rtgh

ಹಿರಿಯ ನಾಗರಿಕರಿಗೆ ಪಿಂಚಣಿ ಪಾವತಿ ವಿಧಾನದಲ್ಲಿ ಬದಲಾವಣೆ! ಇವರಿಗೆ ಮಾತ್ರ ಸಿಗಲಿದೆ ಈ ತಿಂಗಳ ಹಣ

ಹಲೋ ಸ್ನೇಹಿತರೇ, ಹಿರಿಯ ನಾಗರಿಕರಿಗೆ ಪಿಂಚಣಿ ಪಾವತಿ ವಿಧಾನದಲ್ಲಿ ಹೊಸ ಬದಲಾವಣೆಯನ್ನು ತಂದಿದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಈ ಹಿಂದೆ ವಿವಿಧ ಯೋಜನೆ ಪಿಂಚಣಿಗಳಿಗೆ ಸಂಬಂಧಿಸಿದ ಫಲಾನುಭವಿಗಳಿಗೆ ಖಾಜಾನೆ 2ರ ಮುಖಾಂತರ ಪಿಂಚಣಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿತ್ತು, ಅದರೆ ಈ ತಿಂಗಳಿನಿಂದ “ಆಧಾರ್ ಆಧಾರಿತ ಡಿ.ಬಿ.ಟಿ ಮೂಲಕ ಪಿಂಚಣಿ ಪಾವತಿ ಮಾಡಲಾಗುತ್ತದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೆಶನಾಲಯದ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ.

senior citizen pension scheme

ನಮ್ಮ ರಾಜ್ಯದಲ್ಲಿ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಅರ್ಥಿಕವಾಗಿ ಹಿಂದುಳಿದ ಮತ್ತು ಹಿರಿಯ ನಾಗರಿಕರಿಗೆ, ಇತರೆ ಯೋಜನೆ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಆಯಾ ಯೋಜನೆಯಡಿ ನಿಗಧಿಪಡಿಸಿರುವ ಪಿಂಚಣಿ ಹಣವನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ ನೈಜ ಫಲಾನುಭವಿಗಳಿಗೆ ಪ್ರತಿ ತಿಂಗಳು ಶೀಘ್ರದಲ್ಲೇ ಅವರ ಖಾತೆಗೆ ಪಿಂಚಣಿ ಹಣವನ್ನು ತಲುಪಿಸುವ ಉದ್ದೇಶದಿಂದ ಈ ಹಿಂದೆ ಹಣ ಪಾವತಿ ಮಾಡಲು ಅನುಸರಿಸುತ್ತಿರುವ ವಿಧಾನದ ಬದಲಿಗೆ ಈ ತಿಂಗಳಿನಿಂದ ಆಧಾರ್ ಆಧಾರಿತ ಡಿ.ಬಿ.ಟಿ ಮೂಲಕ ಪಿಂಚಣಿ ಪಾವತಿಗೆ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲವು ನಿರ್ಧರಿಸಿದೆ.

ಈ ಫಲಾನುಭವಿಗಳಿಗೆ ಮಾತ್ರ ಸಿಗಲಿದೆ ಈ ತಿಂಗಳ ಪಿಂಚಣಿ ಹಣ:

ಪಿಂಚಣಿ ಪಡೆಯುತ್ತಿರುವ ಅರ್ಹ ಫಲಾನುಭವಿಗಳು ಪಿಂಚಣಿ ಪಡೆಯಲು ಯಾವ ಕ್ರಮ ಅನುಸರಿಸಬೇಕು? ಈ “ಆಧಾರ್ ಆಧಾರಿತ ಡಿ.ಬಿ.ಟಿ ಮೂಲಕ ಪಿಂಚಣಿ ಪಾವತಿ” ಮೂಲಕ ಹಣ ಪಡೆಯಲು ಪಿಂಚಣಿದಾರರು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ / NPCI Mapping ಆಗಿರುವ ಬ್ಯಾಂಕ್ / ಅಂಚೆ ಖಾತೆ ಹೊಂದಿದ್ದರೆ ಸಾಕು ನಿಮಗೆ ಪಿಂಚಣಿ ಹಣ ನೇರ ನಗದು ವರ್ಗಾವಣೆ ಮೂಲಕ ಜಮಾ ಅಗುತ್ತದೆ.

