ಹಲೋ ಸ್ನೇಹಿತರೇ, ಭಾರತೀಯ ರೈಲ್ವೇಯಲ್ಲಿ ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ಪ್ರಯಾಣ ಮಾಡುತ್ತಾರೆ. ದೂರದ ಪ್ರಯಾಣಕ್ಕಾಗಿ ಜನರು ರೈಲ್ವೆಯನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ರೈಲ್ವೆ ಈಗ ಮಕ್ಕಳ ಟಿಕೆಟ್ ರಿಸರ್ವೇಶನ್ ಬಗ್ಗೆ ರೈಲ್ವೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಮಕ್ಕಳ ಜೊತೆ ರೈಲಿನಲ್ಲಿ ಪ್ರಯಾಣಿಸುವ ಮುನ್ನವೆ ಈ ನಿಯಮಗಳು ನಿಮಗೆ ತಿಳಿದಿರಬೇಕು. ಯಾವುದು ಆ ನಿಯಮ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ರೈಲಿನಲ್ಲಿ ಪ್ರಯಾಣ ಆರಾಮದಾಯಕವಾಗಿರುತ್ತದೆ ಎನ್ನುವ ಕಾರಣಕ್ಕೆ ಬಹುತೇಕರ ಆಯ್ಕೆ ರೈಲೇ ಆಗಿರುತ್ತದೆ. ವಯಸ್ಸಾದವರು, ಮಕ್ಕಳು ಜೊತೆಗಿದ್ದರೆ ರೈಲು ಪ್ರಯಾಣ ಮತ್ತು ಸುಲಭವ. ತನ್ನ ಪ್ರಯಾಣಿಕ ಅನುಕೂಲಕ್ಕಾಗಿ ರೈಲ್ವೆ ಹೊಸ ಹೊಸ ನಿಯಮಗವನ್ನು ಜಾರಿಗೆ ತರುತ್ತದೆ. ಮಕ್ಕಳ ಟಿಕೆಟ್ ರಿಸರ್ವೇಶನ್ ಬಗ್ಗೆಯೂ ರೈಲ್ವೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ.
5 ವರ್ಷದೊಳಗಿನ ಮಕ್ಕಳು ಉಚಿತ ಪ್ರಯಾಣ :
1 ವರ್ಷದಿಂದ 4 ವರ್ಷದೊಳಗಿನ ಮಕ್ಕಳು ರೈಲ್ವೆಯಲ್ಲಿ ಪ್ರಯಾಣಿಸುತ್ತಿದ್ದರೆ ಅವರಿಗೆ ಟಿಕೆಟ್ ಬುಕ್ ಮಾಡುವ ಅವಶ್ಯಕತೆ ಇರುವುದಿಲ್ಲ. 5 ವರ್ಷದೊಳಗಿನ ಮಕ್ಕಳು ಟಿಕೆಟ್‌ಯಿಲ್ಲದೆ ರೈಲಿನಲ್ಲಿ ಪ್ರಯಾಣ ಮಾಡಬಹುದು. ಅಂದರೆ ಅವರ ಪ್ರಯಾಣ ಉಚಿತವಾಗಿರುತ್ತದೆ. ಆದರೆ, ಜನರ ಬೇಡಿಕೆಯ ಮೇರೆಗೆ, ರೈಲ್ವೆಯು ಆಗಸ್ಟ್ 2022 ರಲ್ಲಿ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ. ಅದರಂತೆ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಉಚಿತವಾಗಿ ಪ್ರಯಾಣ ಮಾಡಬಹುದು, ಆದರೆ ಅವರಿಗೆ ಪ್ರತ್ಯೇಕ ಸೀಟು ಸಿಗಲ್ಲ. ಒಂದು ವೇಳೆ ತಮ್ಮ ಮಗುವಿಗೆ ಪ್ರತ್ಯೇಕ ಸೀಟಿನ ವ್ಯವಸ್ಥೆ ಬೇಕೆಂದರೆ ಪೋಷಕರು ಅದಕ್ಕೆ ಪೂರ್ಣ ಪಾವತಿಯನ್ನು ಮಾಡಬೇಕು.
