊರಡಿಸಲಾಗಿದೆ. ಗ್ಯಾಸ್ ಏಜನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಿದರೆ ಮಾತ್ರ ಸಬ್ಸಿಡಿ ಸಿಗುತ್ತದೆ ಮತ್ತು ಸಿಲೆಂಡರ್ ಸರಬರಾಜು ಮಾಡಲಾಗುತ್ತದೆ ಎನ್ನುವ ವದಂತಿಗಳಿಗೆ ಸಂಬಂದಿಸಿದಂತೆ ಈ ಕೆಳಕಂಡಂತೆ ಸ್ಪಷ್ಟಿಕರಣವನ್ನು ನೀಡಲಾಗಿದೆ:

1) ಇ-ಕೆವ್ಯಸಿ ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ ಮತ್ತು ಸಾರ್ವಜನಿಕರು ತಮ್ಮ ಬಿಡುವಿನ ಸಮಯದಲ್ಲಿ ಇ-ಕೆವೈಸಿ ಮಾಡಿಸಬಹುದಾಗಿರುತ್ತದೆ.

2) ಇ-ಕೆವೈಸಿ ಪ್ರಕ್ರಿಯೆಯು ಉಚಿತವಾಗಿರುತ್ತದೆ.

ಆದ್ದರಿಂದ ದಿನಾಂಕ 31.12.2023 ರ ಒಳಗಾಗಿ ಗ್ಯಾಸ್ ಏಜನ್ಸಿಗಳಿಗೆ ಹೋಗಿ ಇ-ಕೆವೈಸಿ ಮಾಡಿಸಬೇಕು ಎನ್ನುವ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ತಿಳುವಳಿಕೆಗಾಗಿ ಈ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.


ಇದನ್ನೂ ಸಹ ಓದಿ : ಕೇವಲ 10 ನಿಮಿಷಗಳಲ್ಲಿ ‘ಡ್ರೈವಿಂಗ್ ಲೈಸೆನ್ಸ್’ ಮಾಡಿಸಿ: ಇಲ್ಲಿದೆ ಸುಲಭ ಮಾರ್ಗ

LPG cylinder ekyc-ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ:

ಅಡುಗೆ ಅನಿಲ ಸಂಪರ್ಕ ಹೊಂದಿದವರು ಡಿ.31 ರೊಳಗೆ E-KYC ಮಾಡಿಸಬೇಕೆಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಲಾಗಿರುತ್ತದೆ E-KYC ಮಾಡಿಸಲು ಯಾವುದೇ ಕೊನೆಯ ದಿನಾಂಕ ನಿಗದಿ ಮಾಡಿಲ್ಲ. ಬಿಡುವಿನ ಸಮಯದಲ್ಲಿ ಮಾಡಿಕೊಳ್ಳಬಹುದು,ಇದು ಉಚಿತವಾಗಿದ್ದು ಇದಕ್ಕಾಗಿ ಗ್ಯಾಸ್ ಏಜೆನ್ಸಿಗಳಿಗೆ ಹಣ ಪಾವತಿಸಬೇಕಿಲ್ಲ ಆಹಾರ ಇಲಾಖೆ ಸ್ಪಷ್ಟನೆ ನೀಡಲಾಗಿದೆ.

ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಚೆಕ್ ಮಾಡುವ ವಿಧಾನ:

ಗ್ರಾಹಕರು ಎಲ್ ಪಿ ಜಿ ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ತಮ್ಮ ಮೊಬೈಲ್ ನಲ್ಲೇ ಈ LPG e-KYC Status check ಲಿಂಕ್ ಮೇಲೆ ಕ್ಲಿಕ್ ಮಾಡಿ. ನಮ್ಮ ಪುಟದ ಅಂಕಣದಲ್ಲಿ ವಿವರಿಸಿರುವ ಮಾಹಿತಿಯನ್ನು ತಿಳಿದುಕೊಂಡು ಇ-ಕೆವೈಸಿ ಅಗಿದಿಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಬವುದು.

ಇತರೆ ವಿಷಯಗಳು:

ಅಂತ್ಯೋದಯ ಕಾರ್ಡ್ ಇದ್ದವರಿಗೆ ಭರ್ಜರಿ ಆಫರ್! 2028 ರವರೆಗೆ ಸಿಲಿದೆ ಉಚಿತ ರೇಷನ್‌

ಕಾರ್ಮಿಕ ಕಾರ್ಡ್ ಇದ್ದವರಿಗೆ ಬಂಪರ್! ಕೇಂದ್ರ ಸರ್ಕಾರದಿಂದ ಈ ತಿಂಗಳ ಹಣ ಖಾತೆಗೆ

ಆಭರಣ ಪ್ರಿಯರಿಗೆ ಸಂಕ್ರಾಂತಿಯ ಎಳ್ಳು-ಬೆಲ್ಲ! ಚಿನ್ನ ಬೆಳ್ಳಿಯ ಬೆಲೆಯಲ್ಲಿ ಭಾರಿ ಕುಸಿತ

Leave a Comment