ಹಲೋ ಸ್ನೇಹಿತರೇ, ದೇಶದಲ್ಲಿ ಸಾಕಷ್ಟು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ಗಳಿವೆ. ಹಾಗೆಯೇ ದಿವಾಳಿಯಾಗಿರುವಂಥ ಅನೇಕ ಬ್ಯಾಂಕ್ಗಳ ಬಗ್ಗೆ ನಾವು ಕೇಳಿರುತ್ತೇವೆ. ನಷ್ಟದಲ್ಲೇ ನಡೆಯುತ್ತಿರುವ ಬ್ಯಾಂಕ್ಗಳು ಕೂಡ ಇದೆ. ಹೀಗಾಗಿ ಯಾವ ಬ್ಯಾಂಕ್ ಸುರಕ್ಷಿತ ಎನ್ನುವ ಮಾಹಿತಿ ಜನ ಸಾಮಾನ್ಯರ ಬಳಿಯೂ ಇರುವುದಿಲ್ಲ. ಇದೀಗ ಬ್ಯಾಂಕ್ಗಳ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಬಿಡುಗಡೆಯನ್ನು ಮಾಡಿದೆ. ಈ ಮೂಲಕ ನಿಮ್ಮ ಖಾತೆ ಯಾವ ಬ್ಯಾಂಕ್ನಲ್ಲಿದೆ & ಎಷ್ಟು ಸುರಕ್ಷಿತವಾಗಿರುತ್ತದೆ ಎಂದು ತಿಳಿಯಬಹುದು.
ದೇಶೀಯ ಮಟ್ಟದಲ್ಲಿ ಹಣಕಾಸು ವ್ಯವಸ್ಥೆಗೆ ಸಂಬಂಧ ಪಟ್ಟಂತೆ SBI, HDFC ಬ್ಯಾಂಕ್ & ICICI ಬ್ಯಾಂಕ್ ಪ್ರಮುಖ ಬ್ಯಾಂಕ್ಗಳಾಗಿ ಉಳಿದಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೇಳಿಕೆ ನೀಡಿದೆ. ದೇಶದ ಹಣಕಾಸಿನ ವ್ಯವಸ್ಥೆಯ ಮಟ್ಟದಲ್ಲಿ ಈ ಬ್ಯಾಂಕುಗಳು ಬಾರಿ ದೊಡ್ಡ ಪಾತ್ರ ವಹಿಸುತ್ತಿವೆ ಎಂದು ಆರ್ಬಿಐ ತಿಳಿಸಿದೆ. ಆಗಸ್ಟ್ 2015 ರಿಂದ RBI ಪ್ರತಿ ವರ್ಷ ಹಣಕಾಸು ವ್ಯವಸ್ಥೆಗೆ ಮುಖ್ಯವಾದ ಬ್ಯಾಂಕ್ಗಳ ಹೆಸರುಗಳ ಮಾಹಿತಿಯನ್ನು ಅದೇ ತಿಂಗಳಿನಲ್ಲಿ ತಿಳಿಸಿಕೊಡುತ್ತದೆ.
ನಿಯಮಗಳ ಪ್ರಕಾರ SIS ಪ್ರಾಮುಖ್ಯತೆಯ ಆಧಾರದ ಮೇಲೆ ಬ್ಯಾಂಕ್ ಗಳನ್ನು 4 ವಿಭಾದಲ್ಲಿ ಇರಿಸಬಹುದಾಗಿದೆ. ಅಂದರೆ ಬಕೆಟ್ 1-4 ಹೀಗೆ 4 ವಿಭಾಗಗಲ್ಲಿ ವಿಂಗಡಿಸಲಾಗುವುದು. ಈ ಪೈಕಿ ಬಕೆಟ್ ಒಂದು ಎಂದರೆ ಕಡಿಮೆ ಪ್ರಾಮುಖ್ಯತೆಯ ಬ್ಯಾಂಕ್ ಆಗಿದೆ. ಪ್ರಸ್ತುತ SBI ಬಕೆಟ್ ಮೂರರಂದ ನಾಲ್ಕಕ್ಕೆ ಏರಿದರೆ HDFC ಒಂದರಿಂದ ಎರಡನೇ ವರ್ಗಕ್ಕೆ ಸ್ಥಳಾಂತರಗೊಂಡಿದೆ. ICICI ಬ್ಯಾಂಕ್ ಕಳೆದ ವರ್ಷದಂತೆ ಅದೇ ವರ್ಗ ಆಧಾರಿತ ರಚನೆಯಲ್ಲಿ ಉಳಿದಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಕೊಟ್ಟಿದೆ. ಇದರರ್ಥ SBI ಮತ್ತು HDFC ಬ್ಯಾಂಕ್ ಉನ್ನತ ವರ್ಗಕ್ಕೆ ಏರಿವೆ.
ಇತ್ತೀಚಿನ ಆರ್ಬಿಐ ಮಾರ್ಗಸೂಚಿಯ ಪ್ರಕಾರ, ಮಾರ್ಚ್ 31, 2025 ರವರೆಗೆ, ಎಸ್ಬಿಐ ತನ್ನ ರಿಸ್ಕ್ ವೆಯ್ಟೆಡ್ ಸ್ವತ್ತುಗಳ 0.60 ಪ್ರತಿಶತವನ್ನು ಸಿಇಟಿ1 ಬಂಡವಾಳವಾಗಿ ನಿರ್ವಹಿಸಬೇಕಾಗಿದೆ, ಆದರೆ ICICI ಮತ್ತು HDFC ಬ್ಯಾಂಕ್ಗಳು ತಮ್ಮ ರಿಸ್ಕ್ ವೆಯ್ಟೆಡ್ ಸ್ವತ್ತುಗಳ 0.20 ರಷ್ಟು ಹೆಚ್ಚುವರಿ ಸಿಇಟಿ1 ಆಗಿ ನಿರ್ವಹಿಸಬೇಕಾಗಿದೆ.
ಇತರೆ ವಿಷಯಗಳು
ಇನ್ನು ಮುಂದೆ ಪ್ರತಿ ಗ್ಯಾಸ್ ಸಿಲಿಂಡರ್ ಬೆಲೆ 450 ರೂ.! ಬಡವರಿಗಾಗಿ ದಿಟ್ಟ ಕ್ರಮ ಕೈಗೊಂಡ ಸರ್ಕಾರ
ಮಹಿಳೆಯರಿಗಾಗಿ ಸರ್ಕಾರದ ಹೊಸ ಯೋಜನೆ! ಉಚಿತ ಹೊಲಿಗೆ ಯಂತ್ರ ಪಡೆಯಲು ಇಂದೇ ಅಪ್ಲೇ ಮಾಡಿ