rtgh

ವಾಟ್ಸ್​ಆ್ಯಪ್ ಬಳಕೆಗೆ ಇನ್ಮುಂದೆ ಶುಲ್ಕ.! ಇಂದಿನಿಂದಲೇ ಹೊಸ ರೂಲ್ಸ್‌ ಜಾರಿ

ಹಲೋ ಸ್ನೇಹಿತರೇ, ಮೆಟಾ ಮಾಲೀಕತ್ವದ ನಂಬರ್ ಒನ್ ಅಪ್ಲಿಕೇಷನ್ ತನ್ನ ಬಳಕೆದಾರರಿಗೆ ಅಗತ್ಯ ಫೀಚರ್​ಗಳನ್ನು ಪರಿಚಯಿಸಿ ಮೆಚ್ಚಿನ ಆ್ಯಪ್‌ ಆಗಿದೆ. ಕೋಟಿಗಟ್ಟಲೆ ಜನರು ವಾಟ್ಸ್​ಆ್ಯಪ್ ಉಪಯೋಗಿಸುತ್ತಿದ್ದಾರೆ. ಹೀಗಿರುವಾಗ ವಾಟ್ಸ್​ಆ್ಯಪ್​ ಈಗ ಶಾಕಿಂಗ್ ಸುದ್ದಿಯನ್ನು ನೀಡಿದೆ ಏನದು ಶಾಕಿಂಗ್‌ ಸುದ್ದಿ ಎಂಬುದನ್ನು ತಿಳಿಯಿರಿ.

Whatsapp new update

ಆಂಡ್ರಾಯ್ಡ್ ವಾಟ್ಸ್​ಆ್ಯಪ್​ ಬಳಕೆದಾರರು ತಮ್ಮ ಚಾಟ್ ಬ್ಯಾಕಪ್ ಡೇಟಾವನ್ನು ಗೂಗಲ್ ಡ್ರೈವ್‌ನಲ್ಲಿ ಸೇವ್ ಮಾಡಿಕೊಳ್ಳುತ್ತಿದ್ದಾರೆ. ಈ ಸೇವೆಯು ಸದ್ಯಕ್ಕೆ ಉಚಿತವಾಗಿದ್ದು. ಆದರೆ, ಕಂಪನಿಯು ಇನ್ನು ಮುಂದೆ ಅಂದರೆ 2024 ರಿಂದ ಗೂಗಲ್ ಡ್ರೈವ್‌ನಲ್ಲಿ ಉಚಿತ ಅನಿಯಮಿತ ಬ್ಯಾಕಪ್‌ಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.

ಇನ್ನು ಮುಂದೆ ವಾಟ್ಸ್​ಆ್ಯಪ್​ ಬ್ಯಾಕ್‌ಅಪ್‌ಗಳು ಸೀಮಿತ ಸಂಗ್ರಹಣೆಗೆ ಕೋಟಾವನ್ನು ಪಡೆಯುತ್ತವೆ. ಗೂಗಲ್ ಡ್ರೈವ್‌ನಲ್ಲಿ ಒದಗಿಸಲಾದ 15GB ಸಂಗ್ರಹದ ಮಿತಿಯನ್ನು ಮಾತ್ರ ಉಚಿತವಾಗಿ ನೀಡಲಾಗುವುದು. ಇನ್ನಷ್ಟು ಸ್ಟೋರೇಜ್ ಹೆಚ್ಚಿಸಬೇಕಾದರೆ ಹಣ ಕೊಡಬೇಕಾಗುತ್ತದೆ. ಚಾಟ್ ಬ್ಯಾಕ್‌ಅಪ್‌ ಗೂಗಲ್ ಡ್ರೈವ್‌ನಲ್ಲಿ ಜಾಗವನ್ನು ನಿಗದಿಪಡಿಸುವ ರೂಲ್ಸ್ 2024 ರ ಆರಂಭದಿಂದ ಜಾರಿಗೆ ಬರುತ್ತದೆ. ಆಂಡ್ರಾಯ್ಡ್ ಬೀಟಾ ಆವೃತ್ತಿ 2.23.26.7 ರಲ್ಲಿ ಇದರ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.

ಬಳಕೆದಾರರು ಎಷ್ಟು ಸ್ಟೋರೇಜ್ ಬಳಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದರೆ, ನೀವು ವಾಟ್ಸ್​ಆ್ಯಪ್​ ಸೆಟ್ಟಿಂಗ್‌ಗಳಲ್ಲಿ ಸ್ಟೋರೇಜ್ ಆಯ್ಕೆಯನ್ನು ಪರಿಶೀಲಿಸಬಹುದು. ಚಾಟ್ ಬ್ಯಾಕಪ್ ಸಂಗ್ರಹಣೆಗೆ ಎಷ್ಟು ಶುಲ್ಕ ವಿಧಿತ್ತದೆ ಎಂಬುದರ ಕುರಿತು ವಾಟ್ಸ್​ಆ್ಯಪ್​ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಈ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡಲಿದೆಯಂತೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ.! ರಾಜ್ಯಾದ್ಯಂತ ಶೀತಗಾಳಿ 22ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಜ. 9ರ ವರೆಗು ಮಳೆ


ಶಾಲಾ ರಜೆ ಮತ್ತೆ ಮುಂದೂಡಿಕೆ! ಜಿಲ್ಲಾ ಶಿಕ್ಷಣಾಧಿಕಾರಿಗಳಿಂದ ಆದೇಶ

Leave a Comment