ಹಲೋ ಸ್ನೇಹಿತರೇ, ನೀವು ವ್ಯಾಸಂಗ ಮಾಡುತ್ತೀದ್ದಿರಾ? ನೀವು ಕೂಡ ಸರ್ಕಾರದ ವಿದ್ಯಾರ್ಥಿವೇತನ ಪಡೆದುಕೊಳ್ಳಬೇಕಾ ಹಾಗಿದ್ದರೆ ಅರ್ಹ ವಿದ್ಯಾರ್ಥಿಗಳಿಂದ SSP Post Matric Scholarship ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ನೀವು ಅರ್ಹರಾಗಿದ್ದರೆ ಕೂಡಲೇ ಅಪ್ಲೇ ಮಾಡಿ.
ವಿದ್ಯಾರ್ಥಿವೇತನ ಹೆಸರು: ಶುಲ್ಕ ಮರುಪಾವತಿ ವಿದ್ಯಾರ್ಥಿವೇತನ
ಅರ್ಜಿ ಸಲ್ಲಿಸುವ ವಿಧಾನ: online
ಅಗತ್ಯ ದಾಖಲೆಗಳು:
- aadhar card
- mobile number
- ಇ-ಮೇಲ್ ಐ.ಡಿ.
- sslc ನೋಂದಣಿ ಸಂಖ್ಯೆ
- ಜಾತಿ & ಆದಾಯ ಪ್ರಮಾಣ ಪತ್ರ
- ವಿದ್ಯಾರ್ಥಿಯು ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ
- ವಿದ್ಯಾರ್ಥಿಯು ವಾಸವಿರುವ ಜಿಲ್ಲೆ , ತಾಲ್ಲೂಕು, ವಿಧಾನಸಭಾ ಕ್ಷೇತ್ರದ ಹೆಸರು ಮತ್ತು ಮನೆಯ ವಿಳಾಸ
- ಕಾಲೇಜು ದಾಖಲಾತಿ/ನೋಂದಣಿ ಸಂಖ್ಯೆ
- ಸಂಬಂದಪಟ್ಟ ದಾಖಲೆಗಳ ಇ-ದೃಢೀಕರಣ ಸಂಖ್ಯೆ (ಅನ್ವಯವಾದಲ್ಲಿ )
- ಹಾಸ್ಟೆಲ್ ವಿವರ (ಅನ್ವಯವಾದಲ್ಲಿ )
ಅರ್ಹತೆಗಳು
- ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಪಾರ್ಸಿ ಜೈನ, ಬೌದ್ಧ ಜನಾಂಗಕ್ಕೆ ಸೇರಿದವರಾಗಿರಬೇಕು
- ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಗಳಾಗಿರಬೇಕು.
- ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಟ 50% ಅಂಕ ಪಡೆದಿರಬೇಕು.
- ಮೆಟ್ರಿಕ್ ನಂತರದ (ಶುಲ್ಕ ಮರುಪಾವತಿ) ಕುಟುಂಬದ ವಾರ್ಷಿಕ ಆದಾಯ ಒಟ್ಟು 2 ಲಕ್ಷ ಮೀರಿರಬಾರದು & ಮೆರಿಟ್-ಕಮ್-ಮೀನ್ಸ್ (ಶುಲ್ಕ ಮರುಪಾವತಿ) ರೂ. 2.5 ಲಕ್ಷ ಮೀರಿರಬಾರದು.
ಅಲ್ಪಸಂಖ್ಯಾತರ ನಿರ್ದೇಶನಾಲಯ ಬೆಂಗಳೂರು ಅವರಿಂದ PUC, ಡಿಪ್ಲೊಮಾ, ತಾಂತ್ರಿಕ & ವೃತ್ತಿಪರ ಪದವಿ & ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲಿ ಓದುತ್ತಿರುವ ಕರ್ನಾಟಕ ರಾಜ್ಯದಲ್ಲಿರುವ ಅರ್ಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ 2023-24 ನೇ ಸಾಲಿನ ಶುಲ್ಕ ಮರುಪಾವತಿ ಯೋಜನೆಯಡಿಯಲ್ಲಿ online ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.
ಸೂಚನೆ: ಪ್ರಸ್ತುತ ಅಧಿಸೂಚನೆ ಶುಲ್ಕ ಮರುಪಾವತಿಗೆ ಮಾತ್ರ ಅನ್ವಯಿಸಲಿದೆ. ಅರ್ಜಿಗಳನ್ನು ಶುಲ್ಕ ಮರುಪಾವತಿ ಯೋಜನೆಯಡಿ ಮಾತ್ರ ಪರಿಗಣಿಸಲಾಗುತ್ತದೆ.
ಈ ಮರುಪಾವತಿ ವಿದ್ಯಾರ್ಥಿವೇತನಕ್ಕಾಗಿ ಅಗತ್ಯ ದಾಖಲೆಗೊಂದಿಗೆ SSP Scholarship Portal ನಲ್ಲಿ ನಿಗದಿ ಪಡಿಸಿರುವ ಕೊನೆ ದಿನಾಂಕದೊಳಗೆ ಅರ್ಜಿ ಸಲ್ಲಿಬೇಕು.
SSP Scholarship 2024 Last Date:
ಪೋಸ್ಟ್ -ಮೆಟ್ರಿಕ್ & ಮೆರಿಟ್-ಕಮ್ -ಮೀನ್ಸ್ ಶುಲ್ಕ ಮರುಪಾವತಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-02-2024
ಪ್ರಮುಖ ಲಿಂಕ್‌ಗಳು
ಅರ್ಜಿ ಸಲ್ಲಿಕೆ ಲಿಂಕ್: Apply ಮಾಡಿ
ಅಧಿಕೃತ ವೆಬ್‌ಸೈಟ್: https://dom.karnataka.gov.in, ssp.postmatric.karnataka.gov.in
ಇತರೆ ವಿಷಯಗಳು
ಈ ಜನರಿಗೆ 25 ಲಕ್ಷಗಳ ಉಚಿತ ಸಹಾಯಧನ! ಆಯುಷ್ಮಾನ್ ಭಾರತ್ ಕಾರ್ಡ್‌ಗಾಗಿ ಬೇಗ ಬೇಗ ಅರ್ಜಿ ಸಲ್ಲಿಸಿ
ಕಲಿಕಾ ಭಾಗ್ಯ ಯೋಜನೆ; ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 60,000 ಶೈಕ್ಷಣಿಕ ಸಹಾಯಧನ.! ಕೂಡಲೇ ಚೆಕ್ ಮಾಡಿ