rtgh

ಹೊಸ ವರ್ಷಕ್ಕೆ ಜಾರಿಯಾಗುವ ಹೊಸ ರೂಲ್ಸ್‌ಗಳು ಏನೇನು? ಯಾವೆಲ್ಲಾ ನಿಯಮಗಳು ಬದಲಾಗಲಿವೆ

ಹಲೋ ಸ್ನೇಹಿತರೇ, 2023ರ ಕೊನೆಯ ಹಂತದಲ್ಲಿ ನಿಂತಿದ್ದೇವೆ. ಹೊಸ ವರ್ಷಾರಂಭದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೊಸ ವರ್ಷದ ಆರಂಭದಲ್ಲಿಯೇ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವ ಕೆಲವು ನಿಯಮಗಳಲ್ಲಿ ಬದಲಾವಣೆ ಕಂಡು ಬರಲಿದೆ. ಸಿಮ್ ಕಾರ್ಡ್‌ನಿಂದ ಹಿಡಿದು ಆದಾಯ ತೆರಿಗೆ ರಿಟರ್ನ್ಸ್(ITRs)ವರೆಗೆ ಕೆಲವು ಬದಲಾವಣೆಗೆ ಸಾಕ್ಷಿಯಾಗಲಿದ್ದೇವೆ.

new year new rules

ಬ್ಯಾಂಕ್‌ ಲಾಕರ್‌ ಒಪ್ಪಂದದ ನವೀಕರಣ

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಿಕೊಳ್ಳಲು ಬ್ಯಾಂಕ್‌ಗಳಿಗೆ (Bank locker agreement) ನೀಡಿದ್ದ ಗಡುವು 2023ರ ಡಿಸೆಂಬರ್‌ 31ರಂದು ಕೊನೆಗೊಳ್ಳಲಿದೆ. ಆರ್‌ಬಿಐ ಈ ಹಿಂದೆ 2021ರ ಆಗಸ್ಟ್‌ 18ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ, 2023ರ ಜನವರಿ 1ರೊಳಗೆ ಈಗಿನ ಸೇಫ್‌ ಡಿಪಾಸಿಟ್‌ ಲಾಕರ್‌ಗಳ ಒಪ್ಪಂದಗಳನ್ನು ನವೀಕರಿಸಬೇಕು ಎಂದು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಬಳಿಕ ಡಿಸೆಂಬರ್‌ 31ರ ತನಕ ನವೀಕರಿಸಿಕೊಳ್ಳಲು ಕಾಲಾವಕಾಶ ವಿಸ್ತರಿಸಿತ್ತು. ಹೊಸ ಲಾಕರ್ ಒಪ್ಪಂದಗಳು ಕೆಲವು ಪ್ರಮುಖ ಬದಲಾವಣೆಗಳನ್ನು ಹೊಂದಿದೆ. ಉದಾಹರಣೆಗೆ ಲಾಕರ್‌ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಬ್ಯಾಂಕ್‌ಗಳು ಪಾವತಿಸಬೇಕಾದ ಪರಿಹಾರದ ಮೊತ್ತ ಹೆಚ್ಚಳ ಇತ್ಯಾದಿ. ಬ್ಯಾಂಕ್‌ಗಳಲ್ಲಿ ಲಾಕರ್ ಹೊಂದಿರುವ ವ್ಯಕ್ತಿಗಳು ಡಿಸೆಂಬರ್ 31ರೊಳಗೆ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕಲು ವಿಫಲವಾದರೆ ಜನವರಿ 1ರಿಂದ ಲಾಕರ್‌ಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಇನ್ಶೂರೆನ್ಸ್‌ ಪಾಲಿಸಿದಾರರಿಗೆ ಮಾಹಿತಿ

ಜನವರಿ 1ರಿಂದ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಎಲ್ಲ ವಿಮಾ ಕಂಪೆನಿಗಳು ತಮ್ಮ ಪಾಲಿಸಿದಾರರಿಗೆ ಗ್ರಾಹಕ ಮಾಹಿತಿಯನ್ನು ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ಈ ದಾಖಲೆಯು ನಿರ್ಣಾಯಕ ವಿಮೆ-ಸಂಬಂಧಿತ ಮಾಹಿತಿಯನ್ನು ಸರಳವಾಗಿ ಗ್ರಾಹಕರಿಗೆ ವಿವರಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಸಹ ಓದಿ : ಈ 3 ಬ್ಯಾಂಕ್‌ನಲ್ಲಿ ಖಾತೆ ಇದ್ರೆ ಮಾತ್ರ ನಿಮ್ಮ ಹಣ ಸೇಫ್: RBI ನಿಂದ ಮಹತ್ವದ ಸುದ್ದಿ

