rtgh

ಫ್ರೀ ಕರೆಂಟ್‌ ಪಡೆದವರಿಗೆ ಶಾಕಿಂಗ್‌ ನ್ಯೂಸ್.!! ಇನ್ಮುಂದೆ ಈ ನಿಯಮ ಪಾಲಿಸುವುದು ಕಡ್ಡಾಯ

ಹಲೋ ಸ್ನೇಹಿತರೇ, ಈ ಬಾರಿ ಮಳೆಯ ಕೊರತೆ ರೈತರ ಬೆಳೆಗಳಿಗೆ ತೊಂದರೆ ಮಾಡಿರುವುದು ಮಾತ್ರ ಅಲ್ಲದೆ, ರಾಜ್ಯದಲ್ಲಿ ಜನರ ಬೇಡಿಕೆಗೆ ತಕ್ಕ ಹಾಗೆ ವಿದ್ಯುತ್ ಉತ್ಪಾದನೆ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ.

gruha jothi scheme big update

ಅದು ಅಲ್ಲದೆ ಸರ್ಕಾರ ಈಗಾಗಲೇ ಗೃಹಜ್ಯೋತಿ ಯೋಜನೆಯಡಿಯಲ್ಲಿ ಉಚಿತ ವಿದ್ಯುತ್ ಅನ್ನು ಕೂಡ ನೀಡುತ್ತಿದೆ, ಇದರಿಂದ ಲಕ್ಷಾಂತರ ಕುಟುಂಬಗಳಿಗೆ ಪ್ರಯೋಜನ ಆಗಿದೆ ನಿಜ. ಆದರೆ ಇದೇ ಉಚಿತ ಯೋಜನೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ಕಗ್ಗಂಟಾಗಿದೆ.

ಸಹಾಯಧನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ವಿದ್ಯುತ್ ಕಂಪನಿಗಳ ಮನವಿ

ಮೆಸ್ಕಾಂ, ಬೆಸ್ಕಾಂ, ಜೆಸ್ಕಾಂ, ಎಸ್ಕಾಂ ಮೊದಲಾದ ವಿದ್ಯುತ್ ಸರಬರಾಜು ಕಂಪನಿಗಳು ಸರ್ಕಾರಕ್ಕೆ ಒಟ್ಟು 6242.53 ಕೋಟಿ ರೂಪಾಯಿಗಳ ಸಹಾಯಧನ ನೀಡುವಂತೆ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹಣಕಾಸು ಇಲಾಖೆಯ ಆಯವ್ಯಯ ಹಂಚಿಕೆಯಲ್ಲಿ ವಿದ್ಯುತ್ ಸರಬರಾಜು ಕಂಪನಿ ಗಳಿಗೆ ಸಹಾಯಧನ ಮೀಸಲಿಡಬೇಕು ಎಂದು ಮನವಿ ಮಾಡಲಾಗಿದೆ.

ಆರ್ಥಿಕ ಇಲಾಖೆಗೆ ಹೊರೆಯಾದ ವಿದ್ಯುತ್ ಸರಬರಾಜು ಕಂಪನಿಗಳ ಬೇಡಿಕೆ

ಸರ್ಕಾರ ಈಗಾಗಲೇ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ. ಇದಕ್ಕಾಗಿ ಸರ್ಕಾರವು ವಿದ್ಯುತ್ ಸರಬರಾಜು ಮಾಡುವ ಕಂಪನಿಗಳಿಗೆ ಹಣ ನೀಡಬೇಕು. ಇದರ ಜೊತೆಗೆ ರೈತರ ಜಮೀನುಗಳಿಗೆ ಮಾತ್ರ ಪಂಪ್ ಸೆಟ್ ಮೂಲಕ ವಿದ್ಯುತ್ ಸರಬರಾಜು, ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, 10 ಹೆಚ್ಚು ವರೆಗಿನ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಅನುಕೂಲವಾಗುವಂತೆ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಒದಗಿಸಲು 6242.53 ಕೋಟಿ ರೂಪಾಯಿಗಳ ಸಹಾಯಧನವನ್ನು ಆರ್ಥಿಕ ಇಲಾಖೆ ಒದಗಿಸಲು ಸಾಧ್ಯವಾಗದೆ ಕಂಗಾಲಾಗಿದೆ.