ಭಾರತಿಯ ರೈಲ್ವೆ ನಿಯಮ ಏನು ಹೇಳುತ್ತದೆ ? :
“06.03.2020 ರ ರೈಲ್ವೆ ಸಚಿವಾಲಯದ ಸುತ್ತೋಲೆಯ ಪ್ರಕಾರವಾಗಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ನೀಡಲಾಗುವುದು. ಆದರೆ, ಪ್ರತ್ಯೇಕ ಬರ್ತ್ /ಆಸನ ಒದಗಿಸುವುದಿಲ್ಲ. ಆದ್ದರಿಂದ, ಪ್ರತ್ಯೇಕ ಬರ್ತ್ ಬೇಡ ಎಂದಾದರೆ ಈ ಮಕ್ಕಳಿಗೆ ಟಿಕೆಟ್ ಖರೀದಿಸುವ ಅಗತ್ಯವಿರುವುದಿಲ್ಲ. ಆದರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿಗೆ ಬರ್ತ್ ಅಥವಾ ಸೀಟ್ ಅಗತ್ಯವಿದ್ದರೆ, ಆ ಸಂದರ್ಭದಲ್ಲಿ ಪೂರ್ಣ ಶುಲ್ಕವನ್ನು ವಿಧಿಸಲಾಗುವುದು.
12 ವರ್ಷ ವಯಸ್ಸಿನ ಮಕ್ಕಳಿಗೆ ಅನ್ವಯಿಸುತ್ತದೆ ಈ ನಿಯಮ :
5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಪ್ರತ್ಯೇಕ ಸೀಟು ಬೇಡ ಎಂದರೆ ಆ ಮಗುವಿಗೆ ನೀವು ಟಿಕೆಟ್ ದರದ ಅರ್ಧದಷ್ಟು ಪಾವತಿ ಮಾಡಬೇಕು. ಮಗುವು ತನ್ನ ಪೋಷಕರ ಸೀಟಿನಲ್ಲಿ ಕುಳಿತು ಪ್ರಯಾಣ ಮಾಡಬಹುದು. 5 ವರ್ಷದಿಂದ 12 ವರ್ಷದೊಳಗಿನ ಮಕ್ಕಳಿಗೆ ಪ್ರತ್ಯೇಕ ಆಸನವನ್ನು ರಿಸರ್ವ್ ಮಾಡಿದ್ದರೆ ಪೂರ್ಣ ಟಿಕೆಟ್ ಬೆಲೆವನ್ನು ವಿಧಿಸಲಾಗುವುದು.
ಈ ಮಧ್ಯೆ, 10 ಕೋಟಿಗೂ ಹೆಚ್ಚು ಮಕ್ಕಳು ಈಗ ಪ್ರತ್ಯೇಕ ಬರ್ತ್ / ಆಸನವನ್ನುಆಯ್ಕೆ ಮಾಡಿಕೊಂಡಿದ್ದರೆ. ಸಂಪೂರ್ಣ ಶುಲ್ಕವನ್ನು ಪಾವತಿಸಿ, ಪ್ರಯಾಣ ಮಾಡಬಹುದು. ರೈಲ್ವೇಯಲ್ಲಿ ಪ್ರಯಾಣಿಸುವ ಶೇಕಡ 70 ರಷ್ಟು ಮಕ್ಕಳು ತಮ್ಮ ಪೋಷಕರು ಸಂಪೂರ್ಣ ಪ್ರಯಾಣ ದರವನ್ನು ಪಾವತಿಸಲು& ಬರ್ತ್ ಬುಕ್ ಮಾಡಲು ಬಯಸುತ್ತಿದ್ದಾರೆ ಎಂದು RTI ಹೇಳಿಕೆ ನೀಡಿದೆ.
ಇತರೆ ವಿಷಯಗಳು
ಮೋದಿ ಸರ್ಕಾರದ ದೊಡ್ಡ ಉಡುಗೊರೆ.!! ಪ್ರತಿ ರೈತರ ಖಾತೆಗೆ ಕನಿಷ್ಠ 30 ಸಾವಿರ ಜಮಾ; ಅಪ್ಲೇ ಮಾಡಿದವರಿಗೆ ಮಾತ್ರ