ಹಲೋ ಸ್ನೇಹಿತರೇ, ಬಡ ವಿದ್ಯಾರ್ಥಿಗಳು ತಮ್ಮ ಮೆಟ್ರಿಕ್ ನಂತರದ ಶಿಕ್ಷಣವನ್ನು ಮುಂದುವರೆಸಲು ವಿದ್ಯಾರ್ಥಿವೇತನವನ್ನು ಪಡೆಯಲು ಅವಕಾಶವಿದೆ. ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 1,500 ರೂ. ಪಡೆಯಬಹುದು. ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ..
ವಿದ್ಯಾಸಿರಿ ವಿದ್ಯಾರ್ಥಿ ವೇತನ!
2023 ಜೂನ್ ತಿಂಗಳಿನಿಂದ 2024 ಮಾರ್ಚ್ ತಿಂಗಳವರೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿದ್ಯಾಸಿರಿ ಸ್ಕಾಲರ್ಶಿಪ್ ನೀಡಲಾಗುವುದು. ವಿದ್ಯಾರ್ಥಿಗಳು ಪ್ರತಿ ತಿಂಗಳು 1,500 ರೂ., ವರ್ಷಕ್ಕೆ 15,000 ತಮ್ಮ ಹಾಸ್ಟೆಲ್ ಖರ್ಚು ವೆಚ್ಚವಾಗಿ ಪಡೆದುಯಬಹುದು. ಈ ಹಣವನ್ನು ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಯಾರಿಗೆ ಸಿಗಲಿದೆ ವಿದ್ಯಾರ್ಥಿ ವೇತನ!
ಸರ್ಕಾರಿ & ಖಾಸಗಿ ಅನುದಾನಿತ ವಿದ್ಯಾರ್ಥಿ ನಿಲಯದಲ್ಲಿ ಉಳಿಯಲು ಅವಕಾಶ ಸಿಗದೇ ಇರುವ ವಿದ್ಯಾರ್ಥಿಗಳು ತಮ್ಮ ತಿಂಗಳ ಖರ್ಚು ವೆಚ್ಚಕ್ಕಾಗಿ 15,000 ರೂ ವಾರ್ಷಿಕ (10 ತಿಂಗಳಿಗೆ) ವಿದ್ಯಾರ್ಥಿವೇತನ ಪಡೆದುಕೊಳ್ಳಬಹುದು.
ಆದರೆ ಹಿಂದುಳಿದ ವರ್ಗದ ವಿದ್ಯಾರ್ಥಿಯಾಗಿರಬೇಕು. SC/ST ಮೊದಲಾದ ಮೀಸಲಾತಿ ಪಡೆದುಕೊಂಡವರಾಗಿರಬೇಕು.
ಭಾರತದ ನಿವಾಸಿ ಆಗಿರಬೇಕು & ಕರ್ನಾಟಕದ ಕಾಯಂ ವಾಸಿಯಾಗಿರಬೇಕು.
ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ವರಮಾನ 1 ಲಕ್ಷ ಮೀರರಬಾರದು. ಪ್ರವರ್ಗ 1 ಅಡಿಯಲ್ಲಿ ಬರುವ ವಿದ್ಯಾರ್ಥಿಗಳ ಕುಟುಂಬದ ವರಮಾನ 2.50 ಲಕ್ಷ ಕ್ಕಿಂತ ಹೆಚ್ಚಿಗೆ ಇರಬಾರದು.
ಕರ್ನಾಟಕದಲ್ಲಿ ಕನಿಷ್ಠ 7 ವರ್ಷ ವಿದ್ಯಾಭ್ಯಾಸ ಮಾಡಿರತಕ್ಕದು 75% ಗಿಂತ ಹೆಚ್ಚಿನ ಹಾಜರಾತಿ ಪಡೆದಿರಬೇಕು.
ಮೆಟ್ರಿಕ್ ನಂತರದ ಕೋರ್ಸುಗಳಿಗೆ ಸೇರೋದಕ್ಕೆ ದಾಖಲಾತಿ ನೀಡಬೇಕು.
ವಿದ್ಯಾರ್ಥಿ ಮೆಟ್ರಿಕ್ ನಂತರದ ಕೋರ್ಸ್ ತೆಗೆದುಕೊಂಡರೆ, ವಸತಿ & ಊಟ ವೆಚ್ಚ/ಅಥವಾ ಮೆಟ್ರಿಕ್ ನಂತರದ ವಿದ್ಯಾಭ್ಯಾಸದ ಖರ್ಚು ಈ 2 ಖರ್ಚುಗಳಲ್ಲಿ ಯಾವುದಾದರೂ ಒಂದಕ್ಕೆ ಹಣಕಾಸಿನ ಸಹಾಯ ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ನಿವಾಸಿಯಾಗಿರಬೇಕು ತಾವು ವಿದ್ಯಾಭ್ಯಾಸ ಮಾಡುತ್ತಿರುವ ಶಿಕ್ಷಣ ಸಂಸ್ಥೆಯಿಂದ 5 ಕಿಲೋಮೀಟರ್ ಒಳಗಿನ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
- 10ನೇ ತರಗತಿಯ ಮಾರ್ಕ್ಸ್ ಕಾರ್ಡ್ .
- ಪಿಯುಸಿ ಹಾಗೂ ಪದವಿ ಸೆಮಿಸ್ಟರ್ ಅಂಕಪಟ್ಟಿ.
- ಶಾಲಾ ಶುಲ್ಕ ರಶೀದಿ.
- ಬ್ಯಾಂಕ್ ಖಾತೆಯ ವಿವರ .
- ಆಧಾರ್ ಕಾರ್ಡ್.
- ಪಾಸ್ ಪೋರ್ಟ್ ಅಳತೆಯ ಫೋಟೋಗಳು.
- ಜಾತಿ ಪ್ರಮಾಣ ಪತ್ರ .
- ಆದಾಯ ಪ್ರಮಾಣ ಪತ್ರ .
ವಿದ್ಯಾಸಿರಿ ವಿದ್ಯಾರ್ಥಿ ವೇತನ ಪಡೆದುಕೊಳ್ಳುವ ಅರ್ಜಿ ಸಲ್ಲಿಸುವುದು ಹೇಗೆ?
https://ssp.postmatric.karnataka.gov.in/ ಎಸ್ ಎಸ್ ಬಿ ವೆಬ್ಸೈಟ್ ಗೆ ಭೇಟಿ ಮಾಡಿ ಅಲ್ಲಿ ನೀಡಲಾದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಲಗ್ಗತ್ತಿಸಿ . ನಿಮ್ಮ ಹಾಗೂ ನಿಮ್ಮ ಪಾಲಕರ ಬಗೆಗಿನ ಎಲ್ಲಾ ಮಾಹಿತಿಗಳು ಸರಿಯಾಗಿ ಇದ್ದರೆ ನಿಮಗೆ ಸುಲಭವಾಗಿ ವಿದ್ಯಾಸಿರಿ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
ಇತರೆ ವಿಷಯಗಳು
ಬೀದಿ ಬದಿ ವ್ಯಾಪಾರಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್! ಯಾವುದೇ ಬಡ್ಡಿ ಇಲ್ಲದೇ ₹50,000 ಸಾಲ ಸೌಲಭ್ಯ
ಅನ್ನ ಭಾಗ್ಯ ಯೋಜನೆಗೆ ಬಿಗ್ ಟ್ವಿಸ್ಟ್.!! ರಾತ್ರೋರಾತ್ರಿ ಬದಲಾಯ್ತು ಈ ನಿಯಮ