rtgh

ರೇಷನ್‌ ಕಾರ್ಡ್‌ ಹೊಂದಿದವರಿಗೆ ಹೊಸ ಅಪ್ಡೇಟ್.!‌ ಜನವರಿ 1 ರಿಂದ ರೇಷನ್‌ ವಿತರಣೆಯಲ್ಲಿ ಹೊಸ ಬದಲಾವಣೆ

ಹಲೋ ಸ್ನೇಹಿತರೇ, ಜನವರಿ 2024, ಹೊಸ ಹಣಕಾಸಿನ ವರ್ಷ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಯಾವೆಲ್ಲ ಕ್ಷೇತ್ರಗಳಲ್ಲಿ ಬದಲಾವಣೆ ಆಗಲಿದೆ ಏನೆಲ್ಲಾ ನಿಯಮ ಅಪ್ಡೇಟ್ ಆಗಲಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ.

ration card ekyc update

ಈಕೆವೈಸಿ (E-KYC) ಮಾಡುವುದು ಕಡ್ಡಾಯ ಹೇಳಲಾಗಿದೆ, ಈ ಕೆಲಸ ಮಾಡದೆ ಇದ್ದಲ್ಲಿ ಸರ್ಕಾರದ ಯೋಜನೆಯ ಪ್ರಯೋಜನ ನಿಮ್ಮ ಕೈ ಸೇರುವುದಿಲ್ಲ!

ರೇಷನ್ ಕಾರ್ಡ್ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕವಾದ ಒಂದು ಗುರುತಿನ ಕಾರ್ಡ್ ಆಗಿದೆ, ಪಡಿತರ ಅಂಗಡಿಗೆ ಹೋಗಿ ಸರ್ಕಾರದಿಂದ ಉಚಿತವಾಗಿ ಸಿಗುವ ಧಾನ್ಯಗಳನ್ನ ಪಡೆದುಕೊಳ್ಳುವುದು ಮಾತ್ರವಲ್ಲದೆ, ಸರ್ಕಾರದಿಂದ ಇತರ ಯಾವುದೇ ಯೋಜನೆಯ ಪ್ರಯೋಜನವನ್ನು ಪಡೆಯಲು ಸಹಯಕವಾಗಿದೆ ಅಥವಾ ಆರೋಗ್ಯಕ್ಕೆ ಸಂಬಂಧಪಟ್ಟ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ. ಹೀಗೆ ಪ್ರತಿಯೊಂದುಕ್ಕೂ ರೇಷನ್ ಕಾರ್ಡ್ ಬಹಳಷ್ಟು ಮುಖ್ಯವಾಗಿದೆ. ಅದರಲ್ಲೂ ಯಾರು ಬಿಪಿಎಲ್ ಕಾರ್ಡ್ ಹೊಂದಿರುತ್ತಾರೆ ಅಂತವರಿಗೆ ಹೆಚ್ಚಿನ ಪ್ರಯೋಜನ ಸಿಗುತ್ತದೆ.

ರೇಷನ್ ಕಾರ್ಡ್ ವಿತರಣೆ ಮಾಡಿರುವುದು ಜನರ ಹಸಿವು ಹೋಗಲಾಡಿಸಲು. ಆದರೆ ಅಗತ್ಯ ಇಲ್ಲದವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು ಸರ್ಕಾರದಿಂದ ಸಿಗುವ ಧಾನ್ಯಗಳನ್ನು ಖರೀದಿ ಮಾಡುತ್ತಿದ್ದಾರೆ.

ಕಳೆದ 6 ತಿಂಗಳಿನಿಂದ ಧಾನ್ಯ ಪಡೆದುಕೊಳ್ಳದೆ ಇರುವ ರೇಷನ್ ಕಾರ್ಡ್ ಕೂಡ ಅಮಾನತ್ತು ಗೊಳಿಸಲಾಗುವುದು ಎಂದು ಸರ್ಕಾರ ನಿರ್ಧರಿಸಿದೆ. ಅಂದ್ರೆ ಸರಿಯಾದ ಕಾರಣವನ್ನು ನೀಡಿ ಬಿಪಿಎಲ್ ಕಾರ್ಡ್ ಅನ್ನು ಮತ್ತೆ ಆಕ್ಟಿವೇಟ್ ಮಾಡಿಸಿಕೊಳ್ಳಬಹುದಾಗಿದೆ.


ರೇಷನ್ ಕಾರ್ಡ್ ಈಕೆ ವೈ ಸಿ ಇನ್ನೂ ಮಾಡಿಸಿಲ್ವಾ?

