rtgh

60 ವರ್ಷ ಮೇಲ್ಪಟ್ಟವರಿಗೆ 15 ಲಕ್ಷ.! ಪ್ರತಿ ತಿಂಗಳು ಪಿಂಚಣಿ ಪ್ರಧಾನ ಮಂತ್ರಿ ಯೋಜನೆ

ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ವಯ ವಂದನಾ ಯೋಜನೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ಬಯಸುವ ಹಿರಿಯ ನಾಗರಿಕರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ನಡೆಸುವ ಈ ಯೋಜನೆಯ ಲಾಭವನ್ನು ಪಡೆಯಲು 60 ವರ್ಷ ವಯಸ್ಸಿನವರು ಅರ್ಹರಾಗಿರುತ್ತಾರೆ. ಪಡೆಯುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಯಿರಿ.

pm vaya vandana yojana

ಈ ಯೋಜನೆಯಲ್ಲಿ 15 ಲಕ್ಷ ರೂ. ಮೊತ್ತದ ಹೂಡಿಕೆಯೊಂದಿಗೆ ಹಿರಿಯ ನಾಗರಿಕರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಪಿಂಚಣಿ ಪಡೆಯಬಹುದಾಗಿದೆ. ಇದಕ್ಕೆ ಯಾವುದೇ ಗರಿಷ್ಠ ವಯಸ್ಸಿನ ಮಿತಿ ಇಲ್ಲ.

ಹೂಡಿಕೆಯ ಸಮಯದಲ್ಲಿ ಚಂದಾದಾರರು ಆಯ್ಕೆ ಮಾಡಿದ ಪಿಂಚಣಿ ಯೋಜನೆಗೆ ಅನುಗುಣವಾಗಿ 1,3,6 ತಿಂಗಳು, ಅಥವಾ1 ವರ್ಷದ ನಂತರ ಮೊದಲ ಪಿಂಚಣಿ ಕಂತನ್ನು ನೀಡಲಾಗುವುದು. ಇದಕ್ಕೆ 10 ವರ್ಷಗಳ ಪಾಲಿಸಿ ಅವಧಿ ಇರುತ್ತದೆ. ಪಾಲಿಸಿಯ ಸಮಯದಲ್ಲಿ ಪಿಂಚಣಿದಾರರು ಸಾವನ್ನಪ್ಪಿದರೆ ಹೂಡಿಕೆ ಮಾಡಿದ ಮೊತ್ತವನ್ನು ಫಲಾನುಭವಿಯ ಕುಟುಂಬ ಸದಸ್ಯರಿಗೆ ಹಿಂತಿರುಗಿಸಲಾಗುವುದು.

ಪಿಂಚಣಿದಾರರು ಪಾಲಿಸಿ ಅವಧಿಯ ಕೊನೆಯವರೆಗು ಬದುಕಿದ್ದರೆ, ಹೂಡಿಕೆ ಮೊತ್ತ & ಅಂತಿಮ ಪಿಂಚಣಿ ಎರಡನ್ನೂ ಹೂಡಿಕೆದಾರರಿಗೆ ಹಿಂತಿರುಗಿಸಲಾಗುವುದು. ಮಾಸಿಕ ಪಿಂಚಣಿ ಪಾವತಿಗಳೊಂದಿಗೆ ವಾರ್ಷಿಕ ಬಡ್ಡಿ ದರ 7.4 ಪ್ರತಿಶತ ಇರಲಿದೆ. ಈ ಯೋಜನೆಯಡಿ ಕನಿಷ್ಠ ಮಾಸಿಕ ಪಿಂಚಣಿ .1,000 ರೂ & ಗರಿಷ್ಠ ಪಿಂಚಣಿ .9,250 ರೂ ಆಗಿದೆ. ಮಾಸಿಕ 1,62,162 ರೂ, ತ್ರೈಮಾಸಿಕ.1,61,074 ರೂ, ಅರ್ಧವಾರ್ಷಿಕ 1,59,574 ರೂ. & ವಾರ್ಷಿಕ 1,56,658 ರೂ. ಪಿಂಚಣಿ ಸಿಗುತ್ತದೆ. ಹೂಡಿಕೆಯ ಸಮಯದಲ್ಲಿ ಚಂದಾದಾರರು ಆಯ್ಕೆ ಮಾಡಿದ ಪಿಂಚಣಿ ಯೋಜನೆಗೆ ಅನುಗುಣವಾಗಿ ಈ ಕಂತನ್ನು ನೀಡಲಾಗುವುದು. 

ಮಾಸಿಕ ಪಿಂಚಣಿ ಪಡೆಯಲು ಹೂಡಿಕೆದಾರರು ಗರಿಷ್ಠ 15 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ತ್ರೈಮಾಸಿಕ ಪಿಂಚಣಿಗೆ ಗರಿಷ್ಠ ಹೂಡಿಕೆ ಮೊತ್ತ 14,89,933 ರೂ, ಅರೆ ವಾರ್ಷಿಕ ಪಿಂಚಣಿಗೆ 14,76,064 ರೂ. & ವಾರ್ಷಿಕ ಪಿಂಚಣಿಗೆ 14,49,086 ರೂ. ಹೂಡಿಕೆ ಮಾಡ್ಬೇಕು. ಯಾವುದೇ ಹಿರಿಯ ನಾಗರಿಕರು ಈ ಯೋಜನೆಯಲ್ಲಿ 15 ಲಕ್ಷಕ್ಕಿಂತ ಹೆಚ್ಚಿಗೆ ಹೂಡಿಕೆ ಮಾಡಬಾರದು. ಸಂಪೂರ್ಣ ಯೋಜನೆ ಅವಧಿ ಯಾವುದೇ ಸಮಯದಲ್ಲೂ ಪಾಲಿಸಿಯನ್ನು ಸರೆಂಡರ್ ಮಾಡಬಹುದಾಗಿದೆ.


ಅನ್ನಭಾಗ್ಯ ಯೋಜನೆ ಹಣ ಖಾತೆಗೆ ಬಂದಿಲ್ವಾ? ರೇಷನ್ ಕಾರ್ಡ್‌ ನಂಬರ್ ಬಳಸಿ ಹೀಗೆ ಚೆಕ್‌ ಮಾಡಿ

ವಸತಿ ಯೋಜನೆಯಡಿ‌ ಸಿಗಲಿದೆ 1 ಲಕ್ಷಕ್ಕೆ ಮನೆ.! ಇಲ್ಲಿದೆ ಅರ್ಜಿ ಸಲ್ಲಿಸಲು ಬೇಕಾದ ವೆಬ್‌ಸೈಟ್‌ ಲಿಂಕ್

Leave a Comment