ನಮಸ್ಕಾರ ಸ್ನೇಹಿತರೇ, ಪ್ರಸಕ್ತ 2023-24 ಸಾಲಿನಲ್ಲಿ ಹಾಲು ಉತ್ಪಾದಕರ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಒಂದಾದ ಮಿಶ್ರತಳಿ ಹಸು ಘಟಕಗಳ ಸ್ಥಾಪನೆಗೆ ಅರ್ಹ ಫಲಾನುಭವಿಗಳಿಗೆ ಅರ್ಜಿ ಸಲ್ಲಿಕೆಯನ್ನು ಪ್ರಾರಂಭಿಸಿದೆ ಈ ಯೋಜನೆಯಡಿ ನೀವು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುವುದು ಹೇಗೆ ಎನ್ನುವುದನ್ನು ನಾವು ಈ ಮೂಲಕ ತಿಳಿಸಿಕೊಡಲಿದ್ದೇವೆ, ಇದಕ್ಕಾಗಿ ನೀವು ಈ ಲೇಖನವನ್ನು ಕೊನೆವರೆಗೂ ತಪ್ಪದೇ ಓದಿ.
ಒಂದು ಮಿತ್ರ ತಳಿ ಹಸು ಘಟಕದಲ್ಲಿ ಹಸುವನ್ನು ಖರೀದಿಸಲು 65 ಸಾವಿರ ರೂ. ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಕೇವಲ 58,500 ರೂ. (ಶೇ.90) ಸಹಾಯಧನ ಒದಗಿಸಗುತ್, ಸಹಾಯ ಧನ (ಶೇ.10)ರಷ್ಟು 65 ಸಾವಿರ ರೂ. ಗಳ ಫಲಾನುಭವಿಗಳ ವಂತಿಕೆ ಅಥವಾ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು:
ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರನ್ನು ಆಯ್ಕೆ ಮಾಡಲಾಗುವುದು. ಅರ್ಜಿದಾರರು ಫ್ರೂಟ್ಸ್ ಗುರುತಿನ ಸಂಖ್ಯೆ ಹೊಂದಿರಬೇಕು. ಆಯ್ಕೆಯಾದ ಫಲಾನುಭವಿಗಳು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸದಸ್ಯರಾಗಿರಲೇಬೇಕು ಅಥವಾ ಸದಸ್ಯತ್ವ ಕಡ್ಡಾಯವಾಗಿ ಪಡೆದಿರಬೇಕು. ಆಯ್ಕೆಗೊಂಡ ಫಲಾನುಭವಿ ಸ್ವತ್ತು ಪಡೆದ ನಂತರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಡ್ಡಾಯವಾಗಿ ಹಾಲು ಪೂರೈಸುವ ಷರತ್ತಿಗೆ ಒಳಪಟ್ಟು ಮುಚ್ಚಳಿಕೆ ಪತ್ರವನ್ನು ವ್ಯವಸ್ಥಾಪಕರು/ಪ್ರತಿನಿಧಿಯವರಿಂದ ದೃಢೀಕರಿಸಿ ಸಲ್ಲಿಸಿರ ಬೇಕು.
ಆರ್‌ಬಿಐ ಹೊಸ ರೂಲ್ಸ್ ಜಾರಿ.!! ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ; ಇಂದೇ ಚೆಕ್ ಮಾಡಿ
ಕಳೆದ 5 ವರ್ಷದಲ್ಲಿ ಪಶುಪಾಲನಾ ಇಲಾಖೆಯಲ್ಲಿ ವಿವಿಧ ಯೋಜನೆಗಳಲ್ಲಿ ಹೈನುಗಾರಿಕೆಗೆ ಸಹಾಯಧನ ಸವಲತ್ತು ಪಡೆದಿರುವ ಕುಟುಂಬಗಳು ಈ ಯೋಜನೆಯ ಸಂಪೂರ್ಣ ಲಾಭ ಪಡೆಯಲು ಅರ್ಹರಾಗಿರುವುದಿಲ್ಲ. ಸರ್ಕಾರದ ನಿಯಮದಂತೆ ಮಹಿಳೆಯರಿಗೆ ಶೇ.33 ರಷ್ಟು ಮತ್ತು ವಿಶೇಷ ಚೇತನರಿಗೆ ಶೇ.3 ರಷ್ಟು ಆದ್ಯತೆಯನ್ನು ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಆರ್ಡಿ ಸಂಖ್ಯೆ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ವಿಶೇಷ ಚೇತನರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರವನ್ನು ಇಲ್ಲಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಡಿ.05 ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ತಾಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಮತ್ತು ಮುಖ್ಯ ಪಶುವೈದ್ಯಾಧಿಕಾರಿಗಳು ಮತ್ತು ಬಳ್ಳಾರಿ, ಸಿರುಗುಪ್ಪ, ಸಂಡೂರು, ಕುರುಗೋಡು, ಕಂಪ್ಲಿ ತಾಲ್ಲೂಕುಗಳ ಪಶು ಆಸ್ಪತ್ರೆಯ ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಉಪನಿರ್ದೇಶಕ ಡಾ.ಎಂ.ಸಿ.ವಿನೋದ್ ಕುಮಾರ್ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.