ಹಲೋ ಸ್ನೇಹಿರತೇ, ಏರುತ್ತಿರುವ ಬೆಲೆಗೆ ಕಡಿವಾಣ ಹಾಕಲು ಸರ್ಕಾರ ಭಾರತ್ ಬ್ರಾಂಡ್ ಪರಿಚಯಿಸುತ್ತಿದೆ, ಭಾರತ್ ರೈಸ್, ಭಾರತ್ ಹಿಟ್ಟು & ಭಾರತ್ ದಾಲ್ ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ದರದಲ್ಲಿ ಮಾರಾಟ, ಖರೀದಿ ಮಾಡುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಬೆಲೆ ಏರಿಕೆಯಿಂದ ಕಂಗೆಟ್ಟ ಜನ ಸಾಮಾನ್ಯರ ಹೊರೆ ಇದೀಗ ಕೇಂದ್ರ ಸರ್ಕಾರವು ಕಡಿಮೆ ಮಾಡಿದೆ. ಭಾರತ್ ರೈಸ್, ಭಾರತ್ ಹಿಟ್ಟು & ಭಾರತ್ ದಾಲ್ ಅನ್ನು ಮಾರುಕಟ್ಟೆಗಿಂತ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ. ‘ಭಾರತ್ ಅಟ್ಟ’ & ‘ಭಾರತ್ ದಾಲ್ ‘ ನಂತರ ಈಗ ಸರ್ಕಾರವು ‘ಭಾರತ್ ರೈಸ್’ KGಗೆ 29 ರೂ.ಗೆ ಮಾರಾಟವನ್ನು ಮಾಡಲು ಆರಂಭಿಸಿದೆ. KGಗೆ 40 – 50 ರೂ.ಕೊಟ್ಟು ಖರೀದಿಸುವ ಅಕ್ಕಿ ಇದೀಗ ಕೇವಲ 29 ರೂ ಸಿಗುತ್ತಿದೆ. ಭಾರತ್ ಪ್ಯಾಕ್ ಅನ್ನು 5 & 10 KG ಪ್ಯಾಕ್‌ನಲ್ಲಿ ಖರೀದಿಸಬಹುದಾಗಿದೆ. 29 ರೂ ಗೆ. ಅಕ್ಕಿ, 27 ರೂ.ಗೆ ಗೋಧಿಹಿಟ್ಟು, 60 ರೂ.ಗೆ ಬೇಳೆ.
ಖರೀದಿಸುವುದು ಎಲ್ಲಿಂದ ?:
ಭಾರತ ಸರ್ಕಾರ ಭಾರತ್ ಬ್ರಾಂಡ್ ಅಡಿ ಮೊದಲು ಬೇಳೆಕಾಳುಗಳು, ನಂತರ ಹಿಟ್ಟು & ಈಗ ಅಕ್ಕಿಯನ್ನು ಮಾರಾಟ ಮಾಡಲು ಆರಂಭಿಸಿದೆ. ಭಾರತ್ ಅಕ್ಕಿ KGಗೆ 29 ರೂ.ಗೆ 2 ಹಂತದಲ್ಲಿ ಬಿಡುಗಡೆಯಾಗಿದ್ದು.1ನೇ ಹಂತದಲ್ಲಿ5 ಲಕ್ಷ ಟನ್ ಅಕ್ಕಿ ನೀಡಲಾಗುತ್ತಿದ್ದು. ನೀವು ಅದನ್ನು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ, ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ of ಇಂಡಿಯಾ ಲಿಮಿಟೆಡ್ & ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ of ಇಂಡಿಯಾ ನಿಂದ ಖರೀದಿಸಬಹುದಾಗಿದೆ ಇದಲ್ಲದೆ, ಇದನ್ನು ಸೆಂಟ್ರಲ್ ಸ್ಟೋರ್‌ನಲ್ಲಿಯೂ ಖರೀದಿ ಮಾಡಬಹುದು.
ಮೊಬೈಲ್ ವ್ಯಾನ್ ಮೂಲಕವೂ ಲಭ್ಯ :
ಸರ್ಕಾರ ಮೊಬೈಲ್ ವ್ಯಾನ್ ಮೂಖಾಂತರ ಈ ಅಕ್ಕಿಯನ್ನು ಮಾರಾಟ ಮಾಡುತ್ತದೆ. ಸಹಕಾರಿ ಸಂಸ್ಥೆಗಳಲ್ಲದೆ, ಭಾರತ್ ಗೋಧಿಹಿಟ್ಟು, 2,000 ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಾಗುತ್ತದೆ. ಅದರ ಹೊರತಾಗಿ ಮದರ್ ಡೈರಿ, ಸಫಲ್ ಮುಂತಾದ ಮಳಿಗೆಯಿಂದಲೂ ಖರೀದಿ ಮಾಡಬಹುದು.
ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದೇ?:
ಪ್ರಸ್ತುತ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಸೌಲಭ್ಯವಿದೆ. ಭಾರತ್ ಬ್ರಾಂಡ್ ಅಕ್ಕಿಯನ್ನು ಸರ್ಕಾರ ಶೀಘ್ರದಲ್ಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಮಾಡತ್ತದೆ. ಭಾರತ್ ರೈಸ್ ಹೊರತುಪಡಿಸಿ, ಭಾರತ್ ಹಿಟ್ಟನ್ನು KGಗೆ 27.50 ರೂ.ಗೆ ಖರೀದಿಸಬಹುದಾಗಿದೆ. ಭಾರತ್ ದಾಲ್‌ನಿಂದ ಬೇಳೆ ಕಾಳುಗಳನ್ನು KGಗೆ 60 ರೂ.ನಂತೆ ಖರೀದಿ ಮಾಡಬಹುದಾಗಿದೆ.
ಇತರೆ ವಿಷಯಗಳು
ರೇಷನ್ ಕಾರ್ಡ ತಿದ್ದುಪಡಿ ಆರಂಭ.! ಇಂದು & ನಾಳೆ ಈ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ
ಮಹಿಳೆಯರಿಗಾಗಿ ಸರ್ಕಾರದ ಉಚಿತ ಹೊಲಿಗೆ ಯಂತ್ರ ಯೋಜನೆ! ಡೈರೆಕ್ಟ್ ಲಿಂಕ್ ಇಲ್ಲಿದೆ