SSLC ಪಾಸಾದವರಿಗೆ ಬ್ಯಾಂಕ್ ಉದ್ಯೋಗಾವಕಾಶ: ರೂ 28,000 ವರೆಗೆ ಸಂಬಳ


ಅಯವ್ಯಯ ಹಂಚಿಕೆಯ ಅನುದಾನದಲ್ಲಿ ವಿದ್ಯುತ್ ಸರಬರಾಜು ಕಂಪನಿಗೆ ಸಹಾಯಧನ ನೀಡುವ ಬಗ್ಗೆ ಕಂಪನಿಗಳು ಮನವಿ ಸಲ್ಲಿಸಿರುವ ಬಗ್ಗೆ ಆರ್ಥಿಕ ಇಲಾಖೆಯು ಲಿಖಿತ ರೂಪದಲ್ಲಿ ಮಾಹಿತಿಯನ್ನು ನೀಡಿದೆ.

ಉಚಿತ ವಿದ್ಯುತ್ ಯೋಜನೆಗಾಗಿ ಕೋಟ್ಯಂತರ ರೂಪಾಯಿ ಹಣ

2023 24ನೇ ಸಾಲಿನಲ್ಲಿ ಉಚಿತ ವಿದ್ಯುತ್ ಯೋಜನೆಯು ಪಂಪ್ಸೆಟ್ ಗಳಿಗೆ ವಿದ್ಯುತ್ ಮತ್ತು ಕುಟೀರ ಜ್ಯೋತಿ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ 13,143 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಆದ್ರೆ 2023ರ ಆರ್ಥಿಕ ವರ್ಷದಲ್ಲಿ ವಿದ್ಯುತ್ ವೆಚ್ಚಕ್ಕಾಗಿ ಒಟ್ಟು 14803.53 ಕೋಟಿ ರೂಪಾಯಿಗಳ ಬೇಡಿಕೆ ಇದೆ ಎನ್ನುವ ಮಾಹಿತಿಯು ಲಭ್ಯವಾಗಿದೆ.

ಏಪ್ರಿಲ್ ನಿಂದ ನವೆಂಬರ್ 2023ರ ವರೆಗೆ ಕೂಡ ಬೇಡಿಕೆ ಇದ್ದ 14,803 ಕೋಟಿ ರೂಪಾಯಿಗಳಲ್ಲಿ ಮುಂಗಡ ಹಣ 2000ಗಳನ್ನು ಹೊರತುಪಡಿಸಿ 8,561 ಕೋಟಿ ರೂಪಾಯಿಗಳ ಸಹಾಯಧನ ಮತ್ತು ಹೆಚ್ಚುವರಿ ವಿದ್ಯುತ್ ಬೇಡಿಕೆಯಿಂದಾಗಿ ಅದನ್ನು ಒದಗಿಸಲು 6,242 ಕೋಟಿ ರೂಪಾಯಿಗಳ ಸಹಾಯಧನವನ್ನು ಒದಗಿಸಲು ಬೇಡಿಕೆಯನ್ನು ಇಡಲಾಗಿದೆ.

ಆಯವ್ಯಯದಲ್ಲಿ ಹಂಚಿಕೆಯಾಗುವ ಅನುದಾನಕ್ಕೆ ಸಹಾಯಧನವನ್ನು ಸೀಮಿತಗೊಳಿಸಲು ಆರ್ಥಿಕ ಇಲಾಖೆ ನಿರ್ಧರಿಸಿದೆ. ಇದರಿಂದಾಗಿ ವಿದ್ಯುತ್ ಸರಬರಾಜು ಕಂಪನಿಗಳು ಕೇಳಿದಷ್ಟು ಹಣವನ್ನು ಸಹ ಸಹಾಯಧನವಾಗಿ ನೀಡಲು ಸರ್ಕಾರವು ಒಪ್ಪಿಗೆ ಸೂಚಿಸಿಲ್ಲ. ಇದರಿಂದಾಗಿ ಗ್ರಾಹಕರಿಗೆ ಸಿಗುತ್ತಿರುವ ವಿದ್ಯುತ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಪಿಎಂ ಕಿಸಾನ್‌ 16 ನೇ ಕಂತು ಬಿಗ್‌ ಅಪ್ಡೇಟ್! ರೈತರಿಗೆ ದುಪ್ಪಟ್ಟು ಹಣ 2000 ಅಲ್ಲ 4000 ರೂ.

ಹಿರಿಯ ನಾಗರಿಕರಿಗೆ ಪಿಂಚಣಿ ಪಾವತಿ ವಿಧಾನದಲ್ಲಿ ಬದಲಾವಣೆ! ಇವರಿಗೆ ಮಾತ್ರ ಸಿಗಲಿದೆ ಈ ತಿಂಗಳ ಹಣ

Leave a Comment