ಇದನ್ನೂ ಸಹ ಓದಿ : ಯುವನಿಧಿಗೆ ಈವರೆಗೆ 32,000 ಅರ್ಜಿ ಸಲ್ಲಿಕೆ.! ಇಂದು ಈ ಜಿಲ್ಲೆಯಲ್ಲಿ ಚಾಲನೆ.! ಅರ್ಹ ನಿರುದ್ಯೋಗಿ ಖಾತೆಗೆ ಬೀಳುತ್ತೆ1500, 3000 ರೂ

ಈ ಹಿಂದೆ ಪಿಂಚಣಿ ಹಣ ವರ್ಗಾವಣೆ ಹೇಗೆ ಮಾಡಲಾಗುತ್ತಿತ್ತು?

ಪಿಂಚಣಿ ನಿರ್ದೇಶನಾಲಯದಿಂದ  ಈ ಹಿಂದೆ ವಿವಿಧ ಪಿಂಚಣಿಗಳಿಗೆ ಸಂಬಂಧಿಸಿದ ಫಲಾನುಭವಿಗಳಿಗೆ ನವೆಂಬರ್ 2023ರ ಮಾಹೆಯವರೆಗೆ ಖಾಜಾನೆ 2ರ ಮುಖಾಂತರ ಪಿಂಚಣಿ ಹಣವನ್ನು ಅರ್ಹ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗುತ್ತಿತ್ತು ಈ ವಿಧಾನವು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರಿಂದ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆ ಮೂಲಕ ಪಿಂಚಣಿ ಪಾವತಿ ಮಾಡಲು ಇಲಾಖೆಯು ನಿರ್ಧರಿಸಿ.


ಇನ್ನು ಮುಂದೆ ಹೊಸ ಪಿಂಚಣಿ ಪಾವತಿ ವಿಧಾನ:

ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯವು  ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಮಾಹಿತಿ ಅನ್ವಯ 2023ನೇ ಡಿಸೆಂಬರ್ 30ರ ಸರ್ಕಾರಿ ಆದೇಶದನ್ವಯ ಆಧಾರ್ ಆಧಾರಿತ ಪಿಂಚಣಿ ವ್ಯವಸ್ಥೆಯನ್ನು ಡಿಸೆಂಬರ್ 2023 ರಿಂದ ಜಾರಿಗೆ ತರಲಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಜೋಡಣೆ/NPCI Mapping ಆಗಿರುವ ಬ್ಯಾಂಕ್/ಅಂಚೆ ಖಾತೆಗೆ ಕೇಂದ್ರೀಕೃತವಾಗಿ ಆಧಾರ್ ಆಧಾರಿತ ಡಿ.ಬಿ.ಟಿ ವ್ಯವಸ್ಥೆಯಡಿ ಡಿಸೆಂಬರ್ 2023ರ ಮಹೆಯ ಪಿಂಚಣಿ ಪಾವತಿಯಾಗಲಿದೆ ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೆಶನಾಲಯದ ನಿರ್ದೇಶಕರು ತಿಳಿಸಿದ್ದಾರೆ.

ಪಿಂಚಣಿ ಹಣ ಬಂದಿದಿಯೋ ಇಲ್ಲವೋ ಎಂದು ತಿಳಿಯುವ ವಿಧಾನ:

ಪಿಂಚಣಿ ಪಡೆಯುತ್ತಿರುವ ಅರ್ಹ ಫಲಾನುಭವಿಗಳು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಅಧಿಕೃತ ಜಾಲತಾಣ ಭೇಟಿ ಮಾಡಿ ಪ್ರತಿ ತಿಂಗಳ ಪಿಂಚಣಿ ಹಣ ವರ್ಗಾವಣೆಯ ಸಂಪೂರ್ಣ ವಿವರವನ್ನು ನಿಮ್ಮ ಮೊಬೈಲ್ ನಲ್ಲಿ ತಿಳಿಯಬವುಹುದಾಗಿದೆ.

ಇತರೆ ವಿಷಯಗಳು:

ಮಹಿಳಾ ರೈತರಿಗೆ ಸಿಹಿ ಸುದ್ದಿ! ಕೇಂದ್ರದಿಂದ ವಾರ್ಷಿಕ ₹12,000 ಕಿಸಾನ್‌ ಸಮ್ಮಾನ್‌ ನಿಧಿ ಘೋಷಣೆ

ಯುವ ನಿಧಿ ಯೋಜನೆಗೆ ಇಂದು ಚಾಲನೆ! ಫಲಾನುಭವಿಗಳ ಖಾತೆಗೆ ಬೀಳಲಿದೆ 1500, 3000 ರೂಪಾಯಿ

ಕೇವಲ 10 ರೂ.ಗೆ LED ಬಲ್ಬ್! ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ: ಸರ್ಕಾರದ ಹೊಸ ಯೋಜನೆ

Leave a Comment