rtgh

ಆನ್ಲೈನ್‌ ಕಳ್ಳರಿದ್ದಾರೆ ಹುಷಾರ್.!!‌ ಈ ಮೆಸೇಜ್‌ ಬಂದ್ರೆ ಅಪ್ಪಿ ತಪ್ಪಿನು ಓಪನ್‌ ಮಾಡ್ಬೇಡಿ

ಹಲೋ ಸ್ನೇಹಿತರೇ, ಗೂಗಲ್​ ಪೇ ಮತ್ತು ಫೋನ್​ ಪೇನಂತಹ ಯುಪಿಐ (ಯೂನಿಫೈಡ್​​ ಪೇಮೆಂಟ್​ ಇಂಟರ್​ಫೇಸ್​) ವೇದಿಕೆ ಮೂಲಕ ಜನರಿಗೆ ವಂಚನೆ ಮಾಡಲು ಕ್ರಿಮಿನಲ್​ಗಳು ಹೊಸ ಹೊಸ ತಂತ್ರವನ್ನು ರೂಪಿಸುತ್ತಿರುವುದು ಪೊಲೀಸ್​ ಅಧಿಕಾರಿಗಳ ಕಳವಳಕ್ಕೆ ಕಾರಣವಾಗಿದೆ.

Online fraud cases

ಇತ್ತೀಚೆಗಷ್ಟೇ ಮಹಾರಾಷ್ಟ್ರ ಮೂಲದ ಯುವತಿಯೊಬ್ಬಳು ಇನ್ನೇನು ವಂಚಕರ ಬಲೆಗೆ ಬೀಳುವಷ್ಟರಲ್ಲಿ ಬಚಾವ್​ ಆಗಿದ್ದಳು. ಎಲ್​ಐಸಿ ಹೆಸರಲ್ಲಿ ವಂಚಿಸುವ ಪ್ರಯತ್ನ ನಡೆದಿತ್ತು. ಯುವತಿಯ ತಂದೆಯಿಂದ ಫೋನ್​ ನಂಬರ್​ ಪಡೆದು ಆಕೆಗೆ ಕರೆ ಮಾಡಿದ್ದ ವಂಚಕನೊಬ್ಬ ಮಗು ಎಂದು ಮಾತು ಆರಂಭಿಸಿ, ನಿಮ್ಮ ತಂದೆಯ ಖಾತೆಗೆ 25 ಸಾವಿರ ರೂ. ಎಲ್​ಐಸಿ ಹಣ ಕಳುಹಿಸಬೇಕಿದೆ. ಆದರೆ, ನಿಮ್ಮ ತಂದೆ ಬಳಿ ಯುಪಿಐ ಖಾತೆ ಇಲ್ಲದ ಕಾರಣ ನಿಮ್ಮ ಯುಪಿಐ ನಂಬರ್​ಗೆ ಹಣ ಪಾವತಿಸುತ್ತೇನೆ ಎಂದು ಹೇಳಿದ್ದಾನೆ. ಆರಂಭಯೇ ಆತನ ಮಾತು ನಂಬಿದ ಯುವತಿ ತನ್ನ ಗೂಗಲ್​ ಪೇ ಮಾಹಿತಿಯನ್ನು ನೀಡಿದ್ದಾಳೆ.

ಇದಾದ ಬಳಿಕ ವಂಚಕರು 20000 ಹಾಗೂ 50000 ರೂ.ನಂತೆ ಎರಡು ಬಾರಿ ಹಣದ ವಹಿವಾಟು ನಡೆಸುತ್ತಾನೆ. ಅನಂತರ ಮಾತು ಮುಂದುವರಿಸುವ ವಂಚಕ ಮಗು ನಿನಗೆ 5 ಸಾವಿರವನ್ನು ಕಳುಹಿಸುವ ಬದಲು ಮಿಸ್​ ಆಗಿ 50000 ಕಳಹಿಸಿದ್ದೇನೆ. ದಯವಿಟ್ಟು 45 ಸಾವಿರ ರೂ. ಹಣವನ್ನು ವಾಪಸ್​ ಕಳುಹಿಸು ಎಂದು ಕೇಳುತ್ತಾನೆ. ಬಹಳ ಮುಗ್ದನಂತೆ ಮಾತನಾಡುತ್ತಾನೆ. ಆತನ ಮಾತುಗಳಿಂದ ಅನುಮಾನ ಬಂದು ಗೂಗಲ್​ ಪೇ ಪರಿಶೀಲಿಸಿದಾಗ ಹಣ ಬಂದಿರುವ ಮೆಸೇಜ್​ ಮಾತ್ರ ಇರುತ್ತದೆ. ಆದರೆ, ಬ್ಯಾಂಕ್​ ಖಾತೆಗೆ ಮಾತ್ರ ಹಣ ಕ್ರೆಡಿಟ್​ ಆಗಿರುವುದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವಂಚಕ ತಕ್ಷಣ ಕಾಲ್​ ಕಟ್​ ಸಹ ಮಾಡುತ್ತಾನೆ.