ಅರ್ಹ ಫಲಾನುಭವಿಗಳಿಗೆ ಮಾತ್ರ ಬಿಪಿಎಲ್ ಕಾರ್ಡ್ ಪ್ರಯೋಜನ ಸಿಗಬೇಕು ಎನ್ನುವ ಕಾರಣಕ್ಕೆ ಸರ್ಕಾರ ಇ–ಕೆ ವೈ ಸಿ ಮಾಡಿಸುವುದನ್ನು ಕಡ್ಡಾಯ ಮಾಡಿದೆ. ರೇಷನ್ ಕಾರ್ಡ್ಗೆ ಇ ಕೆ ವೈ ಸಿ ಮಾಡಿಸದೆ ಇದ್ದಲ್ಲಿ ಬಯೋಮೆಟ್ರಿಕ್‌ ಮುಖಾಂತರ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರ ಧಾನ್ಯ ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಹಾಗಾಗಿ ಸಂಪೂರ್ಣ digitalised technology ಬಳಸಲಾಗುತ್ತಿದೆ ಯಾರೂ ಕೂಡ ವಂಚನೆ ಮಾಡಲು ಸಾಧ್ಯವಾಗುವುದಿಲ್ಲ.

ಕೊನೆಯ ದಿನಾಂಕ ಘೋಷಿಸಿದ ಸರ್ಕಾರ!

ಕರ್ನಾಟಕ ರಾಜ್ಯ ಆಹಾರ ಇಲಾಖೆ ಈಗಾಗಲೇ ತಿಳಿಸಿರುವಂತೆ ಅಕ್ಟೋಬರ್ 30 ನೇ ತಾರೀಖಿನ ಒಳಗೆ ಯಾರು ರೇಷನ್ ಕಾರ್ಡ್ ekyc ಮಾಡಿಸಿಕೊಳ್ಳುವುದಿಲ್ಲವೋ ಅಂತವರ ಕಾರ್ಡ್ ರದ್ದಾಗುತ್ತದೆ ಎಂದು ಸೂಚನೆ ನೀಡಲಾಗಿದೆ.. ಇದಕ್ಕೆ ಡಿಸೆಂಬರ್ 30 ಕೊನೆಯ ದಿನಾಂಕವಾಗಿದೆ ಅಷ್ಟರೊಳಗಾಗಿ ekyc ಮಾಡಿಸಿಕೊಳ್ಳಿ. ಹತ್ತಿರ ಇರುವ ನ್ಯಾಯಬೆಲೆ ಅಂಗಡಿಗೆ ಹೋಗಿ ರೇಷನ್ ಕಾರ್ಡ್ಗೆ ಸಂಬಂಧಪಟ್ಟ ಮಾಹಿತಿ ನೀಡಿ ekyc ಮಾಡಿಸಿಕೊಳ್ಳಬಹುದು OR ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಲಾಗಿನ್ ಮಾಡುವ ಮೂಲಕ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಹೆಸರು ಹೋಬಳಿ ಇನ್ನಿತರ ದಾಖಲೆಯನ್ನು ನಮೂದಿಸಿ ರೇಷನ್ ಕಾರ್ಡ್ ekyc ಪ್ರಕ್ರಿಯೆ ಪೂರ್ಣಗೊಳಿಸಿ. ಇನ್ನು ಮುಂದೆ ಕೂಡ ಬಿಪಿಎಲ್ ಕಾರ್ಡ್ ಪ್ರಯೋಜನ ಪಡೆದುಕೊಳ್ಳಬೇಕು ಎಂದರೆ ಈ ಕೆಲಸವನ್ನು ತಕ್ಷಣವೇ ಮಾಡಿ.

ಆರ್‌ಬಿಐ ನ್ಯೂ ರೂಲ್ಸ್.!! ರಾಜ್ಯಗಳ ಆರ್ಥಿಕ ಸ್ಥಿತಿಯ ಕುರಿತು ಆರ್‌ಬಿಐ ಅಧ್ಯಯನ; ‌ಏನಿದು ಹೊಸ ನಿಯಮ??

ಸ್ವಂತ ಮನೆ ಕನಸು ಇನ್ನು ದುಬಾರಿ.!! 3 ತಿಂಗಳಲ್ಲಿ ಮನೆ ಬೆಲೆ ಏರಿಕೆ; ಯಾಕೆ ಗೊತ್ತಾ??

Leave a Comment