ಇನ್ಶೂರೆನ್ಸ್‌ ಟ್ರಿನಿಟಿ ಪ್ರಾಜೆಕ್ಟ್‌

ವಿಮಾ ಟ್ರಿನಿಟಿ ಯೋಜನೆಯನ್ನು ಪ್ರಾರಂಭಿಸಲು ಯೋಜನೆ ರೂಪಿಸಲಾಗಿದೆ. ಇನ್ಶೂರೆನ್ಸ್‌ ಸುಗಮ್‌, ವಿಮೆಯ ವಿಸ್ತರಣೆ, ವಿಮಾ ವಾಹಕ ಉತ್ಪನ್ನಗಳನ್ನು ಒಳಗೊಂಡಿರುವ ಈ ಯೋಜನೆಯು ವೈವಿಧ್ಯಮಯ ಗುರಿಗಳನ್ನು ಸಾಧಿಸಲು ನೆರವಾಗಲಿದೆ. ಬಿಮಾ ಸುಗಮ್ ಮೂಲಕ ಸೇವೆಗಳ ಖರೀದಿಯನ್ನು ಸರಳಗೊಳಿಸುವುದರಿಂದ ಹಿಡಿದು ವಿಮಾ ವಿಸ್ತರಣೆಯ ಮೂಲಕ ಕೈಗೆಟುಕುವ ದರದಲ್ಲಿ ವಿಮಾ ರಕ್ಷಣೆ ಒದಗಿಸುವ ಗುರಿ ಹೊಂದಲಾಗಿದೆ. ಮಾತ್ರವಲ್ಲ ವಿಮಾ ವಾಹಕಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಕೊಡುಗೆ ನೀಡಲಾಗುವುದು. ಈ ಯೋಜನೆ ಜನವರಿಯಲ್ಲಿ ಜಾರಿಗೊಳ್ಳುವ ನಿರೀಕ್ಷೆ ಇದೆ.


ಆದಾಯ ತೆರಿಗೆ ರಿಟರ್ನ್ ಫೈಲಿಂಗ್

2022-23ರ ಹಣಕಾಸು ವರ್ಷದ (ಎವೈ-2023-24) ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ವಿಫಲವಾದ ತೆರಿಗೆದಾರರು ಜನವರಿ 1ರಿಂದ ತಡವಾಗಿ ರಿಟರ್ನ್ಸ್ ಸಲ್ಲಿಸುವ ಆಯ್ಕೆಯನ್ನು ಹೊಂದಿರುವುದಿಲ್ಲ. ಮಾತ್ರವಲ್ಲ ತಮ್ಮ ರಿಟರ್ನ್ಸ್‌ಗಳಲ್ಲಿ ತಪ್ಪುಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಪರಿಷ್ಕೃತ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗುವುದಿಲ್ಲ.

ಸಿಮ್‌ ಕಾರ್ಡ್‌ ಖರೀದಿ ನಿಯಮ

ಆನ್‌ಲೈನ್‌ ವಂಚನೆಯನ್ನು ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಇದರ ಭಾಗವಾಗಿ ಸಿಮ್ ಕಾರ್ಡ್‌ಗಳ ಮಾರಾಟ ಮತ್ತು ಖರೀದಿ ವಿಚಾರದಲ್ಲಿ ಕಠಿಣ ನಿಯಮಗಳನ್ನು ಪರಿಚಯಿಸುತ್ತಿದೆ. ಇನ್ನು ಮುಂದೆ ಸಿಮ್ ಕಾರ್ಡ್ ಪಡೆಯಲು ಕೆವೈಸಿ ಪ್ರಕ್ರಿಯೆ ಕಡ್ಡಾಯ. ಯಾವುದೇ ಸಿಮ್‌ ಕಾರ್ಡ್‌ ನೀಡುವಾಗ ಗ್ರಾಹಕರ ದಾಖಲೆಯನ್ನು ಸಂಪೂರ್ಣವಾಗಿ ಆನ್‌ಲೈನ್‌ ಮೂಲಕವೇ ಪರಿಶೀಲನೆ ನಡೆಸಲಾಗುತ್ತದೆ. ಹಾಗೊಂದು ವೇಳೆ ಅಕ್ರಮ ನಡೆದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಮತ್ತು ನಕಲಿ ದಾಖಲೆ ಸಲ್ಲಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಸರ್ಕಾರ ಎಚ್ಚರಿಸಿದೆ.

ಇತರೆ ವಿಷಯಗಳು:

ಕೋವಿಡ್-19 ಹೊಸ ಮಾರ್ಗಸೂಚಿ: ಶಾಲಾ ರಜೆ ಮತ್ತು ಉದ್ಯೋಗಿಗಳಿಗೆ 7 ದಿನ ವೇತನ ಸಹಿತ ರಜೆ

ಗೃಹಿಣಿಯರಿಗೆ ಹೊಸ ವರ್ಷದ ದೊಡ್ಡ ಕೊಡುಗೆ! ಗ್ಯಾಸ್ ಸಿಲಿಂಡರ್ ಕೇವಲ 450 ರೂ.ಗೆ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಯೋಜನೆ ಮತ್ತೆ ಆರಂಭ..! ಜನವರಿಯಿಂದ ಅರ್ಜಿ ಸಲ್ಲಿಕೆ

Leave a Comment