ಅದೃಷ್ಟವಶಾತ್​ ಯುವತಿ ವಂಚಕನ ಜಾಲದಿಂದ ಬಚಾವ್​ ಆಗುತ್ತಾಳೆ. ಒಂದು ವೇಳೆ ಯಾಮಾರಿದ್ದರೆ, 45 ಸಾವಿರ ಹಣ ವಂಚಕ ಜೇಬು ಸೇರುತ್ತಿತ್ತು. ಇದೀಗ ಈ ಪ್ರಕರಣವು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ತನಿಖೆಯು ಸಹ ನಡೆಯುತ್ತಿದೆ.

ಪಡಿತರ ಚೀಟಿದಾರರಿಗೆ ಬ್ಯಾಡ್‌ ನ್ಯೂಸ್.!!‌ ಇಂತಹ ಕುಟುಂಬಕ್ಕಿಲ್ಲ ಉಚಿತ ರೇಷನ್‌


ಜನರನ್ನು ವಂಚಿಸಲು ವಂಚಕರು ಬಳಸುವ ಹಲವಾರು ವಿಧಾನಗಳಿವೆ. ಅವುಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಹೀಗಿವೆ ನೋಡಿ ವಂಚಕರು ಬಳಸುವ ವಿಧಾನಗಳು.

1. ಮೊಬೈಲ್​ಗಳಿಗೆ ಒಂದು ಲಿಂಕ್ ಕಳುಹಿಸಿಸುವ ಮೂಲಕ, ಬಿಲ್‌ಗಳನ್ನು ತಕ್ಷಣವೇ ಪಾವತಿಸಿದ್ರೆ, ಕ್ಯಾಶ್‌ಬ್ಯಾಕ್​ ಸಿಗುತ್ತದೆ ಎಂದು ನಂಬಿಸಿ, ಬಿಲ್​ ಪಾವತಿಗೆ ಒತ್ತಾಯಿಸುವ ಮೂಲಕ ವಂಚನೆಯನ್ನು ಮಾಡುತ್ತಾರೆ. ಒಂದು ವೇಳೆ ಲಿಂಕ್​ ಕ್ಲಿಕ್ ಮಾಡಿದ್ರೆ ಫೋನ್ ಹ್ಯಾಕಿಂಗ್‌ಗೆ ಕಾರಣವಾಗುವ ಮಾಲ್‌ವೇರ್ ಅನ್ನು ಸ್ಥಾಪಿಸುತ್ತಾರೆ.
2. ಸಾರ್ವಜನಿಕ ವೈ-ಫೈ ನೆಟ್‌ವರ್ಕ್‌ಗಳಲ್ಲಿ ಬಳಕೆದಾರರ UPI ಐಡಿ ಮತ್ತು ಪಿನ್ ಸಂಖ್ಯೆಗಳು ಹ್ಯಾಕಿಂಗ್‌ಗೆ ಗುರಿಯಾಗುತ್ತವೆ.
3. ಮೊಬೈಲ್​ ನಂಬರ್​ನೊಂದಿಗೆ ಸಂಯೋಜನೆಗೊಂಡಿರುವ UPI ಖಾತೆಗಳಿಗೆ ಪ್ರವೇಶ ಪಡೆಯಲು ಸಂತ್ರಸ್ತರ ನಕಲಿ ಸಿಮ್ ಕಾರ್ಡ್‌ಗಳನ್ನು ರಚಿಸುವ ಮೂಲಕ ವಂಚನೆ ಮಾಡುತ್ತಾರೆ.

ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೆ ಗುಡ್‌ ನ್ಯೂಸ್!‌ ಹೊಸ ಕಾರ್ಡ್‌ದಾರರಿಗೆ ಸಿಗುತ್ತೆ 5 ಸಾವಿರ!

ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್.! ಸರ್ಕಾರದಿಂದ ಮತ್ತೊಂದು ಭರವಸೆ!!

Leave a Comment